ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್ ಕದನ ವಿರಾಮದ ಅವಧಿ ವಿಸ್ತರಣೆ, ದೇಶೀಯ ಮಾರುಕಟ್ಟೆಯಲ್ಲಿಬೇಡಿಕೆ ಜಗಿತದಿಂದ ಶುಕ್ರವಾರ ಅಪರಂಜಿ ಚಿನ್ನದ ಧಾರಣೆ 1,600 ರೂ. ಹೆಚ್ಚಿ 10 ಗ್ರಾಂಗೆ 1,62,900 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲಿ5,000 ರೂ. ಹೆಚ್ಚಿ ಕೆ.ಜಿಗೆ 2,74,700 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಬಂಗಾರದ ಧಾರಣೆ ಶೇ.1ರಷ್ಟು ಏರಿ, ಔನ್ಸ್ ಗೆ 4,530.72 ಡಾಲರ್ ಆಗಿದೆ. ಬೆಳ್ಳಿ ಬೆಲೆ ಔನ್ಸ್ ಗೆ 75.52 ಡಾಲರ್ ನಲ್ಲಿಸ್ಥಿರವಾಗಿದೆ. ಬೆಂಗಳೂರಿನಲ್ಲಿಅಪರಂಜಿ ಚಿನ್ನದ ಬೆಲೆ 1,580 ರೂ. ಜಿಗಿದು 10 ಗ್ರಾಂಗೆ 1,57,640 ರೂ. ಆಗಿದೆ. ಇಷ್ಟೇ ತೂಕದ ಆಭರಣ ಚಿನ್ನದ ಬೆಲೆಯಲ್ಲಿ1,450 ರೂ. ಹೆಚ್ಚಿ 1,44,500 ರೂ.ಆಗಿದೆ. ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಇದ್ದು ಕೆಲ ದಿನಗಳಿಂದ ಕೆ.ಜಿಗೆ 2,80,000 ರೂ. ಇದೆ.

