ರಿಯಾಲ್ಟಿ ಪ್ರಗತಿಗೆ ಮೆಟ್ರೊ, ರಸ್ತೆಯೇ ರಹದಾರಿಗಳು
ಇಂಟ್ರೊ
ಬೆಂಗಳೂರಿನಲ್ಲಿಇನ್ನು ಮುಂದೆ ಮೆಟ್ರೊ ಮಾರ್ಗ ಮತ್ತು ಸಾರಿಗೆ ಸಂಪರ್ಕಗಳು ಎಲ್ಲೆಲ್ಲಿಸುಗಮವಾಗಿವೆಯೋ ಅಲ್ಲಿಜನರ ವಾಸವನ್ನು ನಿರ್ಧರಿಸಲಿವೆ. ಇತ್ತೀಚಿನ ರಿಯಲ್ ಎಸ್ಟೇಟ್ ಸಮೀಕ್ಷೆ ವರದಿಯೊಂದು ಇಂತಹ ಪ್ರದೇಶಗಳಲ್ಲಿಮನೆಗಳ ಬೇಡಿಕೆ ಎಲ್ಲಿಮತ್ತು ಏಕೆ ಹೆಚ್ಚುತ್ತಿದೆ ಎಂಬುದನ್ನು ಹೇಳಿದೆ.
ಉಮಾ ಜಿ.
ನಗರದ ಐಷಾರಾಮಿ ಮತ್ತು ಪ್ರೀಮಿಯಂ ವಸತಿಗಳ ಬೆಳವಣಿಗೆಯು ಈಗ ಕೇವಲ ಕಟ್ಟಡದ ಮೇಲಷ್ಟೇ ಅಲ್ಲದೆ, ನಗರದ ಭವಿಷ್ಯದ ಸಾರಿಗೆ ಮತ್ತು ಉದ್ಯೋಗ ಜಾಲಕ್ಕೆ ಎಷ್ಟು ಉತ್ತಮವಾಗಿ ಸಂಪರ್ಕ ಹೊಂದಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ ರಿಯಾಲ್ಟಿ ಉದ್ಯಮದ ತಜ್ಞರು. ಈ ನಿಟ್ಟಿನಲ್ಲಿಬೆಂಗಳೂರಿನಲ್ಲಿನಮ್ಮ ಮೆಟ್ರೊ ವಿಸ್ತರಣೆಯು ವಸತಿ ಮಾರುಕಟ್ಟೆಯ ನಕ್ಷೆಯನ್ನೇ ಬದಲಾಯಿಸುತ್ತಿದೆ. ಮುಖ್ಯವಾಗಿ ಮೆಟ್ರೊ ಸೌಲಭ್ಯಗಳು ಕಚೇರಿಗೆ ಹೋಗುವವರ ಪ್ರಯಾಣದ ಸಮಯ ಕಡಿಮೆ ಮಾಡುತ್ತಿವೆ. ಉತ್ತಮ ಸಂಪರ್ಕ ಹೊಂದಿರುವ ನಗರದ ಹೊರವಲಯದ ಪ್ರದೇಶಗಳಿಗೆ ಬೇಡಿಕೆ ಹೆಚ್ಚಿಸುತ್ತಿವೆ ಹಾಗೂ ಮೆಟ್ರೊ ನಿಲ್ದಾಣ ಮತ್ತು ಪ್ರಮುಖ ಜಂಕ್ಷನ್ ಗಳ ಸಮೀಪವಿರುವ ನಿವೇಶನ ಹಾಗೂ ಅಪಾರ್ಟ್ ಮೆಂಟ್ ಗಳ ಮೌಲ್ಯ ಹೆಚ್ಚಿಸುತ್ತಿವೆ.
ಮೆಟ್ರೊ ಮಾರ್ಗ ಪೂರಕ
ಪ್ರಮುಖವಾಗಿ ಪೂರ್ಣ ಪ್ರಮಾಣದಲ್ಲಿಕಾರ್ಯ ನಿರ್ವಹಿಸುತ್ತಿರುವ ಮೆಟ್ರೊ ನೇರಳೆ ಮಾರ್ಗವು ನಗರವನ್ನು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸುತ್ತದೆ. ಇನ್ನು ನೀಲಿ ಮಾರ್ಗವು ನಗರದ ಪ್ರಮುಖ ಕೇಂದ್ರಗಳನ್ನು ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜೋಡಿಸುವ ಮಹತ್ವದ ಏರ್ ಪೋರ್ಟ್ ಕಾರಿಡಾರ್ ಆಗಲಿದೆ. ಇದೇ ರೀತಿ ಹಳದಿ ಮಾರ್ಗವು ಆರ್ .ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ಬೊಮ್ಮಸಂದ್ರ ತಲುಪುತ್ತದೆ. ಮೆಟ್ರೊ ಮಾತ್ರವಲ್ಲದೆ ಇತರ ಸಾರಿಗೆ ಸಂಪರ್ಕ ಯೋಜನೆಗಳಲ್ಲಿಹೊರವರ್ತುಲ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ಮತ್ತು ಹೊಸ ಮೇಲ್ಸೇತುವೆಗಳ ಯೋಜಿತ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳು ಗಮನ ಸೆಳೆದಿವೆ. ಇದರಿಂದಾಗಿ ಒಂದು ಕಾಲದಲ್ಲಿಬಹಳ ದೂರ ಎಂದು ಪರಿಗಣಿಸಲಾಗುತ್ತಿದ್ದ ಕೆಲವು ಮಾರುಕಟ್ಟೆಗಳು ಈಗ ಹೂಡಿಕೆಗೆ ಉತ್ತಮವಾಗುತ್ತಿವೆ. ಏಕೆಂದರೆ ಅಲ್ಲಿದೊಡ್ಡ ಮನೆಗಳು ಕಡಿಮೆ ಬೆಲೆ ಮತ್ತು ಸ್ಪಷ್ಟ ಸಾರಿಗೆ ಯೋಜನೆಗಳು ಒಟ್ಟಿಗೆ ಸಿಗುತ್ತಿವೆ. ವಸತಿ ಪ್ರದೇಶವು ವಿಮಾನ ನಿಲ್ದಾಣ, ಹೊಸ ಟೆಕ್ ಪಾರ್ಕ್ ಮತ್ತು ಉದ್ದೇಶಿತ ಮೆಟ್ರೊಗೆ ಹತ್ತಿರವಾಗುತ್ತಿವೆ.
ಐಷಾರಾಮಿ ಮನೆಗೆ ಬೇಡಿಕೆ
ಬೆಂಗಳೂರು ಈಗಲೂ ಐಟಿ ಕಂಪನಿ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪ್ರಮುಖ ಹಬ್ ಆಗಿದೆ. ಈ ಸಂಸ್ಥೆಗಳು ಕೈತುಂಬಾ ಸಂಬಳ ಪಡೆಯುವ ವೃತ್ತಿಪರರನ್ನು ಆಕರ್ಷಿಸುತ್ತವೆ. ಇವರು ವೈಟ್ ಫೀಲ್ಡ…, ಹೊರವರ್ತುಲ ರಸ್ತೆ, ಎಲೆಕ್ಟ್ರಾನಿP್ಸ… ಸಿಟಿ ಮತ್ತು ಉತ್ತರ ಬೆಂಗಳೂರಿನಂತಹ ಪ್ರಮುಖ ಉದ್ಯೋಗ ಕಾರಿಡಾರ್ ಗಳ ಬಳಿಯೇ ಮನೆಗಳನ್ನು ಬಯಸುತ್ತಾರೆ. ಈ ಅಧ್ಯಯನದ ಪ್ರಕಾರ, ಹಣಕಾಸು ವರ್ಷ 2021ರಲ್ಲಿಬೆಂಗಳೂರಿನ ಒಟ್ಟು ಹೊಸ ವಸತಿ ಯೋಜನೆಗಳಲ್ಲಿಐಷಾರಾಮಿ ಮನೆಗಳ ಸಂಖ್ಯೆ ಸುಮಾರು ರೂ. 1.5 ಕೋಟಿ ರೂ.ನಿಂದ 3.5 ಕೋಟಿವರೆಗೆ ಅಂದರೆ ಶೇ. 19ರಷ್ಟಿತ್ತು. ಆದರೆ ಹಣಕಾಸು ವರ್ಷ 2026ರ ಮೊದಲರ್ಧದಲ್ಲಿಇದು ಶೇ. 49ಕ್ಕೆ ಏರಿದೆ.
ಹೊಸ ಯೋಜನೆಗೆ ಆದ್ಯತೆ
ರಿಯಾಲ್ಟಿ ಕ್ಷೇತ್ರದ ಈ ಟ್ರೆಂಡ್ ಗೆ ತಕ್ಕಂತೆ ಈಗ ಬಿಲ್ಡರ್ ಗಳು ಹೊಸ ಹೊಸ ಯೋಜನೆಗಳನ್ನು ಹೆಚ್ಚು ಪರಿಚಯಿಸುತ್ತಿದ್ದಾರೆ. ಅದರಲ್ಲಿವರ್ಕ್ಫ್ರಮ್ ಹೋಮ್ ಅಥವಾ ಆಫೀಸ್ ಕಾರ್ನರ್ ಗಳಿರುವ 3 ಬಿಎಚ್ ಕೆ ಮತ್ತು ಅದಕ್ಕಿಂತ ದೊಡ್ಡದಾದ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕ್ಲಬ್ ಹೌಸ್ , ಈಜುಕೊಳ, ಕೋ ವರ್ಕಿಂಗ್ ಸ್ಪೇಸ್ ಮತ್ತು ಹಸಿರಿನಿಂದ ಕೂಡಿದ ಆಧುನಿಕ ಸೌಲಭ್ಯಗಳಿರುವ ಯೋಜನೆಗಳು ಜನರಿಗೂ ಇಷ್ಟವಾಗುತ್ತಿವೆ. ಇವು ಐಟಿ ಪಾರ್ಕ್, ಮೆಟ್ರೊ ನಿಲ್ದಾಣ ಮತ್ತು ಮುಂಬರುವ ವಾಣಿಜ್ಯ ಪ್ರದೇಶಗಳಿಗೆ ಹತ್ತಿರ ಇವೆ ಎಂಬುದು ವಿಶೇಷ. ಮಾರುಕಟ್ಟೆಯ ಅಂಕಿ-ಅಂಶಗಳ ಪ್ರಕಾರ ಇದು ಅಲ್ಪಾವಧಿಧಿಯ ಏರಿಕೆಯಲ್ಲ, ಬದಲಿಗೆ ಬೆಂಗಳೂರಿನಲ್ಲಿವಸತಿ ಯೋಜನೆಗಳ ಆರಂಭವು ಹಣಕಾಸು ವರ್ಷ 2025ರಲ್ಲಿಸುಮಾರು 124 ಮಿಲಿಯನ್ ಚದರ ಅಡಿಗೆ ಬೆಳೆದಿದೆ. ಮಧ್ಯಮ ಹಾಗೂ ಐಷಾರಾಮಿ ಮನೆಗಳ ಬೇಡಿಕೆ ಮತ್ತು ಉತ್ತಮ ಸಂಪರ್ಕದ ಬಲದಿಂದಾಗಿ ಹಣಕಾಸು ವರ್ಷ 2026ರಲ್ಲಿಈ ಟ್ರೆಂಡ್ ಇನ್ನಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.
ಬಾಕ್ಸ್
ಹೂಡಿಕೆದಾರರಿಗೆ ಆಕರ್ಷಣೆ
-ದೊಡ್ಡ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವಿಕೆಗೆ (ಮೆಟ್ರೊ, ಏರ್ ಪೋರ್ಟ್ ಸಂಪರ್ಕ, ಎಕ್ಸ್ ಪ್ರೆಸ್ ವೇ) ನಂಟಿರುವ ಮೈಕ್ರೊ ಮಾರ್ಕೆಟ್ ಗಳ ಮೇಲೆ ಗಮನ ಹರಿಸುವುದು.
-ಹೊಸ ಜಿಸಿಸಿ ಮತ್ತು ಟೆಕ್ ಪಾರ್ಕ್ಗಳು ಎಲ್ಲಿನಿರ್ಮಾಣವಾಗುತ್ತಿವೆ ಎಂಬುದರ ಮೇಲೆ ನಿರ್ಮಾಣ ಕಾರ್ಯ ಮಾಡುವುದು.
-ರಿಯಲ್ ಎಸ್ಟೇಟ್ ಕ್ಷೇತ್ರದ ಲಾಭವು ಸ್ಥಳ ಮತ್ತು ಸಂಪರ್ಕದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

