ಗರ್ಭಾಶಯ ಗಡ್ಡೆಗೆ ಔಷಧ
ಗರ್ಭಾಶಯದ ಗಡ್ಡೆ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಮಹಿಳೆಯರಲ್ಲಿಕಂಡುಬರುವ ಒಂದು ಸಾಮಾನ್ಯ ರೀತಿಯ ಹಾಗೂ ಕ್ಯಾನ್ಸರ್ ರಹಿತ ಬೆಳವಣಿಗೆ ಇದು.
ಗರ್ಭಾಶಯದಲ್ಲಿಹೊರ, ಮಧ್ಯ ಹಾಗೂ ಒಳ ಪದರ ಇದೆ. ಗಡ್ಡೆಗಳು ಈ ಮೂರು ಪದರಗಳಲ್ಲಿಎಲ್ಲಿಯಾದರೂ ಏರ್ಪಡಬಹುದು. ಗಡ್ಡೆಯ ಬೆಳವಣಿಗೆಯ ಸ್ಥಳದ ಆಧಾರದ ಮೇಲೆ ಇದನ್ನು ಐದು ವಿಧಗಳಲ್ಲಿವಿಂಗಡಿಸಬಹುದು. ಇಂಟ್ರಾ ಮುರಲ್ ಗಡ್ಡೆ, ಸಬ್ ್ಬರೋಸಲ್ ಗಡ್ಡೆ, ಸಬ್ ಮ್ಯಾಕಸಲ್ ಗಡ್ಡೆ, ಪೆಡಂ ಕ್ಯಾಲೆಟಡ್ ಗಡ್ಡೆ, ಗರ್ಭ ಕಂಠದ ಗಡ್ಡೆ. ಇದು ಸಾಮಾನ್ಯವಾಗಿ 20-40ರ ವಯೋಮಾನದೊಳಗೆ ಕಂಡುಬರುತ್ತದೆ. ಹಾರ್ಮೋನ್ ಅಸಮತೋಲನ, ಜೆನೆಟಿಕ್ ರೂಪಾಂತರ, ಅನುವಂಶೀಯತೆ, ಬೊಜ್ಜು, ಮಾನಸಿಕ ಒತ್ತಡ ಮುಖ್ಯ ಕಾರಣ. ದೀರ್ಘಕಾಲದ ಋುತುಸ್ರಾವ, ಹೊಟ್ಟೆ ನೋವು/ ಹೊಟ್ಟೆ ಉಬ್ಬಿದ ಅನುಭವ, ಬೆನ್ನು ನೋವು, ಸಂಭೋಗದ ಸಮಯದಲ್ಲಿನೋವು, ಮಲಬದ್ಧತೆ, ಮೂತ್ರ ವಿಸರ್ಜನೆ ಸಂಬಂಧಿತ ಸಮಸ್ಯೆಗಳು, ಗರ್ಭಾಶಯದ ಗಡ್ಡೆಯ ವಿಧ ಮತ್ತು ಗಾತ್ರವು ಬಂಜೆತನವನ್ನು ಉಂಟು ಮಾಡುತ್ತವೆ.
‘ ಹೋಮಿಯೋಪಥಿ ಚಿಕಿತ್ಸೆ ಅಥವಾ ನಿರ್ವಹಣೆ ಹೋಮಿಯೋಪಥಿಯಲ್ಲಿರೋಗದ ಮೂಲ ಕಾರಣವನ್ನು ಹುಡುಕಿ ರೋಗಿಯ ರೋಗಲಕ್ಷಣದ ಆಧಾರದ ಮೇಲೆ ಅದಕ್ಕೆ ಸೂಕ್ತವಾಗಿ ಹೊಂದುವ ಔಷಧವನ್ನು ನೀಡುತ್ತೇವೆ ಹಾಗೂ ರೋಗಿಯನ್ನು ಪೂರ್ಣವಾಗಿ ಪರಿಗಣಿಸಿ ಅವರ ಪ್ರತ್ಯೇಕತೆಗೆ ಹೊಂದುವಂತಹ ಚಿಕಿತ್ಸೆ ನೀಡುತ್ತೇವೆ. ಹೋಮಿಯೋಪಥಿ ಔಷಧಗಳನ್ನು ಸೇವಿಸುವದರಿಂದ ರೋಗಿಯ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಹಾಗೂ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ’ ಎನ್ನುತ್ತಾರೆ ಹೋಮಿಯೋಕೇರ್ ಸಂಸ್ಥೆಯ ತಜ್ಞರು.
/////////////////////////
ಗ್ಯಾಸ್ಟ್ರೈಟಿಸ್ ಗೆ ಸರಳ ಚಿಕಿತ್ಸೆ
ಜಠರದುರಿತ, ಗ್ಯಾಸ್ಟ್ರೈಟಿಸ್ ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಎನಿಸಿಕೊಳ್ಳುತ್ತದೆ. ಹೊಟ್ಟೆಯ ಒಳಪದರದ ಉರಿಯೂತವಿದು. ಗ್ಯಾಸ್ಟ್ರಿಕ್ ಲೋಳೆಪೊರೆಯ ಉರಿಯೂತದಿಂದಾಗಿ ಜಠರದ ರಕ್ಷಣಾತ್ಮಕ ಪದರವು ದುರ್ಬಲಗೊಂಡಾಗ ಅಥವಾ ಹಾನಿಗೊಳಗಾದಾಗ ಜಠರದುರಿತ ಶುರುವಾಗುತ್ತದೆ. ಗ್ಯಾಸ್ಟ್ರಿಕ್ ಅಥವಾ ಜಠರದುರಿತದಲ್ಲಿ ಹಲವು ವಿಧಗಳಿದ್ದು, ಅವುಗಳಲ್ಲಿಅಕ್ಯುಟ್ ಗ್ಯಾಸ್ಟ್ರಿಕ್ , ಕ್ರೋನಿಕ್ ಗ್ಯಾಸ್ಟ್ರಿಕ್ ಹಾಗೂ ಎರೋಸಿವ್ ಗ್ಯಾಸ್ಟ್ರೈಟಿಸ್ ಮತ್ತು ನಾನ್ ಎರೋಸಿವ್ ಗ್ಯಾಸ್ಟ್ರೈಟಿಸ್ ಪ್ರಮುಖ.
ಅತಿಯಾದ ಮದ್ಯ ಸೇವನೆ, ಆಸ್ಟಿರಿನ್ ಮತ್ತು ಐಬುಪ್ರೊಡೇನ್ ನಂತರ ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧಗಳ ದೀರ್ಘಕಾಲೀನ ಬಳಕೆ, ಹೆಲಿಕೋಬ್ಯಾಕ್ಟರ್ ಪೈಲೋರಿಯಿಂದ ಉಂಟಾಗುವ ಸೋಂಕು, ಅತಿ ಮಾನಸಿಕ ಒತ್ತಡ, ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದರಿಂದ ಜಠರದುರಿತ ಕಾಣಿಸಿಕೊಳ್ಳುತ್ತದೆ. ಇದೇ ರೀತಿ ಚಹಾ ಹಾಗೂ ಕಾಫಿಯ ಅತಿ ಸೇವನೆ, ಧೂಮಪಾನ, ದೀರ್ಘಕಾಲಿಕ ವಾಂತಿ, ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದಿರುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಲಕ್ಷಣ
ಹೊಟ್ಟೆಯ ಮೇಲ್ಭಾಗದಲ್ಲಿಸುಡುವ ಸಂವೇದನೆ, ಎದೆ ಉರಿತ, ವಾಕರಿಕೆ, ವಾಂತಿ, ಅಜೀರ್ಣ, ರಕ್ತಸ್ರಾವದ ಜೊತೆ ಕಪ್ಪು ಮಲ ಇತ್ಯಾದಿ. ಕೆಲವು ಜನರಲ್ಲಿಹೊಟ್ಟೆಯ ಉಬ್ಬರ ಮತ್ತು ಹೊಟ್ಟೆ ತುಂಬಿದ ಅನುಭವ, ಸ್ವಲ್ಪ ಮಟ್ಟಿನ ದಣಿವು, ಎದೆಯುರಿಯಂತಹ ಲಕ್ಷಣಗಳು ಜಠರದುರಿತದಲ್ಲಿಕಾಣಿಸಿಕೊಳ್ಳುತ್ತವೆ.
ಸೂಕ್ತ ಜೀವನಶೈಲಿ
ಆಮ್ಲೀಯ ಹಾಗೂ ಕೊಬ್ಬಿನ ಅಹಾರ ಪದಾರ್ಥಗಳಿಂದ ದೂರ ಇರಿ. ಒಮ್ಮೆಲೇ ಹೆಚ್ಚು ಆಹಾರ ಸೇವಿಸುವ ಬದಲು ಕಡಿಮೆ ಪ್ರಮಾಣದ ಆಹಾರವನ್ನು ಹಲವು ಬಾರಿ ಸೇವಿಸಿ. ಒತ್ತಡದಿಂದ ಹೊರ ಬರುವ ಮಾರ್ಗ ಕಂಡುಕೊಳ್ಳಿ. ಪೈಲೋರಿ ಬ್ಯಾಕ್ಟೀರಿಯಾದ ಸೋಂಕನ್ನು ತಪ್ಪಿಸಲು ಸ್ವಚ್ಚತೆ ಹಾಗೂ ಸರಿಯಾದ ಬೇಯಿಸಿದ ಆಹಾರ ಸೇವಿಸಿ. ಪ್ರತಿನಿತ್ಯ ಯೋಗ ಮತ್ತು ವ್ಯಾಯಾಮ ಮಾಡಿ.
ಹೋಮಿಯೋಪಥಿ ಚಿಕಿತ್ಸೆ
ಹೋಮಿಯೋಪಥಿಯಲ್ಲಿಜಠರದುರಿತವನ್ನು ಸಂಪೂರ್ಣ ಗುಣಪಡಿಸುವ ಶಕ್ತಿಯಿದೆ. ವ್ಯಕ್ತಿಯ ಗುಣಲಕ್ಷಣಗಳನ್ನು ತಿಳಿದುಕೊಂಡು ಮತ್ತು ಸಮಸ್ಯೆಯ ನಿಖರ ಕಾರಣ ತಿಳಿದು, ಅದರ ಆಧಾರದ ಮೇಲೆ ಇಲ್ಲಿಹೋಮಿಯೋಪಥಿ ಔಷಧ ಕೊಡಲಾಗುತ್ತದೆ. ಹೋಮಿಯೋಕೇರ್ ಇಂಟರ್ ನ್ಯಾಷನಲ್ ಶಾಖೆಗಳಲ್ಲಿಗ್ಯಾಸ್ಟ್ರೈಟಿಸ್ ಗೆ ಸುಲಭವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಮತ್ತು ಈ ಸಮಸ್ಯೆ ಪದೇಪದೆ ಮರುಕಳಿಸದಂತೆ ಔಷಧ ಕೊಡಬಹುದು. ಜಠರದುರಿತದಿಂದ ಬಳಲುತ್ತಿರುವವರು ನಿಮ್ಮ ಹತ್ತಿರದ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಶಾಖೆಗೆ ಭೇಟಿ ಕೊಟ್ಟು ರೋಗಮುಕ್ತರಾಗಿರಿ ಎಂದು ಈ ಸಂಸ್ಥೆಯ ತಜ್ಞರು ತಿಳಿಸಿದ್ದಾರೆ.
ಬಾಕ್ಸ್
ಹೋಮಿಯೋಕೇರ್ ಇಂಟರ್ ನ್ಯಾಷನಲ್ :
ಕರ್ನಾಟಕದಲ್ಲಿನ ಶಾಖೆಗಳು ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್ ಎಸ್ ಆರ್ ಲೇಔಟ್ ), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಿಜಾಪುರ, ಬೀದರ್ , ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ.
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ.
ಉಚಿತ ಸಮಾಲೋಚನೆ: 955 000 1133
ಉಚಿತ ಕರೆಗೆ: 1800 108 1212
ವೆಬ್ ಸೈಟ್ : ಡಿಡಿಡಿ.hಟಞಛಿಟ್ಚa್ಟಛಿ.ಜ್ಞಿ

