ದಿನಭವಿಷ್ಯ 25 ಮೇ 2026
ಶ್ರೀಪತಿ ಭಟ್ | ಬೆಂಗಳೂರು
(ಮಿಥುನ, ಸಿಂಹ, ಧನು -ಈ ರಾಶಿಯವರು ಈ ದಿನ ಎಚ್ಚರಿಕೆಯಿಂದ ಇರಿ)
---------------
ಮೇಷ : ವ್ಯವಹಾರದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಈ ದಿನ ಉತ್ತಮ ರೀತಿಯಲ್ಲಿಪರಿಹಾರ ದೊರೆಯಲಿದೆ. ಎತ್ತರದಲ್ಲಿಏರಿ ಕೆಲಸ ಮಾಡುವವರು ಮತ್ತು ಸಾಹಸ ಪ್ರವೃತ್ತಿಯವರು ಜಾಗ್ರತರಾಗಿರಿ. ಸ್ವ-ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಳದಿ)
--------------
ವೃಷಭ : ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಒಳ್ಳೆಯದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನ ನಡೆಸಲು ಈ ದಿನ ಶುರು ಮಾಡಿದಲ್ಲಿಫಲ ನೀಡಲಿದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಸುವರ್ಣ)
-----------
ಮಿಥುನ : ನಿಮ್ಮ ದೈನಂದಿನ ಬದುಕನ್ನು ಶಿಸ್ತುಬದ್ಧವಾದ ರೀತಿಯಲ್ಲಿನಡೆಸಲು ತೀರ್ಮಾನಿಸುವುದರಿಂದ ಅಭಿವೃದ್ಧಿ ಹೊಂದುವಿರಿ. ಆರ್ಥಿಕವಾಗಿ ಲಾಭ ಪಡೆಯುವುದಕ್ಕೆ ಹೋರಾಟ ನಡೆಸಬೇಕಾಗುವ ಪರಿಸ್ಥಿತಿ ಬರಲಿದೆ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಕಪ್ಪು)
---------------
ಕಟಕ: ಜೀವನದಲ್ಲಿಬೇರೆಯವರ ಹಿಡಿತದಿಂದ ಬಳಲಿರುವ ನಿಮಗೆ ಆ ಸಮಸ್ಯೆಯಿಂದ ಹೊರ ಬರುವ ಅವಕಾಶಗಳು ಸಿಗಲಿವೆ. ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವುದು ಕಷ್ಟವಾಗಬಹುದು. ಕುಟುಂಬದಲ್ಲಿಸಂತಸ ಇರಲಿದೆ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಗುಲಾಬಿ)
----------
ಸಿಂಹ : ಲೇವಾದೇವಿ ವ್ಯವಹಾರ ನಡೆಸುವವರಿಗೆ ವ್ಯವಹಾರದಲ್ಲಿಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣಲಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಆಕಾಶ ನೀಲಿ)
-------------
ಕನ್ಯಾ : ಭವಿಷ್ಯದ ಬಗ್ಗೆ ಅನಗತ್ಯ ಚಿಂತಿಸುವುದನ್ನು ಬಿಟ್ಟು ಹಿರಿಯರ ಹೇಳಿಕೆಯಂತೆ ಅಗತ್ಯ ಪೂರೈಸುವ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿಮ್ಮ ಒತ್ತಡದ ನಡುವೆಯೂ ಇತರರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಬಿಳಿ)
-----------
ತುಲಾ : ನಿಮ್ಮ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗುವ ಧರ್ಮಪತ್ನಿಯ ಸಹಕಾರ ಮುನ್ನಡೆಗೆ ಪೂರಕವಾಗಲಿದೆ. ಸಹೋದರರಲ್ಲಿಅಥವಾ ಮನೆಯ ಸದಸ್ಯರಲ್ಲಿಭಿನ್ನಾಭಿಪ್ರಾಯ, ವಾದ-ವಿವಾದ, ಕಲಹಗಳು ಇಲ್ಲವಾಗುವುವು.
(ಶುಭ ಸಂಖ್ಯೆ 4, ಅದೃಷ್ಟ ಬಣ್ಣ :ಕೇಸರಿ)
-----------
ವೃಶ್ಚಿಕ : ವಿವಾಹ ಸಂಬಂಧ, ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತವಾದ ದಿನ ಸುಲಭವಾಗಿ ಪ್ರಾಪ್ತಿಯಾಗುವುದು. ವ್ಯಾಪಾರ-ವ್ಯವಹಾರದಲ್ಲಿಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ನೀಲಿ)
--------------
ಧನು : ನಿಮಗೆ ಒಳಿತಾಗುವ ನಿರ್ಧಾರಗಳನ್ನು ತೆಗದುಕೊಳ್ಳುವಲ್ಲಿಯಾವುದೇ ರೀತಿಯ ಯೋಚನೆಗಳು ಬೇಡ. ವ್ಯವಹಾರದಲ್ಲಿನ ಲಾಭ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಮನೆಯಲ್ಲಿಸಮಾರಂಭ ನಡೆಸಲು ತಯಾರಿ ನಡೆಸಬಹುದು.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಹಸಿರು)
------------
ಮಕರ : ನಿಮ್ಮ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ, ಪ್ರಶಂಸೆಗಳು ಸಿಗಲಿವೆ. ನೀವಿಂದು ಇನ್ನೊಬ್ಬರ ಅಧೀನದಿಂದ ಹೊರ ಬಂದು ಸ್ವತಂತ್ರ ಮನೋಭಾವದಿಂದ ಉಲ್ಲಾಸಭರಿತವಾಗಿ ಜೀವನ ನಡೆಸುವಂತಾಗಲಿದೆ.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಆಲೀವ್ )
-------------
ಕುಂಭ : ಸಾಂಸಾರಿಕ ಒತ್ತಡದಿಂದ ವೃತ್ತಿಪರವಾದ ಜವಾಬ್ದಾರಿ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ನಿಮ್ಮ ಕ್ರಾಂತಿಕಾರಿ ಸ್ವಭಾವವು ಈ ದಿನ ಹೆಚ್ಚಿನ ಲಾಭವನ್ನು ತರಲಿದೆ. ಹೊಸ ವಾಹನ ಖರೀದಿಸುವ ಯೋಗ ಇರುವುದು.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಕಂದು)
-----------
ಮೀನ : ನಿಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿಯಶಸ್ವಿಯಾಗುವಿರಿ. ರಜೆಯ ದಿನವಾದರೂ ಅನಿವಾರ್ಯ ಕಾರಣದಿಂದಾಗಿ ಕಾರ್ಯಪ್ರವೃತ್ತರಾಗಬೇಕಾಗುವುದು.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬೂದು)
------------------

