ವಾರ ಭವಿಷ್ಯ

Contributed byShridevi Ambekallu|Vijaya Karnataka

ಈ ವಾರದ ರಾಶಿ ಭವಿಷ್ಯವು ಮೇಷದಿಂದ ಮೀನದವರೆಗೆ ಎಲ್ಲಾ ರಾಶಿಯವರಿಗೆ ಶುಭ ಸುದ್ದಿಗಳನ್ನು ನೀಡುತ್ತದೆ. ಹೊಸ ಗೆಳೆಯರ ಭೇಟಿ, ಆರೋಗ್ಯ ಸುಧಾರಣೆ, ಉದ್ಯೋಗದಲ್ಲಿ ಪ್ರಗತಿ, ಧನಾಗಮನ, ಮತ್ತು ಸರಕಾರದಿಂದ ಲಾಭದಂತಹ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವಿರೋಧಿಗಳು ದೂರ ಸರಿಯುವರು. ಕೆಲವು ರಾಶಿಯವರಿಗೆ ಸಂತಾನ ಭಾಗ್ಯ, ವಾಹನ, ಭೂಮಿ, ಮತ್ತು ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ಈ ವಾರವು ಹೆಚ್ಚಿನ ರಾಶಿಯವರಿಗೆ ಮಂಗಳಕರವಾಗಿದೆ.

weekly horoscope this week to attain happiness success and significant gains we need to get rid of lethargy

ಮೇಷ

ಹೊಸ ಗೆಳೆಯರು ಸಿಗುವುದರಿಂದ ಸಂತೋಷ. ವಿರೋಧಿಗಳು ದೂರ ಸರಿಯುವರು. ಆರೋಗ್ಯ ಉತ್ತಮ. ಉದ್ಯೋಗದಲ್ಲಿಎಲ್ಲರೂ ನಿಷ್ಠೆಯಿಂದಿರುವರು. ಸರಕಾರದಿಂದ ಸನ್ಮಾನ. ಹೊಸ ವಸ್ತ್ರ ಖರೀದಿ ಮಾಡುವಿರಿ. ಉಷ್ಣಸಂಬಂಧಿ ಆಹಾರ ತಿನ್ನದಿರುವುದು ಒಳ್ಳೆಯದು. ಆದಿತ್ಯಹೃದಯ ಪಠಿಸಿ.

ಅದೃಷ್ಟಸಂಖ್ಯೆ 6

ವೃಷಭ

ಹಣದ ಹರಿವು ನಿರಂತರವಾಗಿರುವುದು. ಆರೋಗ್ಯದಲ್ಲಿಅಭಿವೃದ್ಧಿ. ಹೊಸ ವಸ್ತಾ್ರಭರಣ ಕೊಳ್ಳುವಿರಿ. ಸಂಗಾತಿಯಿಂದ ಸುಖ. ಮಕ್ಕಳ ಭಾಗ್ಯ ಲಭಿಸುವುದು. ವಿದ್ಯಾರ್ಥಿಗಳಿಗೆ ಶುಭ. ಲಲಿತಕಲೆಯಲ್ಲಿರುವವರಿಗೆ ಉತ್ತಮ ಅವಕಾಶ. ಸರಕಾರದಿಂದ ಲಾಭ.

ಅದೃಷ್ಟಸಂಖ್ಯೆ 8

ಮಿಥುನ

ಒಳ್ಳೆಯ ಯೋಗದಿಂದ ಕೈಹಾಕಿದ ಕೆಲಸ ಕಾರ್ಯಗಳು ಈಡೇರುವುವು. ಅವಿವಾಹಿತರಿಗೆ ವಿವಾಹಭಾಗ್ಯ. ಸಂತಾನಾಪೇಕ್ಷಿಗಳಿಗೆ ಸಂತಾನ. ವಿದ್ಯೆಯಲ್ಲಿಪ್ರಗತಿ. ಆರೋಗ್ಯ ಉತ್ತಮ. ಭೋಗಭಾಗ್ಯಗಳು ಲಭಿಸುವುವು. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ. ಕೋರ್ಟು ವಿವಾದಗಳು ಬಗೆಹರಿಯುವುವು. ವ್ಯಾಪಾರದಲ್ಲಿಅಭಿವೃದ್ಧಿ. ಕಲೆಯಲ್ಲಿಪ್ರಗತಿ ಕಂಡುಬರುವುದು.

ಅದೃಷ್ಟಸಂಖ್ಯೆ 3

ಕಟಕ

ಆದಾಯಕ್ಕೆ ಅನೇಕ ದಾರಿಗಳಿರುತ್ತವೆ. ವಿರೋಧಿಗಳು ದೂರ ಸರಿಯುವರು. ಸ್ನೇಹಿತರು, ಒಳ್ಳೆಯ ವಾಹನ, ಗೌರವ, ಪ್ರಸಿದ್ಧಿ, ಅದೃಷ್ಟ ನಿಮ್ಮದಾಗುತ್ತದೆ. ಶುಭಕಾರ್ಯಗಳಿಗೆ ಧನವ್ಯಯ. ಕೈಹಾಕಿದ ಕೆಲಸ ಕಾರ್ಯಗಳಲ್ಲಿಜಯ.

ಅದೃಷ್ಟಸಂಖ್ಯೆ 1

ಸಿಂಹ

ವ್ಯಾಪಾರದಲ್ಲಿಅಭಿವೃದ್ಧಿ. ಆರೋಗ್ಯ ಉತ್ತಮ. ಧನಾಗಮನ. ಉದ್ಯೋಗದಲ್ಲಿಬಡ್ತಿ, ಗೌರವ ಸನ್ಮಾನ ಲಭಿಸಲಿವೆ. ಎಂತಹ ಕ್ಲಿಷ್ಟ ಕಾರ್ಯವನ್ನಾದರೂ ಪೂರೈಸುವಿರಿ. ಆಡಿಟಿಂಗ್ ಹಾಗೂ ಅಕೌಂಟಿಂಗ್ ನಿಂದ ಒಳ್ಳೆಯ ಲಾಭ. ಉತ್ತಮ ವಾಗ್ಮಿಯಾಗಿ ಲಾಭ ಹೊಂದುವಿರಿ. ವಿದ್ಯಾರ್ಥಿಗಳಿಗೆ ಶುಭ ಸಮಯ.

ಅದೃಷ್ಟಸಂಖ್ಯೆ 1

ಕನ್ಯ

ಆರೋಗ್ಯದಲ್ಲಿಸುಧಾರಣೆ. ಧನಲಾಭ. ಪ್ರಯತ್ನಗಳಲ್ಲಿಜಯ ಕಾಣುವಿರಿ. ಸಂತಾನ ಭಾಗ್ಯ. ಕೆಲಸದಲ್ಲಿಬಡ್ತಿ. ವ್ಯಾಪಾರದಲ್ಲಿವಿಸ್ತರಣೆ, ಭೋಗವಿಲಾಸದ ಜೀವನ, ಮಕ್ಕಳಿಂದ ಸಂತೋಷ, ಸರಕಾರದಿಂದ ಲಾಭವಿರುವುದು.

ಅದೃಷ್ಟಸಂಖ್ಯೆ 3

ತುಲ

ನೂತನ ವಸ್ತಾ್ರಭರಣ ಖರೀದಿಸುವಿರಿ. ಆರೋಗ್ಯದಲ್ಲಿಸುಧಾರಣೆ. ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಪಡೆಯುವಿರಿ. ನಿರ್ದಿಷ್ಟ ಆದಾಯ ಬರುವಂತಾಗುವುದು. ಸರಕಾರದಿಂದ ಸಹಾಯ. ಮನೆಯಲ್ಲಿಶುಭಕಾರ್ಯ. ಸಂಗಾತಿಯಿಂದ ಅದೃಷ್ಟ. ಮಿತ್ರರಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿಅಭ್ಯುದಯ.

ಅದೃಷ್ಟಸಂಖ್ಯೆ 8

ವೃಶ್ಟಿಕ

ಆರೋಗ್ಯದಲ್ಲಿಸುಧಾರಣೆ. ಮನೆಯಲ್ಲಿಶುಭಕಾರ್ಯ. ಸರಕಾರದಿಂದ ಸಹಾಯ. ಧಾರ್ಮಿಕ ಕಾರ್ಯಗಳಲ್ಲಿಆಸಕ್ತಿ. ಉನ್ನತ ಅಧಿಕಾರ ಪ್ರಾಪ್ತವಾಗುವುದು. ಪಿತ್ರಾರ್ಜಿತ ಆಸ್ತಿ ದೊರೆಯುವುದು. ವಿದ್ಯಾರ್ಥಿಗಳಿಗೆ ಶುಭಸಮಯ.

ಅದೃಷ್ಟಸಂಖ್ಯೆ 3

ಧನುಸ್ಸು

ಕೈಗೊಂಡ ಕೆಲಸ ಕಾರ್ಯಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳನ್ನು ಖರೀದಿಸುವಿರಿ. ಮೇಲಧಿಕಾರಿಗಳಿಂದ ಅನುಕೂಲ. ಆರ್ಥಿಕ ಸ್ಥಿತಿಗತಿ ಉತ್ತಮ. ಉದ್ಯೋಗದಲ್ಲಿಬಡ್ತಿ. ದೂರ ಪ್ರಯಾಣದಿಂದ ಲಾಭ. ಮನಸ್ಸಿಗೆ ನೆಮ್ಮದಿ. ವ್ಯಾಪಾರದಲ್ಲಿಅಭಿವೃದ್ಧಿ. ಕೈಕೆಳಗಿನ ಕೆಲಸಗಾರರು ಪ್ರಾಮಾಣಿಕರಾಗಿರುವರು.

ಅದೃಷ್ಟಸಂಖ್ಯೆ 1

ಮಕರ

ಸಂಗಾತಿಯಿಂದ ಸುಖ. ಅನೇಕ ಮೂಲಗಳಿಂದ ಆದಾಯ. ವಿದ್ಯಾರ್ಥಿಗಳಿಗೆ ಶುಭ. ಕೃಷಿಕರಿಗೆ ಲಾಭ. ಆತ್ಮವಿಶ್ವಾಸ ಹೆಚ್ಚುತ್ತದೆ. ಕೈಹಾಕಿದ ಕೆಲಸ ಜಯ ಕಾಣುವುದು. ವಾಹನ ಸೌಖ್ಯ. ಭೂಮಿಯಿಂದ ಲಾಭ. ಬಂಧು ಬಾಂಧವರ ಪ್ರೀತಿ ಸಿಗುವುದು.

ಅದೃಷ್ಟಸಂಖ್ಯೆ 3

ಕುಂಭ

ಧೈರ್ಯದಿಂದ ಮುನ್ನುಗ್ಗುವಿರಿ. ವಿರೋಧಿಗಳ ಮೇಲೆ ಜಯ. ಸರಕಾರದಿಂದ ಸಹಾಯ ಸಿಗುತ್ತದೆ. ವಾದವಿವಾದಗಳಲ್ಲಿಗೆಲ್ಲುವಿರಿ. ರಿಯಲ್ ಎಸ್ಟೇಟ್ ನಿಂದ ಲಾಭ ಪಡೆಯುವಿರಿ. ಸಹೋದ್ಯೋಗಿಗಳಿಂದ ಲಾಭ. ಪ್ರೇಮಿಗಳಿಗೆ ಅನುಕೂಲ.

ಅದೃಷ್ಟಸಂಖ್ಯೆ 9

ಮೀನ

ಧನಾಗಮನ. ಆರೋಗ್ಯದಲ್ಲಿಸುಧಾರಣೆ. ಸಾಲ ತೀರಿಸುವಿರಿ. ಹೋರಾಟದಲ್ಲಿಜಯ ಕಾಣುವಿರಿ. ಒಳ್ಳೆಯ ಪದವಿ. ಸರಕಾರದಿಂದ ಗೌರವ. ನಿಮಗೆ ಇಷ್ಟಬಂದ ಜಾಗಕ್ಕೆ ವರ್ಗಾವಣೆ ಯಾಗುವುದು. ಆಕಸ್ಮಿಕ ಧನಾಗಮನ. ಮನೆಯಲ್ಲಿಶುಭಕಾರ್ಯ.

ಅದೃಷ್ಟಸಂಖ್ಯೆ 3

ಡಾ.ಅನಸೂಯ ಎಸ್ .ರಾಜೀವ್