ಬೈಕ್ ಟ್ರ್ಯಾಕ್ಟರ್ ಡಿಕ್ಕಿ, ಇಬ್ಬರ ಸಾವು

Contributed bybhrahmanand.arali@timesgroup.com|Vijaya Karnataka

ಸೇಡಂ ರಸ್ತೆಯ ಬ್ರಹ್ಮಾಕುಮಾರಿ ಆಶ್ರಮದ ಬಳಿ ತಡರಾತ್ರಿ ಬೈಕ್‌ ಟ್ರ್ಯಾಕ್ಟರ್‌ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರು ಇತ್ತೀಚೆಗೆ ವಿವಾಹವಾಗಿದ್ದರು. ಘಟನೆ ಕುರಿತು ಸಂಚಾರ ಪೊಲೀಸ ಠಾಣೆ 2ರಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

bike tractor collision 2 youths die

(ಇಬ್ಬರ ಚಿತ್ರಗಳಿವೆ)

**

* ಸೇಡಂ ರಸ್ತೆಯ ಬ್ರಹ್ಮಾಕುಮಾರಿ ಆಶ್ರಮದ ಬಳಿ ತಡರಾತ್ರಿ ಘಟನೆ | ವಿಧಿಯಾಟಕ್ಕೆ ನವ ವಿವಾಹಿತ ಬಲಿ

ಬೈಕ್ ಟ್ರ್ಯಾಕ್ಟರ್ ಡಿಕ್ಕಿ : ಇಬ್ಬರ ಸಾವು

ವಿಕ ಸುದ್ದಿಲೋಕ ಕಲಬುರಗಿ

ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲೆ ತೆರಳುತ್ತಿದ್ದ ನವವಿವಾಹಿತ ಸೇರಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೇಡಂ ರಸ್ತೆಯ ಬ್ರಹ್ಮಾಕುಮಾರಿ ಆಶ್ರಮದ ಬಳಿ ಗುರುವಾರ ತಡ ರಾತ್ರಿ ನಡೆದಿದೆ.

ಕಮಲಾಪುರ ತಾಲೂಕಿನ ಅಂಕಲಗಿ ಗ್ರಾಮದ ದಿನೇಶ ಶರಣಪ್ಪ ಕಮ್ಮನಕರ್ (25), ಕಾಳಗಿ ತಾಲೂಕಿನ ಮುಗಟಿ ಗ್ರಾಮದ ಸಂದೀಪ ಸಿದ್ದಣ್ಣ ಕಂಟೀಕರ್ (25) ಮೃತ ಯುವಕರಾಗಿದ್ದಾರೆ. ಸಂದೀಪ ಹಾಗೂ ದಿನೇಶ ಸ್ನೇಹಿತರಾಗಿದ್ದು ಇಬ್ಬರು ಬೈಕ್ ಮೇಲೆ ಕಲಬುರಗಿಯಿಂದ ಮುಗಟಿ ಗ್ರಾಮಕ್ಕೆ ತೆರಳುತ್ತಿದ್ದರು. ಎದುರಿಗೆ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಇಬ್ಬರು ಸ್ಥಳದಲ್ಲಿಮೃತರಾಗಿದ್ದಾರೆ. ಮೇ 15ರಂದು ಮದುವೆಯಾಗಿದ್ದ ಸಂದೀಪ್ ಇನ್ನೂ 15 ದಿನ ಸಹ ಕಳೆದಿಲ್ಲ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಚಾರ ಪೊಲೀಸ ಠಾಣೆ 2ರಲ್ಲಿಪ್ರಕರಣ ದಾಖಲಾಗಿದೆ.