ಪೇಜಾವÃ

Contributed byShridevi Ambekallu|Vijaya Karnataka

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಮಠದ ಆಶ್ರಯದಲ್ಲಿ ಹಿಂದೂ ಧಾರ್ಮಿಕ ಶಿಬಿರ ಯಶಸ್ವಿಯಾಗಿ ನಡೆಯಿತು. ಮಕ್ಕಳು, ಯುವಕರು, ಹಿರಿಯರು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡರು. ನಿತ್ಯ ಪಠಣ, ಭಜನೆ, ಕಲೆ, ಯೋಗ ಮುಂತಾದ ಚಟುವಟಿಕೆಗಳು ನಡೆದವು. ಶಿಬಿರದ ಸಮಾರಂಭದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

hindu religious camp closing ceremony of pejavara math

ಧಾರ್ಮಿಕ ಶಿಬಿರ ಸಮಾರೋಪ

ಬೆಂಗಳೂರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆಶ್ರಯದಲ್ಲಿಪೇಜಾವರ ಮಠದ ನೇತೃತ್ವದಲ್ಲಿಮೇ 17ರಿಂದ 23ರವರೆಗೆ ಹಿಂದೂ ದಾರ್ಮಿಕ ಶಿಬಿರ ನಡೆಯಿತು. ಮಕ್ಕಳು, ಮಧ್ಯಮರು, ಹಿರಿಯರು ಎಂಬ ಮೂರು ವಿಭಾಗಗಳಲ್ಲಿಭಾಗವಹಿಸಿದ್ದರು.

ನಿತ್ಯಸ್ತೋತ್ರ, ಭಜನೆ, ಕಲೆ, ಆಟ, ಕರಕುಶಲ ವಸ್ತುಗಳ ತಯಾರಿ, ಗೀತೆ, ಧಾರ್ಮಿಕ ಪ್ರಶ್ನೋತ್ತರ, ಯೋಗ ಮೊದಲಾದ ಅಂಶಗಳಿಂದ ಕೂಡಿದ ಶಿಬಿರದಲ್ಲಿಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶ ನೀಡಿದರು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ನಿತಿನ್ , ವೆಂಕಟೇಶ ಚನ್ನಳ್ಳಿ, ಕೃಷ್ಣರಾಜಭಟ್ ಕುತ್ಪಾಡಿ ಮೊದಲಾದವರು ಸಂಪನ್ಮೂಕ ವ್ಯಕ್ತಿಗಳಾಗಿ ಭಾಗವಹಿಸಿದ್ದರು .