ಬಲಮುರಿಯಲ್ಲಿಕ್ಯಾಮೆರಾ ಕಣ್ಗಾವಲು
-------
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪ್ರಮುಖ ಪ್ರವಾಸಿ ತಾಣ ಬಲಮುರಿಯಲ್ಲಿಭಕ್ತರ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ವಾರಾಂತ್ಯದಲ್ಲಿನೀರಿನ ತಾಣ ಅರಸಿಕೊಂಡು ಬರುವ ಜನರು, ಅದರಲ್ಲೂಯುವಜನರು ನೀರಿಗಿಳಿಯುವುದು ಸಹಜ. ಇಂತಹ ಸಂದರ್ಭದಲ್ಲಿನೀರಿನ ಸೆಳೆತಕ್ಕೆ ಅಥವಾ ಸುಳಿಗೆ ಸಿಲುಕಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕೆಲ್ಲಾಕಡಿವಾಣ ಹಾಕುವ ನಿಟ್ಟಿನಲ್ಲಿ ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿಯು ಬಲಮುರಿ ತಾಣದ 3 ಸ್ಥಳಗಳಲ್ಲಿಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.

