ಮಾವಿನ ಸ್ವಾದ
ಮಾವಿನ ಈ ಸೀಸನ್ ನಲ್ಲಿವೈವಿಧ್ಯಮಯ ಮಾವಿನ ಖಾದ್ಯಗಳ ಪ್ರಯೋಗಗಳು ನಡೆಯುತ್ತವೆ. ಸೋಶಿಯಲ್ ಮೀಡಿಯಾದಲ್ಲಿಕೂಡ ವಿಭಿನ್ನ ಬಗೆಯ ರೆಸಿಪಿಗಳು ಆಗಾಗ ಗಮನ ಸೆಳೆಯುತ್ತವೆ. ಮಾವಿನಿಂದ ತಯಾರಿಸಬಹುದಾದ ಸವಿ ರುಚಿ ಇಲ್ಲಿದೆ.
ಜಲಜಾ ಗೌಡ
ಆಮ್ರ ಖಂಡ
ಮೊದಲು ಅರ್ಧ ಲೀಟರ್ ಫ್ರೆಶ್ ಮೊಸರನ್ನು ಒಂದು ಪಾತ್ರೆಯಲ್ಲಿಸ್ಟೈನರ್ ಇಟ್ಟು ಅದರಲ್ಲಿತೆಳುವಾದ ಬಟ್ಟೆಯಲ್ಲಿಮೊಸರನ್ನು ಹಾಕಿ ನೀರಿನಂಶವನ್ನೆಲ್ಲತೆಗೆದು ಅದನ್ನು ಗಟ್ಟಿಯಾಗಿ ಕಟ್ಟಿ ಭಾರವಾದ ವಸ್ತುವನ್ನು ಇಟ್ಟು ಮೂರು ಗಂಟೆ ಫ್ರಿv್ಜ…ನಲ್ಲಿಇರಿಸಿ.
ನಂತರ ನೀರು ಸೋರಿದ ಗಟ್ಟಿಯಾದ ಮೊಸರಿನ ಅಂಶವನ್ನು ತೆಗೆದು ಚೆನ್ನಾಗಿ ಗೊಟಾಯಿಸಿ ಅದಕ್ಕೆ ಎರಡು ಮಾವಿನ ಹಣ್ಣಿನ ಪಲ್ಪ…, 1 ಸ್ಪೂನ್ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಸಣ್ಣಗೆ ಹೆಚ್ಚಿದ ಪಿಸ್ತಾ, 2 ಸ್ಪೂನ್ ಬೆಚ್ಚಗಿನ ಹಾಲಿನಲ್ಲಿನೆನೆಸಿಟ್ಟ ಕೇಸರಿ ದಳವನ್ನು ಸೇರಿಸಿ ಚೆನ್ನಾಗಿ ಕಲೆಸಿ. ತುಂಬಾ ಗಟ್ಟಿಯಾದ ಆಮ್ರ ಖಂಡವನ್ನು ಕಪ್ ನಲ್ಲಿಹಾಕಿ ಅದರ ಮೇಲೆ ಸಣ್ಣಗೆ ಹೆಚ್ಚಿದ ಮಾವಿನ ತುಂಡು ಮತ್ತು ಪಿಸ್ತಾ, ಕೇಸರಿ ದಳದಿಂದ ಅಲಂಕರಿಸಿ.
ಕೇಸರಿಬಾತ್
ಒಂದು ಬಾಣಲಿಗೆ ಎರಡು ಸ್ಪೂನ್ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿರಿಸಿ. ಅದೇ ಬಾಣಲೆಗೆ ಒಂದು ಸ್ಪೂನ್ ತುಪ್ಪ ಸೇರಿಸಿ ಒಂದು ಕಪ್ ಮೀಡಿಯಂ ರವೆ ಹಾಕಿ ಸುವಾಸನೆ ಬರುವವರೆಗೂ ಹುರಿದು ಮೂರು ಕಪ್ ಕುದಿಯುವ ನೀರನ್ನು ಸೇರಿಸಿ ನಿಧಾನವಾಗಿ ಬೇಯಿಸಿ. ಅದಕ್ಕೆ ಅರ್ಧ ಕಪ್ ಸಕ್ಕರೆ ಹಾಲಿನಲ್ಲಿನೆನೆಸಿದ ಕೇಸರಿ ದಳ, ಅರ್ಧ ಕಪ್ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿಒಂದು ಕಪ್ ಮಾವಿನಹಣ್ಣಿನ ರಸವನ್ನು ಸೇರಿಸಿ ಕಲೆಸಿ ಐದು ನಿಮಿಷ ತಟ್ಟೆ ಮುಚ್ಚಿಟ್ಟು ಸ್ವಲ್ಪ ಗಟ್ಟಿಯಾದ ನಂತರ ಮತ್ತೆ ಎರಡು ಸ್ಪೂನ್ ತುಪ್ಪ, ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿ.
ಲಸ್ಸಿ
ಮೊದಲು ಎರಡು ಮಾವಿನ ಹಣ್ಣನ್ನು ಸಣ್ಣಗೆ ಹೆಚ್ಚಿ ಮಿಕ್ಸಿ ಜಾರಿಗೆ ಹಾಕಿ ಎರಡು ಸ್ಪೂನ್ ಸಕ್ಕರೆ, ಎರಡು ಏಲಕ್ಕಿ ಸೇರಿಸಿ ರುಬ್ಬಿ. ಕಾಲು ಲೀಟರ್ ಗಟ್ಟಿ ಮೊಸರು, ಸ್ವಲ್ಪ ಐಸ್ ಕ್ಯೂಬ್ಸ… ಸೇರಿಸಿ ಚೆನ್ನಾಗಿ ರುಬ್ಬಿ ಮಣ್ಣಿನ ಲೋಟಕ್ಕೆ ಸೇರಿಸಿ. ಅದರ ಮೇಲೆ ಪುದೀನ ಎಲೆ ಐಸ್ ಕ್ಯೂಬ್ ಸೇರಿಸಿ ತಣ್ಣನೆಯ ಲಸ್ಸಿ ಸವಿಯಿರಿ.
ಚಪಾತಿ
ಒಂದು ಕಪ್ ಗೋಧಿ ಹಿಟ್ಟಿಗೆ ಅರ್ಧ ಸ್ಪೂನ್ ಉಪ್ಪು, ಅರ್ಧ ಸ್ಪೂನ್ ಓಂ ಕಾಳು, ಒಂದು ಸ್ಪೂನ್ ತುಪ್ಪ, ಅರ್ಧ ಸ್ಪೂನ್ ಕಸೂರಿ ಮೇತಿ, ಒಂದು ಮಾವಿನ ಹಣ್ಣಿನ ರಸವನ್ನು ಸೇರಿಸಿ. ಅಗತ್ಯವಿದ್ದಲ್ಲಿನೀರು ಸೇರಿಸಿ ಮೃದುವಾಗಿ ಹಿಟ್ಟನ್ನು ಕಲೆಸಿ 10 ನಿಮಿಷ ಬಿಟ್ಟು ಪದರ ಪದರವಾಗಿ ತುಪ್ಪ ಹಾಕಿ ಚಪಾತಿ ಲಟ್ಟಿಸಿ. ಎರಡು ಬದಿ ಬೇಯಿಸಿದರೆ ರುಚಿಯಾದ ಮಾವಿನಹಣ್ಣಿನ ಚಪಾತಿ ತುಪ್ಪದೊಂದಿಗೆ ಸವಿಯಲು ಸಿದ್ಧ.

