ಶ್ರೀಕೃಷ್ಣನಿಗೆ 2028-30ರ ಪರ್ಯಾಯ ಅವಧಿಯಲ್ಲಿಸಾವಯವ ನೈವೇದ್ಯ ಸಮರ್ಪಣೆ
ಉಡುಪಿ:
ಸೋದೆ ಶ್ರೀವಾದಿರಾಜ ಮಠದ(2028, ಜ. 18ರಿಂದ 2030, ಜ. 17) ಪರ್ಯಾಯ ಅವಧಿಯಲ್ಲಿಶ್ರೀಕೃಷ್ಣನಿಗೆ ನಿತ್ಯ ಸಾವಯವ ಬೆಳ್ತಿಗೆ ಅಕ್ಕಿಯ ಶುದ್ಧ ನೈವೇದ್ಯ ಸಮರ್ಪಣಂ ನಡೆಯಲಿದೆ ಎಂದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಸಂಸ್ಥೆ ಸಹಯೋಗದಲ್ಲಿಮೇ 28ರಂದು ನಡೆದ ಕಾರ್ಯಕ್ರಮದಲ್ಲಿಅನ್ನ ಬ್ರಹ್ಮ ಶ್ರೀಕೃಷ್ಣನಿಂದ ಅನುಗ್ರಹಿತ ಬೊಗಸೆ ಭತ್ತ ಬೀಜವನ್ನು 10 ಜಿಲ್ಲೆಗಳ 200 ರೈತರಿಗೆ ಪ್ರದಾನ ಮಾಡಿ ಮಾತನಾಡಿದರು.
ಸಂಶೋಧನ ಪ್ರತಿಷ್ಠಾನದ ಶ್ರೀವತ್ಸ ಮಾತನಾಡಿ, ‘ಶುದ್ಧ ಆಹಾರ ಸಮಾಜಕ್ಕೆ ನೀಡುವ ನಿಟ್ಟಿನಲ್ಲಿಪ್ರತಿಷ್ಠಾನ 264 ತಳಿಗಳನ್ನು ಬೆಳೆಸುತ್ತಿದೆ. 2004ರಲ್ಲಿಭತ್ತ ತಳಿ ದಾಖಲಾತಿ ಆರಂಭವಾಗಿದೆ. ದೇಶದಲ್ಲಿದ್ದ 2 ಲಕ್ಷ ಭತ್ತ ತಳಿಗಳಲ್ಲಿ70,000 ತಳಿ ಬೀಜ ಉಳಿದಿದೆ. ಪ್ರತಿಷ್ಠಾನವು 10 ಜಿಲ್ಲೆಗಳಲ್ಲಿಬೊಗಸೆ ಭತ್ತ ಬೀಜ ಪ್ರದಾನ ಅಭಿಯಾನ ರೂಪಿಸಿದ್ದು 2025ರಲ್ಲಿ99 ರೈತರು 250 ತಳಿಯ ಭತ್ತ ಬೆಳೆದಿದ್ದಾರೆ. ಭತ್ತದ ತಳಿ ವೈವಿಧ್ಯ ಸಂರಕ್ಷಣೆ ಉದ್ದೇಶವಾಗಿದೆ. ದೇವರಿಗೆ ಸಮರ್ಪಣೆಯ ನೆಲೆಯಲ್ಲಿರೈತರು ಸಾವಯವ ಭತ್ತ ಬೆಳೆಯಲಿದ್ದಾರೆ ಎಂದರು.
-----------------
*ಪರ್ಯಾಯ ಅವಧಿಯಲ್ಲಿನಿತ್ಯ ಒಂದೊಂದು ತಳಿ ಭತ್ತದ ಅಕ್ಕಿಯ ಶುದ್ಧ ನೈವೇದ್ಯವನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು. ರೈತರು ಭತ್ತದ ಬೀಜ ಪಡೆದು ಯಾವುದೇ ರಾಸಾಯನಿಕ ಬಳಸದೆ, ವಿಷ ಸಿಂಪಡಿಸದೆ ಸಾವಯವ ಕೃಷಿ ಪದ್ಧತಿಯಲ್ಲಿಭತ್ತ ಬೆಳೆಸಿ ತಳಿಗಳನ್ನು ಉಳಿಸಬೇಕು.
- ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು| ಸೋದೆ ವಾದಿರಾಜ ಮಠ, ಉಡುಪಿ

