ಶೃಂಗೇರಿ ಜಗದ್ಗುರುಗಳಿಂದ ನೇಪಾಳದಲ್ಲಿವಿಜಯಯಾತ್ರೆ
ಶೃಂಗೇರಿ: ಆರು ದಶಕಗಳ ಬಳಿಕ ಶೃಂಗೇರಿ ಶಾರದಾ ಪೀಠದ ಜಗದ್ಗುರು ಗಳು ನೇಪಾಳದಲ್ಲಿವಿಜಯಯಾತ್ರೆ ಕೈಗೊಂಡಿದ್ದು ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಕಠ್ಮುಂಡಿವಿಗೆ ಆಗಮಿಸಿದಾಗ ಭಕ್ತರು ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತ ನೀಡಿದರು.
ಮೇ 22ರಿಂದ 7ದಿನಗಳ ಕಾಲ ಜಗದ್ಗುರುಗಳು ನೇಪಾಳದಲ್ಲಿವಿಜಯಯಾತ್ರೆ ಕೈಗೊಂಡಿದ್ದು, ಮಂಗಳೂರಿನಿಂದ ವಿಶೇಷ ವಿಮಾನದಲ್ಲಿನೇಪಾಳಕ್ಕೆ ತೆರಳಿದ್ದಾರೆ. ಹಲವು ಧಾರ್ಮಿಕ ಕಾರ್ಯಕ್ರಮ, ದೇವಾಲಯಗಳಿಗೆ ಭೇಟಿ ಹಾಗೂ ಅನುಗ್ರಹ ಸಂದೇಶ ನೀಡಲಿದ್ದಾರೆ. ಜಗದ್ಗುರುಗಳು ಪಶುಪತಿ ದೇವಾಲಯ, ಶ್ರೀ ರಾಮಚಂದ್ರಸ್ವಾಮಿ ಹಾಗೂ ಅಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿಭಾಗಿಯಾದರು.
ನಾವು ಬೇರೆ ದೇಶಕ್ಕೆ ಬಂದಿರುವೆ ಎಂದು ಅಂದುಕೊಂಡಿಲ್ಲ. ಸನಾತನ ಧರ್ಮ ಪರಿಪಾಲಿಸುವ ಭಾರತ ಮತ್ತು ನೇಪಾಳದಲ್ಲಿಯಾವುದೇ ಭೇದ ಇಲ್ಲ. ಸಂಸ್ಕೃತಿ, ಪರಂಪರೆಯಲ್ಲಿನಾವು ಒಂದೇ ಆಗಿದ್ದೇವೆ ಎಂದು ಜಗದ್ಗುರುಗಳು ತಮ್ಮ ಅನುಗ್ರಹ ಭಾಷಣದಲ್ಲಿತಿಳಿಸಿದ್ದಾರೆ.
======
ಬಾಕ್ಸ್
ಪಶುಪತಿನಾಥ ದೇವಾಲಯದಲ್ಲಿಶಿಲಾಶಾಸನ
ಶಾರದಾ ಪೀಠದ 35ನೇ ಜಗದ್ಗುರು ಶ್ರೀಅಭಿನವ ವಿದ್ಯಾತೀರ್ಥರು 1964ರಿಂದ 1968ರ ನಾಲ್ಕು ವರ್ಷದ ಧರ್ಮ ದಿಗ್ವಿಜಯ ಯಾತ್ರೆ ಸಂದರ್ಭದಲ್ಲಿ1967ರಲ್ಲಿ ನೇಪಾಳ ದಲ್ಲಿ10 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಮಹಾಶಿವರಾತ್ರಿ ಶುಭ ಸಂದರ್ಭದಲ್ಲಿಪಶುಪತಿನಾಥನನ್ನು ಪೂಜಿಸಿದರು. ಆ ಸಮಯದಲ್ಲಿನೇಪಾಳವನ್ನು ಆಳುತ್ತಿದ್ದ ರಾಜಾಮಹೇಂದ್ರರು ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಶೃಂಗೇರಿಯ ಪೀಠವನ್ನೇರಲಿದ್ದ ಶ್ರೀ ಸೀತಾರಾಮ ಅಂಜನೇಯಲು (36ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ) ಗುರುಗಳ ಜತೆಗೆ ನೇಪಾಳಕ್ಕೆ ತೆರಳಿದ್ದರು. ಜಗದ್ಗುರುಗಳು ನೇಪಾಳಕ್ಕೆ ಭೇಟಿ ನೀಡಿದ ಸ್ಮರಣಾರ್ಥ ನೇಪಾಳ ಸರಕಾರ ಪಶುಪತಿನಾಥ ದೇವಾಲಯದಲ್ಲಿಶಿಲಾ ಶಾಸನವನ್ನು ಹಾಕಿತ್ತು.
25ಶ್ರೀ2
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ನೇಪಾಳಕ್ಕೆ ಆಗಮಿಸಿದ ಸಂದರ್ಭದಲ್ಲಿಅಲ್ಲಿನ ಭಕ್ತರು ಸಂಭ್ರಮದಿಂದ ಬರಮಾಡಿಕೊಂಡರು.
25ಶ್ರೀ2-ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ನೇಪಾಳಕ್ಕೆ ಆಗಮಿಸಿದ ಸಂದರ್ಭದಲ್ಲಿಅಲ್ಲಿನ ಭಕ್ತಾದಿಗಳು ಸಂಭ್ರಮದಿಂದ ಬರಮಾಡಿಕೊಂಡರು.

