ವಿಜಯನಗರ ಕಾಲದ ‘ಯಾಳಿ’ ಶಿಲ್ಪ ಪತ್ತೆ

Contributed byShridevi Ambekallu|Vijaya Karnataka

ಹೊಸಪೇಟೆಯ ಹಂಪಿಯ ಹಜಾರರಾಮ ದೇವಸ್ಥಾನದಲ್ಲಿ ಉತ್ಖನನ ವೇಳೆ ವಿಜಯನಗರ ಕಾಲದ ಅಪರೂಪದ ಯಾಳಿ ಶಿಲ್ಪ ಪತ್ತೆಯಾಗಿದೆ. ಸಿಂಹದ ದೇಹ ಹಾಗೂ ಇತರ ಪ್ರಾಣಿಗಳ ಮುಖಲಕ್ಷಣ ಹೊಂದಿರುವ ಈ ಶಿಲ್ಪ ರಕ್ಷಕನ ಸಂಕೇತವಾಗಿದೆ. ಏಕಶಿಲೆಯಲ್ಲಿ ಕೆತ್ತಲಾದ ಈ ಕಲಾಕೃತಿಯ ಸೂಕ್ಷ್ಮ ಕೆತ್ತನೆಗಳು ವಿಜಯನಗರ ಶಿಲ್ಪಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಶತಮಾನಗಳ ಕಾಲ ಮಣ್ಣಿನಲ್ಲಿ ಹೂತುಹೋಗಿದ್ದರೂ ಇದು ಸುಸ್ಥಿತಿಯಲ್ಲಿದೆ.

rare yaali sculpture of vijayanagara era discovered in hampi

ಹೊಸಪೇಟೆ (ವಿಜಯನಗರ): ಹಂಪಿಯ ಹಜಾರರಾಮ ದೇವಸ್ಥಾನದ ಆವರಣದಲ್ಲಿಭಾರತೀಯ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ ಹಾಗೂ ಜೀರ್ಣೋದ್ಧಾರ ವೇಳೆ ವಿಜಯನಗರ ಕಾಲದ ಅತ್ಯಂತ ಅಪರೂಪದ ಕಲ್ಲಿನ ಶಿಲ್ಪವೊಂದು ಪತ್ತೆಯಾಗಿದೆ.

ಹಿಂದೂ ಪುರಾಣಗಳಲ್ಲಿಉಲ್ಲೇಖಿತ ವಾಗಿರುವ ಸಿಂಹದ ದೇಹ ಹಾಗೂ ಇತರ ಪ್ರಾಣಿಗಳ ಮುಖಲಕ್ಷಣ ಹೋಲುವ ಪೌರಾಣಿಕ ರಕ್ಷಕ ಪ್ರಾಣಿ ಯಾಳಿ (ಅಥವಾ ವ್ಯಾಲ) ಶಿಲ್ಪವಾಗಿದೆ ಎಂದು ಗುರುತಿಸಲಾಗಿದೆ. ದೇವಸ್ಥಾನದ ಆವರಣದಲ್ಲಿನೆಲಸಮಗೊಂಡಿದ್ದ ಭಾಗವನ್ನು ಪುನರುತ್ಥಾನಗೊಳಿಸುವಾಗ ಈ ಕಲಾಕೃತಿ ಬೆಳಕಿಗೆ ಬಂದಿದೆ. ದೇವಸ್ಥಾನದ ಪ್ರವೇಶದ್ವಾರ ಅಥವಾ ಮೆಟ್ಟಿಲುಗಳ ಪಾಶ್ರ್ವದಲ್ಲಿಇರಿಸುತ್ತಿದ್ದ ಈ ಶಿಲ್ಪವು, ನಕಾರಾತ್ಮಕ ಶಕ್ತಿಗಳನ್ನು ತಡೆಯುವ ಭವ್ಯ ರಕ್ಷಕನ ಸಂಕೇತವಾಗಿದೆ. ಏಕಶಿಲೆಯಲ್ಲಿಕೆತ್ತಲಾದ ಈ ಕಲಾಕೃತಿಯಲ್ಲಿಯಾಳಿಯ ಉಬ್ಬುಚಿತ್ರ ವಿದ್ದು, ಹಿಂಭಾಗದಲ್ಲಿಸುರುಳಿ ಯಾ ಕಾರದ ಸುಂದರವಾದ ಬಾಲದ ವಿನ್ಯಾಸವಿದೆ. ಶತಮಾನಗಳ ಕಾಲ ಮಣ್ಣಿನಡಿ ಹೂತುಹೋಗಿದ್ದರೂ ಶಿಲ್ಪದ ಸೂಕ್ಷ್ಮ ಕೆತ್ತನೆಗಳು ಇಂದಿಗೂ ಸುಸ್ಥಿತಿಯಲ್ಲಿರು ವುದು ವಿಜಯನಗರ ಕಾಲದ ಶಿಲ್ಪಿಗಳ ಶ್ರೇಷ್ಠ ಕರಕುಶಲತೆಗೆ ಸಾಕ್ಷಿಯಾಗಿದೆ.