ಸಚಿವಾಕಾಂಕ್ಷಿಗಳು ದಿಲ್ಲಿಗೆ ದೌಡು

Contributed byKeerthi Prasad|Vijaya Karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ತೀವ್ರಗೊಂಡಿದೆ. ಹಲವು ಆಕಾಂಕ್ಷಿಗಳು ದಿಲ್ಲಿಗೆ ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ. ಅನುಭವಿಗಳು, ಹೊಸ ಮುಖಗಳು, ಮಹಿಳೆಯರು, ಹಿರಿತನ, ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ.

ministers aspirants dash to delhi political turn after siddaramaiahs resignation

ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಸರಕಾರ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಸಚಿವ ಸ್ಥಾನಕ್ಕೂ ಲಾಬಿ ತೀವ್ರವಾಗಿದೆ. ಹಾಗೆಯೇ ಸಚಿವಾಕಾಂಕಿ ಗಳ ದಂಡು ದಿಲ್ಲಿಗೆ ದೌಡಾಯಿಸಿದೆ. ಗುರುವಾರ ರಾಜೀನಾಮೆ ಸಲ್ಲಿಕೆ ಬಳಿಕ ಸಿದ್ದರಾಮಯ್ಯ ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದರು. ಹಾಗೆಯೇ ಡಿ.ಕೆ.ಶಿವಕುಮಾರ್ ಸಹ ದಿಲ್ಲಿಗೆ ಹೊರಟಿದ್ದರಿಂದ ಗುರುವಾರ ಸಂಜೆಯಿಂದಲೇ ಆಕಾಂಕ್ಷಿಗಳು ದಿಲ್ಲಿಗೆ ತೆರಳಿದ್ದಾರೆ. ಹೈಕಮಾಂಡ್ ಭೇಟಿಗೆ ತೆರಳಿರುವ ಶಿವಕುಮಾರ್ ಸಂಭಾವ್ಯ ಸಚಿವರ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ ಸಿದ್ದರಾಮಯ್ಯನವರ ಸರಕಾರದಲ್ಲಿಸಚಿವರಾಗಿದ್ದವರ ಪೈಕಿ ಕೆಲವರು ಮತ್ತೆ ಸ್ಥಾನ ಪಡೆದುಕೊಳ್ಳುವ ಲೆಕ್ಕಾಚಾರದೊಂದಿಗೆ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು ಕಂಡುಬಂತು. ಎರಡು-ಮೂರು ಬಾರಿ ಶಾಸಕರಾದವರು ಹಾಗೂ ಮೊದಲ ಬಾರಿ ಶಾಸಕರು, ಎಂಎಲ್ಸಿಗಳಾದವರು ಸಹ ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಹಿರಿತನ, ಅನುಭವ, ಹೊಸ ಮುಖದ ಲೆಕ್ಕಾಚಾರದೊಂದಿಗೆ ಸ್ಥಾನಮಾನದ ನಿರೀಕ್ಷೆಯಲ್ಲಿದಿಲ್ಲಿಯಲ್ಲಿವಾಸ್ತವ್ಯ ಹೂಡಿದ್ದಾರೆ.