ಮಹಾದೇವಸ್ವಾಮಿ ಅಧ್ಯಕ್ಷ, ಶಿವಪ್ರಸಾದ್ ಉಪಾಧ್ಯಕ್ಷ
ವಿಕ ಸುದ್ದಿಲೋಕ ಚಾಮರಾಜನಗರ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕಕ್ಕೆ 2026-31ನೇ ಸಾಲಿಗೆ ನಡೆದ ಚುನಾವಣೆಯಲ್ಲಿನೂತನ ಜಿಲ್ಲಾಧ್ಯಕ್ಷರಾಗಿ ಮಹಾದೇವಸ್ವಾಮಿ, ಪ್ರಧಾನ ಕಾರ ್ಯದರ್ಶಿಯಾಗಿ ಕೆ.ಎಸ್ .ಮಾದಪ್ಪ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಅವರು ಬಹುಮತದಿಂದ ಆಯ್ಕೆಯಾದರು.
ನಗರ ಜಿಲ್ಲಾಡಳಿತ ಭವನದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು, ಜಿಲ್ಲಾಪ್ರಧಾನ ಕಾರ ್ಯದರ್ಶಿ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ, ಮಲ್ಲಿಕಾರ್ಜುನ, ಜಿಲ್ಲಾಪ್ರಧಾನ ಕಾರ ್ಯದರ್ಶಿ ಸ್ಥಾನಕ್ಕೆ ಕೆ.ಎನ್ .ಮಾದಪ್ಪ, ನಟರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ರಸಾದ್ , ಆನಂದ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿಮಹದೇವಸ್ವಾಮಿ ಅವರಿಗೆ 30 ಮತಗಳು, ಮಲ್ಲಿಕಾರ್ಜುನ 8 ಮತಗಳು, ಕೆ.ಎಸ್ .ಮಾದಪ್ಪ 28 ಮತಗಳು, ನಟರಾಜು 10 ಮತಗಳು, ಶಿವಪ್ರಸಾದ್ 30 ಮತಗಳು, ಆನಂದ್ ಕುಮಾರ್ 8 ಮತಗಳು ದೊರಕಿದೆ. ಚುನಾವಣಾಧಿಕಾರಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟೀಲ್ ಅವರು ಚುನಾವಣೆ ಕಾರ ್ಯನಿರ್ವಹಿಸಿದರು.
ಮಹಿಳಾ ಉಪಾಧ್ಯಕ್ಷರಾಗಿ ಭವಾನಿದೇವಿ, ಖಜಾಂಚಿ ನಂದೀಶ್ , ಸಹ ಕಾರ ್ಯದರ್ಶಿಗಳಾಗಿ ಉಮೇಶ್ , ಸಂಘಟನಾ ಕಾರ ್ಯದರ್ಶಿಯಾಗಿ ಶಿವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ, ಜಿಲ್ಲಾಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಪದಾಧಿಕಾರಿಗಳು ಸನ್ಮಾನಿಸಿದರು.
ಶಿಕ್ಷಕರ ಹಿತ ಕಾಯಲು ಶ್ರಮಿಸುವೆ:
ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಮಹಾದೇವಸ್ವಾಮಿ ಮಾತನಾಡಿ, ‘‘ನಮ್ಮ ತಂಡಕ್ಕೆ ಮತ ಹಾಕಿ ಗೆಲ್ಲಿಸಿದ ಜಿಲ್ಲೆಯ ಸಮಸ್ತ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇವೆ. ಶಿಕ್ಷಕರ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿಸಂಘ ಶ್ರಮಿಸುತ್ತದೆ. ಸಂಘದ ಪದಾಧಿಕಾರಿಗಳು ಹಾಗೂ ಎಲ್ಲರೂ ಸೇರಿ ಜಿಲ್ಲೆಯಲ್ಲಿಉತ್ತಮ ಕಾರ ್ಯ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ. ಶೈಕ್ಷಣಿಕ ಕಾರ ್ಯಕ್ರಮ, ಕಾರ ್ಯಗಾರಗಳು ಹಾಗೂ ಜಿಲ್ಲೆಯಲ್ಲಿಗುರುಭವನ, ಜಿಲ್ಲೆಯ ತಾಲೂಕುಗಳಲ್ಲಿಗುರುಭವನ ಮಾಡುವ ಸಂಕಲ್ಪ ಮಾಡಲಾಗಿದೆ,’’ ಎಂದರು.
ಈ ಸಂದರ್ಭದಲ್ಲಿಚಾಮರಾಜನಗರ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ ್ಯದರ್ಶಿ ಸುಧಾ, ಕೊಳ್ಳೇಗಾಲ ಅಧ್ಯಕ್ಷೆ ಸವಿತಾ, ಕಾರ ್ಯದರ್ಶಿ ನಾಗೇಶ್ , ಹನೂರು ಅಧ್ಯಕ್ಷ ಮಾದೇಶ್ , ಪದಾಧಿಕಾರಿಗಳಾದ ಭರತ್ ಭೂಷಣ್ , ಕೃಷ್ಣಮೂರ್ತಿ, ಮಹಮ್ಮದ್ ಸಮೀವುಲ್ಲಾ, ಶಿವಶಂಕರ್ , ಧನಂಜಯ್ , ಪುಟ್ಟಮಾದಮ್ಮ, ಗಿರೀಶ್ ಸೇರಿದಂತೆ ಇತರರು ಹಾಜರಿದ್ದರು.
----
ಸಿಎಚ್ ಎನ್ 23ಎಸ್ ಎಂಆರ್ 6
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ ಜಿಲ್ಲಾಘಟಕದ ಚುನಾವಣೆಯಲ್ಲಿಜಯಗಳಿಸಿದ ನೂತನ ಜಿಲ್ಲಾಧ್ಯಕ್ಷ ಮಹಾದೇವಸ್ವಾಮಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಕೆ.ಎಸ್ .ಮಾದಪ್ಪ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

