(ಶಿರಸಿ) ರೋಟರಿ ನೆರವಿಗೆ ಶಾಸಕ ಶ್ಲಾಘನೆ ಮಹಿಳೆಯರು ಸ್ವಾವಲಂಬಿಯಾಗಲು ರೋಟರಿ

Contributed bykeregaddemurthy@gmail.com|Vijaya Karnataka

ಶಿರಸಿಯಲ್ಲಿ ರೋಟರಿ ಕ್ಲಬ್‌ ಮಹಿಳೆಯರ ಸ್ವಾವಲಂಬನೆಗೆ ನೆರವಾಗಿದೆ. ಹೊಲಿಗೆ ತರಬೇತಿ ಪಡೆದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಶಾಸಕ ಭೀಮಣ್ಣ ನಾಯ್ಕ ಅವರು ರೋಟರಿ ಕ್ಲಬ್‌ನ ಕಾರ್ಯವನ್ನು ಶ್ಲಾಘಿಸಿದರು. ಇದು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ. ರೋಟರಿ ಕ್ಲಬ್‌ ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆಯಲ್ಲೂ ಕೆಲಸ ಮಾಡುತ್ತಿದೆ.

shirsi rotary receives appreciation from mla for supporting women

ರೋಟರಿ ನೆರವಿಗೆ ಶಾಸಕ ಶ್ಲಾಘನೆ

ವಿಕ ಸುದ್ದಿಲೋಕ ಶಿರಸಿ

ಮಹಿಳೆಯರು ಸ್ವಾವಲಂಬಿಯಾಗಲು ರೋಟರಿ ಕ್ಲಬ್ ನೆರವಾಗಿದ್ದು ಅಭಿನಂದನೀಯ. ಇದರಿಂದ ಮಾತೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವ ಜೊತೆಗೆ ಕುಟುಂಬಕ್ಕೆ ಆರ್ಥಿಕ ಚೈತನ್ಯ ತುಂಬಲಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಮಂಗಳವಾರ ನಗರದ ಪೂಗ ಭವನದಲ್ಲಿಇಲ್ಲಿನ ರೋಟರಿ ಕ್ಲಬ್ ಹಾಗೂ ರೋಟರಿ ಸೇವಾ ಪ್ರತಿಷ್ಠಾನ ಹಮ್ಮಿಕೊಂಡ 100 ಹೊಲಿಗೆ ಯಂತ್ರವನ್ನು ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ವಿತರಿಸಿ ಮಾತನಾಡಿದರು.

‘‘ ಶಿರಸಿ ರೋಟರಿ ಕ್ಲಬ್ ರಾಜ್ಯದಲ್ಲಿಮಾದರಿಯಾಗಿದ್ದು, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ಸಾಮಾಜಿಕ ಪರಿವರ್ತನೆಯ ಉದ್ದೇಶದಲ್ಲಿಕೆಲಸ ಮಾಡುತ್ತಿದೆ. ಅದು ಉಳಿದ ಸಂಸ್ಥೆಗಳೂ ಸಹ ಅನುಸರಿಸಬೇಕಾದ ಕಾರ್ಯ.

ಎಸ್ಸೆಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಾಯ ಮಾಡಿದ ಶಿಕ್ಷಣ ಸಿರಿ ತುಂಬಾ ಉತ್ತಮ ಕಾರ್ಯ ಆಗಿದೆ. ರೋಟರಿ ನೆರವಿನ ಈ ಕಾರ್ಯಕ್ರಮ ಮಕ್ಕಳ ಶೈಕ್ಷಣಿಕ ಫಲಿತಾಂಶಕ್ಕೆ ಸಹಕಾರಿ ಆಗಿದೆ’’ ಎಂದೂ ಬಣ್ಣಿಸಿದರು.

‘‘ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ನಾಯ್ಕ, ರೋಟರಿ ಕ್ಲಬ್ ನಿಂದ ಎಲ್ಲಸರಕಾರಿ ಅಂಗನವಾಡಿ ಮಕ್ಕಳಿಗೆ ಆಸನ ವ್ಯವಸ್ಥೆಗೆ ಖುರ್ಚಿ ಒದಗಿಸುವ ಮಹತ್ವಕಾಂಕ್ಷಿ ಯೋಜನೆ ಜಾರಿಗೊಳಿಸಲು ಯೋಜಿಸಿದ್ದೇವೆ. ಈಗ ಹೊಲಿಗೆ ಯಂತ್ರದ ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕು’’ ಎಂದರು.

ಹೊಲಿಗೆ ತರಬೇತಿದಾರರಾದ ಶ್ರೀಕಲಾ ನಾಯ್ಕ ಹೊಲಿಗೆ ಯಂತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ.ದಿನೇಶ ಹೆಗಡೆ, ಇನ್ನರವೀಲ್ ಕಾರ್ಯದರ್ಶಿ ಸಂಧ್ಯಾ ನಾಯ್ಕ, ಸತೀಶ ಭಟ್ಟ ನಾಡಗುಳಿ, ವಿನಾಯಕ ಶೇಟ್ ಇತರರು ಇದ್ದರು.

ಪ್ರೊ ಕೆ.ಎನ್ .ಹೊಸ್ಮನಿ ನಿರೂಪಿಸಿದರು. ಹರೀಶ ಹೆಗಡೆ ವಂದಿಸಿದರು.

12ಎಸ್ಸಾರೆಸ್ 4

ಶಿರಸಿಯಲ್ಲಿರೋಟರಿ ಕ್ಲಬ್ ನಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಂಡರು.