ಸೀತಾರಾಮ ಕಲ್ಯಾಣೋತ್ಸವ

Contributed byShridevi Ambekallu|Vijaya Karnataka

ಚಿಕ್ಕಮಗಳೂರಿನಲ್ಲಿ ಮೇ 31ರಂದು ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮತಾರಕ ಹೋಮ ಮತ್ತು ಶ್ರೀ ಸೀತಾರಾಮ ಕಲ್ಯಾಣೋತ್ಸವ ಜರುಗಲಿದೆ. ಕೋಟೆ ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆಯಿಂದ ಹೋಮಗಳು ಆರಂಭಗೊಂಡು, ಸಂಜೆ ಶ್ರೀ ಸೀತಾರಾಮರ ವಿವಾಹ ಮಹೋತ್ಸವ ಜರುಗಲಿದೆ. ಪುರೋಹಿತರಾದ ಅಶ್ವತ್ಥನಾರಾಯಣಾಚಾರ್ಯ ಜೋಶಿ ಈ ಮಾಹಿತಿ ನೀಡಿದ್ದಾರೆ.

shri ramatarak homam and sitaram kalyanotsav

ಚಿಕ್ಕಮಗಳೂರು: ಅಧಿಕ ಮಾಸದ ಹಿನ್ನೆಲೆಯಲ್ಲಿಲೋಕ ಕಲ್ಯಾಣಾರ್ಥವಾಗಿ ನಗರದ ಕೋಟೆ ಬಡಾವಣೆಯ ಸುಗ್ಗಿಕಲ್ಲಿನ ಬಳಿ ಇರುವ ಶ್ರೀ ಗುರು ರಾಘವೇಂದ್ರ ಯಜ್ಞ ಮಂಟಪದಲ್ಲಿಮೇ 31ರಂದು ಶ್ರೀ ರಾಮತಾರಕ ಹೋಮ ಮತ್ತು ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.

ಅಂದು ಬೆಳಗ್ಗೆ ಪುಣ್ಯಾಹವಾಚನ, ಮಹಾಸಂಕಲ್ಪ, ದೇವತಾ ಕಲಶ ಸ್ಥಾಪನೆ, ಸೇವಾ ಕರ್ತೃಗಳಿಂದ ಸಂಕಲ್ಪ, ಶ್ರೀರಾಮ ತಾರಕ ಹೋಮ, ಶ್ರೀ ನೃಸಿಂಹ ಹೋಮ, ನವಗ್ರಹ ಹೋಮ ನೆರವೇರಲಿದೆ. 10.30ಕ್ಕೆ ಹೋಮಗಳ ಪೂರ್ಣಾಹುತಿ, ಮಹಾ ಮಂಗಳಾರತಿ, ಅವಭೃತ ಸ್ನಾನ, ಶ್ರೀ ಸೀತಾರಾಮ ಕಲ್ಯಾಣೋತ್ಸವ ಜರುಗಲಿದೆ ಎಂದು ಪುರೋಹಿತ ಅಶ್ವತ್ಥನಾರಾಯಣಾಚಾರ್ಯ ಜೋಶಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.