ವಿಕ ಸುದ್ದಿಲೋಕ ಬೆಳ್ತಂಗಡಿ
ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟ್ ಎಂಬಲ್ಲಿಶನಿವಾರ ಮಧ್ಯಾಹ್ನ ಸರಕು ಸಾಗಾಟದ ಕಂಟೈನರ್ ಲಾರಿ ಮಿನಿ ಬಸ್ ಗೆ ಡಿಕ್ಕಿಯಾಗಿದೆ.
ಮುಡಿಪುವಿನ ಕುಟುಂಬವೊಂದು ಜಾವಗಲ್ ಗೆ ತೆರಳುತ್ತಿದ್ದ ಮಿನಿ ಬಸ್ ಗೆ ಚಿಕ್ಕಮಗಳೂರು ಕಡೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಸರಕು ಸಾಗಾಟದ ಕಂಟೈನರ್ ಲಾರಿ ಡಿಕ್ಕಿಯಾಗಿದೆ. ಕಡೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನ್ನು ಓವರ್ ಟೇಕ್ ಮಾಡುವ ವೇಳೆ ಕಂಟೈನರ್ , ಮಿನಿ ಬಸ್ ಗೆ ಡಿಕ್ಕಿ ಹೊಡೆದಿದೆ. ಕಂಟೈನರ್ ಚಾಲಕ ಸ್ಥಳದಲ್ಲಿವಾಹನ ನಿಲ್ಲಿಸದೇ ತಪ್ಪಿಸಿಕೊಂಡು ಬಂದಿದ್ದು, ಈ ವೇಳೆ ಉಜಿರೆ ಬಳಿ ಸಾರ್ವಜನಿಕರು ಲಾರಿಯನ್ನು ಅಡ್ಡ ಹಾಕಿದ್ದಾರೆ. ಮಿನಿ ಬಸ್ ನ ಚಾಲಕ, ಒಬ್ಬ ಮಹಿಳೆ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಂಟೈನರ್ ವಾಹನ ಕೆಎಸ್ಸಾರ್ಟಿಸಿ ಬಸ್ ನ್ನು ಓವರ್ ಟೇಕ್ ಮಾಡುವ ವೇಳೆ ಅಪಾಯವನ್ನರಿತ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸ್ ನ್ನು ತೀರಾ ರಸ್ತೆ ಬದಿಗೆ ಚಲಾಯಿಸಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಇಲ್ಲದಿದ್ದರೆ ಲಾರಿಯು ಮಿನಿ ಬಸ್ ಗೆ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆಯುತ್ತಿತ್ತು. ಕೆಎಸ್ಸಾರ್ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಮಿನಿ ಬಸ್ ನ ಪ್ರಯಾಣಿಕರು ತಿಳಿಸಿದ್ದಾರೆ.
ಬಾಕ್ಸ್
ಅಪಘಾತ ವಲಯ
ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸೋಮಂತಡ್ಕ ಪೇಟೆಯಿಂದ ನಿಡಿಗಲ್ ತನಕ ರಸ್ತೆ ಅಗಲವಾಗಿದ್ದು ಈ 4 ಕಿ.ಮೀ. ಪ್ರದೇಶದಲ್ಲಿವಾಹನಗಳು ವಿಪರೀತ ವೇಗವಾಗಿ ಸಂಚರಿಸುವ ಕಾರಣ ಇಲ್ಲಿಪ್ರತಿನಿತ್ಯವೆಂಬಂತೆ ಅಪಘಾತಗಳು ಸಂಭವಿಸುತ್ತಿವೆ. ಈ ಪ್ರದೇಶದಲ್ಲಿಸ್ಪೀಡ್ ಬ್ರೇಕರ್ , ವೇಗದ ಮಿತಿ ಫಲಕ ಅಳವಡಿಸುವುದು ಅಗತ್ಯವಾಗಿದೆ. ತೀರಾ ನೇರ ಇಲ್ಲದ ಈ ರಸ್ತೆಯಲ್ಲಿಈ ಹಿಂದೆ ವೇಗದ ಮಿತಿ ಗರಿಷ್ಠ 100 ಕಿ.ಮೀ. ಫಲಕ ಅಳವಡಿಸಲಾಗಿತ್ತು. ಇದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾದ ಕಾರಣ ಹಾಕಿದ ಕೆಲವೇ ದಿನಗಳಲ್ಲಿಸಂಬಂಧಪಟ್ಟವರು ಫಲಕಗಳನ್ನು ಕಿತ್ತೊಗೆದಿದ್ದರು.
ಚಿತ್ರ ವಿವರ
1,2ಅಪಘಾತಕ್ಕೊಳಗಾದ ಬಸ್ .
3.ಅಪಘಾತವೆಸಗಿ ನಿಲ್ಲಿಸದೆ ತಪ್ಪಿಸಿಕೊಂಡು ಬಂದಿದ್ದ ಕಂಟೈನರ್ ಲಾರಿಯನ್ನು ಸಾರ್ವಜನಿಕರು ತಡೆಹಿಡಿದರು.

