ಜೂ.3 ರಂದು ಪಟ್ಟಾಧಿಕಾರ ಮಹೋತ್ಸವ

Contributed byShridevi Ambekallu|Vijaya Karnataka

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದಲ್ಲಿ ಜೂನ್ 3 ರಂದು ಗುರುಬಸವೇಶ್ವರ ಮಠದಲ್ಲಿ ಮಹಾಂತದೇವರ ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ. ಬೆಳಗ್ಗೆ 5 ಗಂಟೆಗೆ ಗದ್ದುಗೆಗೆ ವಚನಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಪಾಂಡವಮಟ್ಟಿಯ ಡಾ. ಗುರುಬಸವ ಸ್ವಾಮೀಜಿ ಅವರು ಮಹಾಂತದೇವರಿಗೆ ದೀಕ್ಷೆ ನೀಡುವರು. ಹಲವು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

title ceremony special inauguration in belur badami taluk on june 3

ಜೂ.3 ರಂದು ಪಟ್ಟಾಧಿಕಾರ ಮಹೋತ್ಸವ

ಬಾಗಲಕೋಟೆ:

ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಗುರುಬಸವೇಶ್ವರ ಮಠದ ಲಿಂ.ಬಸವಪ್ರಸಾದ ಶ್ರೀಗಳ ಸ್ಮರಣೋತ್ಸವ, ಮಹಾಂತದೇವರ ಪಟ್ಟಾಧಿಕಾರ ಮಹೋತ್ಸವ ಜೂ. 3ರಂದು ನಡೆಯಲಿದೆ.

ನಗರದಲ್ಲಿಮೇ 26ರಂದು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಧಾರ್ಮಿಕ ಮುಖಂಡ ಸಿದ್ದಪ್ಪ ಶಿವನಗುತ್ತಿ, ‘ಬೆಳಗ್ಗೆ 5ಕ್ಕೆ ಗದ್ದುಗೆಗೆ ವಚನಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಪಾಂಡವಮಟ್ಟಿಯ ಡಾ.ಗುರುಬಸವ ಸ್ವಾಮೀಜಿ ಅವರು ಮಹಾಂತದೇವರಿಗೆ ಷಟ್ ಸ್ಥಲ ಬ್ರಹ್ಮೋಪದೇಶ, ಚಿನ್ಮಯಾನುಗ್ರಹ ಪ್ರಸಾದಿ ಸ್ಥಲ ದೀಕ್ಷೆ ನೀಡಲಿದ್ದಾರೆ’ ಎಂದು ಹೇಳಿದರು.

ವಿವಿಧ ಮಠಾಧೀಶರು ಭಾಗಿ

ಇಳಕಲ್ ನ ಡಾ. ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿಪಾಂಡವಮಟ್ಟಿಯ ಡಾ.ಗುರುಬಸವ ಸ್ವಾಮೀಜಿ, ಬೇಲೂರಿನ ಪ್ರಭುಮಹಾಂತ ಗುರು ಬಸವಪ್ರಸಾದ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಹಾಲಕೇರಿಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ವಿಜಯಪುರದ ಬಸವಕುಮಾರ ಸ್ವಾಮೀಜಿ ಶಿರೂರ ಮಹಾಂತತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜೇಂದ್ರ ಸ್ವಾಮೀಜಿ, ಗುತ್ತಲದ ಗುರುಸಿದ್ಧ ಸ್ವಾಮೀಜಿ, ಅನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಉಸ್ತುರಿ ಗ್ರಾಮದ ಕೊರನೇಶ್ವರ ಸ್ವಾಮೀಜಿ, ಬೇಲೂರಿನ ಮಾತೋಶ್ರೀ ಮುಕ್ತಾಯಮ್ಮನವರು ಭಾಗವಹಿಸಲಿದ್ದಾರೆ.