(ಗಮನಿಸಿ: ಈ ಸುದ್ದಿಯನ್ನು ನಮ್ಮ ಕುಡ್ಲಕ್ಕೆ ಕೂಡ ಬಳಸಿ.)
ವಿಕ ಸುದ್ದಿಲೋಕ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲಾಸಹಕಾರಿ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ನಿ. ಕುಲಶೇಖರ ಮಂಗಳೂರು ಇದರ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ಪುತ್ತೂರಿನ ಜಗನ್ನಾಥ ಶೆಟ್ಟಿ ನಡುಮನೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ರಾಜ್ಯ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ರಂಗನಾಥ ಜಿ. ಅವರು ಹೊರಡಿಸಿದ ಅಧಿಸೂಚನೆಯಲ್ಲಿಈ ನಾಮನಿರ್ದೇಶನದ ಬಗ್ಗೆ ಪ್ರಕಟಿಸಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ, ಉಪ ಪ್ರಕರಣ(4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿಕೊಂಡು ಈ ನಾಮನಿರ್ದೇಶನ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿತಿಳಿಸಲಾಗಿದೆ. ಜಗನ್ನಾಥ ಶೆಟ್ಟಿ ಅವರು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ನಡುಮನೆ ನಿವಾಸಿಯಾಗಿದ್ದು, ಪುತ್ತೂರು ಶಾಸಕ ಅಶೋಕ್ ರೈ ಅವರ ಸ್ವಂತ ಊರಿನವರಾಗಿದ್ದಾರೆ.
ಫೊಟೋ: 30ಪಿ-ಜಗನ್ನಾಥ ಶೆಟ್ಟಿ

