ನಾಟಕ

Contributed byshubha.hegde@timesgroup.com|Vijaya Karnataka

ಶಿವಮೊಗ್ಗ ರಂಗಾಯಣದಲ್ಲಿ ಬೊಳುವಾರು ಮಹಮ್ಮದ್‌ ಕುಂಞ ಅವರ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನಗೊಂಡಿದೆ. ದೇಶ ವಿಭಜನೆಯ ನೋವು, ಧರ್ಮದ ಹೆಸರಿನಲ್ಲಿ ಬೇರ್ಪಟ್ಟ ಕುಟುಂಬಗಳ ಕಥೆ ಇದು. ಲಾಹೋರಿನಿಂದ ಮುತ್ತುಪ್ಪಾಡಿಗೆ ಬಂದ ತರುಣನ ಬದುಕಿನ ಹೋರಾಟವನ್ನು ನಾಟಕ ಕಟ್ಟಿಕೊಡುತ್ತದೆ. ವಿಭಜನೆಯ ಕರಾಳತೆಯನ್ನು ರಂಗದ ಮೇಲೆ ತರಲಾಗಿದೆ. ಕಲಾವಿದರ ಅಭಿನಯ ಗಮನ ಸೆಳೆಯುತ್ತದೆ. ರಂಗಸಜ್ಜಿಕೆ ಕಾಲಘಟ್ಟವನ್ನು ಪರಿಣಾಮಕಾರಿಯಾಗಿ ತೋರಿಸಿದೆ.

mahesh r nayaks play on the independence run

ಮುತ್ತುಪ್ಪಾಡಿಯ ನಾಟಕೀಯತೆಯಲ್ಲಿರಾರಾಜಿಸಿದ ಸ್ವಾತಂತ್ರ್ಯದ ಓಟ

ಕಲ್ಲಚ್ಚು ಮಹೇಶ ಆರ್ . ನಾಯಕ್

ಬೊಳುವಾರು ಮಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕೃತಿ ಈಗ ಶಿವಮೊಗ್ಗ ರಂಗಾಯಣದ ಮೂಲಕ ಮೂರುವರೆ ಗಂಟೆಗಳ ನಾಟಕ ರೂಪ ಪಡೆದಿದೆ. ಇತ್ತೀಚೆಗೆ ಪ್ರದರ್ಸನಗೊಮಡ ಈ ನಾಟಕದಲ್ಲಿ ಧರ್ಮ ಹಾಗೂ ಮಣ್ಣಿನ ಋುಣವನ್ನೂ ಮೀರಿದ ಭಾವ ಮತ್ತು ಬದುಕಿನ ಸಮಾಗಮ.

ದೇಶ ವಿಭಜನೆಯ ಅನೇಕ ಜ್ವಲಂತ ಪ್ರಶ್ನೆಗಳನ್ನು ಹಸಿ ಹಸಿಯಾಗಿ ರಂಗದಲ್ಲಿತೆರೆದಿಟ್ಟು ನೋಡುಗರ ಭಾವಲಹರಿಯನ್ನು ಕೆದಕುವಲ್ಲಿ ತನ್ನದೇ ಆದಂತಹ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದೆ. ಆನೀರಿಕ್ಷಿತ ಎಂಬಂತೆ ರಾತ್ರೋರಾತ್ರಿ ದೇಶ ವಿಭಜನೆಯ ಹೆಸರಿನಲ್ಲಿಧರ್ಮ ಆಧರಿತವಾಗಿ ಹುಟ್ಟಿ ಬೆಳೆದ ಮನೆ, ಮಣ್ಣು, ಮನುಷ್ಯರನ್ನೆಲ್ಲಏಕಾಏಕಿ ಬಿಟ್ಟು ಪರ ಜಾಗದೆಡೆಗೆ ಕುಟುಂಬ ಸಮೇತ ಸಾಗಬೇಕಾದ ಸಂದಿಗ್ಧತೆಯಲ್ಲಿ ಭಾರತ ಸೇರಿದ ಪಾಕಿಸ್ತಾನದ ಲಾಹೋರಿನ ತರುಣನೊಬ್ಬ, ಒಂದು ಕಡೆ ಪುನಃ ಹುಟ್ಟೂರು ಸೇರಬೇಕೆನ್ನುವ ಬಯಕೆಯ ನಡುವೆಯೇ ಬಂದು ಸೇರಿದ ದೇಶ / ಊರಿನಲ್ಲಿ ಸಹ ಬದುಕು ಕಟ್ಟಿಕೊಳ್ಳಬೇಕಾದ ಆನಿವಾರ್ಯತೆಗೆ ಒಳಗಾಗುವುದೇ ಕಾದಂಬರಿ ಆಧರಿತ ಈ ನಾಟಕದ ಕಥಾನಕ. ವಿಭಜನೆಯ ಕರಾಳತೆಗಳನ್ನು ಭಾರತದ ಭೌಗೋಳಿಕ ವಾತಾವರಣದಲ್ಲಿ ಉತ್ತರ ಭಾರತ ಕಂಡಷ್ಟು ದಕ್ಷಿಣ ಭಾರತ ಕಂಡಿಲ್ಲನಿಜ. ಹೀಗಾಗಿ ಉತ್ತರಕ್ಕೆ ತಲುಪಿದ ಅದೇ ತರುಣ ಮುಂದೆ ದಕ್ಷಿಣದ ಮುತ್ತುಪ್ಪಾಡಿಗೆ ಬಂದಾಗ ಆಗುವ, ಒಂದಾರ್ಥದ ಕ್ಷಣ ಕ್ಷಣದ ಮತ್ತು ತಲೆಮಾರುಗಳ ಆತಂರದ ಬದಲಾವಣೆಯೇ ಈ ನಾಟಕದ ಜೀವಂತಿಕೆ.

ದೇಶ ವಿಭಜನೆಯ ಚಿತ್ರಣವನ್ನು ಆರಂಭದಲ್ಲಿ ಮಾರ್ಮಿಕವಾಗಿ ಕಟ್ಟಿಕೊಟ್ಟ ಈ ನಾಟಕ ಮುತ್ತುಪ್ಪಾಡಿಗೆ ತಲುಪಿದ ಕೂಡಲೇ ಎಲ್ಲೋ ಒಂದು ಕಡೆ ತನ್ನ ಗಂಭೀರತೆಯನ್ನು ಸ್ವಲ್ಪ ಹೊತ್ತು ಬಿಟ್ಟು ಸಾಮಾನ್ಯ ಸಾಮಾಜಿಕ ನಾಟಕವೊಂದರಂತೆಯೂ ಭಾಸವಾದದ್ದಿದೆ ಕೆಲವು ಸಾಂಸಾರಿಕ, ಸ್ಥಳೀಯ ಗೊಂದಲದ ನಡುವೆ. ಬಹುತೇಕ ಮುಸ್ಲಿಂ ಸಮುದಾಯದ ಪಾತ್ರಗಳೇ ಇರುವ ಈ ಎಲ್ಲಾಹಂತಗಳಲ್ಲಿಕಲಾವಿದರ ಭಾರೀ ಪ್ರಯತ್ನದ ನಡುವೆಯೂ ಒಂದು ಕಾಲಘಟ್ಟದ ಮುಸ್ಲಿಂಮರ ಜನ ಜೀವನದ ನೈಜತೆಗೆ ಕೆಲವು ಸಲ ಅವರ ಹಾವಭಾವ, ಭಾಷೆ ಬಂದಿಲ್ಲ. ಅತ್ಯುತ್ತಮ ರಂಗಸಜ್ಜಿಕೆ ವಿನ್ಯಾಸ ಮತ್ತು ಬಳಸಿದ ವಸ್ತುಗಳ ಸಾಂಕೇತಿಕತೆ ಬಹುತೇಕ ನೋಡುಗರನ್ನು ನಿರ್ದಿಷ್ಟ ಕಾಲಮಾನಕ್ಕೆ ಕೊಂಡುಯ್ಯುವಲ್ಲಿಸಂಪೂರ್ಣ ಯಶಸ್ವಿಯಾಗಿದೆ.