ಪ್ರಚಲಿತ

Contributed by: Panchami M S|Vijaya Karnataka•
bimstec maritime security exercise india hosts initiative
ಬಿಮ್ ಸ್ಟೆಕ್ ರಾಷ್ಟ್ರಗಳ ಕವಾಯತು

ಭಾರತ ಮೊದಲ ಬಾರಿಗೆ ಬಿಮ್ ಸ್ಟೆಕ್ (ಆಐಋಖTಉಇ) ರಾಷ್ಟ್ರಗಳ ಜಂಟಿ ಸಮುದ್ರ ಭದ್ರತಾ ಕವಾಯತನ್ನು ಆಯೋಜಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀ ವಿಜಯಪುರಂನಲ್ಲಿಅಕ್ಟೋಬರ್ 30ರಿಂದ ನವೆಂಬರ್ 3ರವರೆಗೆ ಈ ಕವಾಯತು ನಡೆಯಲಿದ್ದು, ಏಳು ಸದಸ್ಯ ರಾಷ್ಟ್ರಗಳ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಇದರಲ್ಲಿಭಾಗವಹಿಸಿವೆ. ಈ ಹಿನ್ನಲೆಯಲ್ಲಿಕವಾಯತಿನ ಸ್ವರೂಪ, ಉದ್ದೇಶದ ಕುರಿತು ಮಾಹಿತಿ ಇಲ್ಲಿದೆ.
ಸ್ವರೂಪ ಹೇಗೆ?

ಈ ಕವಾಯತಿನಲ್ಲಿಮೂರು ದಿನಗಳ ಕಾಲ ಮೇಜಿನ ಮೇಲೆ ಅಭ್ಯಾಸ ಮಾಡಿದ ಬಳಿಕ ಎರಡು ದಿನಗಳ ಬಂದರು ಹಂತದ ಚಟುವಟಿಕೆಗಳು ನಡೆಯಲಿವೆ. ಬಾಂಗ್ಲಾದೇಶ, ಮ್ಯಾನ್ಮಾರ್ , ಶ್ರೀಲಂಕಾ ಮತ್ತು ಥಾಯ್ಲೆಂಡ್ ದೇಶಗಳು ನೌಕಾಪಡೆಯ ಹಡಗುಗಳನ್ನು ಕಳುಹಿಸಿವೆ. ಭೂತಾನ್ ಮತ್ತು ನೇಪಾಳದ ಪ್ರತಿನಿಧಿಗಳೂ ಭಾಗವಹಿಸಿದ್ದಾರೆ. ಶ್ರೀಲಂಕಾದ ಎಸ್ ಎಲ್ ಎನ್ ಎಸ್ ಗಜಬಾಹು ಮತ್ತು ಮ್ಯಾನ್ಮಾರ್ ನ ಯುಎಂಎಸ್ ಕಿಂಗ್ ಆಂಗ್ ಝೇಯಾ ಹಡಗುಗಳು ಕವಾಯತಿನಲ್ಲಿಪಾಲ್ಗೊಂಡಿವೆ. ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಇದರ ಆಯೋಜನೆಯಲ್ಲಿಸಹಕರಿಸುತ್ತಿದೆ.

ಉದ್ದೇಶವೇನು?

ಬಂಗಾಳಕೊಲ್ಲಿಯಲ್ಲಿಸಮುದ್ರ ಚಟುವಟಿಕೆಗಳ ಮೇಲ್ವಿಚಾರಣೆ, ರಾಷ್ಟ್ರಗಳ ನಡುವಿನ ಕಾರ್ಯಾಚರಣಾ ಸಮನ್ವಯ ಮತ್ತು ಪರಸ್ಪರ ಸಹಕಾರ ಹೆಚ್ಚಿಸುವುದು ಕವಾಯತಿನ ಮುಖ್ಯ ಉದ್ದೇಶವಾಗಿದೆ. ಸಮುದ್ರದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಯುವುದು, ಗಡಿಯಾಚೆಯ ಅಪರಾಧಗಳಿಗೆ ಪ್ರತಿಕ್ರಿಯಿಸುವುದು, ಸಮುದ್ರ ಮಾಲಿನ್ಯ ನಿರ್ವಹಣೆ ಹಾಗೂ ವಿಪತ್ತುಗಳ ಸಂದರ್ಭದಲ್ಲಿಮಾನವೀಯ ನೆರವು ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವ ಅಭ್ಯಾಸವೂ ಇದರ ಭಾಗವಾಗಿದೆ.

2025ರಲ್ಲಿಥಾಯ್ಲೆಂಡ್ ನಲ್ಲಿನಡೆದ ಆರನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿಪ್ರಧಾನಿ ನರೇಂದ್ರ ಮೋದಿ ಈ ಜಂಟಿ ಕವಾಯತಿನ ಪ್ರಸ್ತಾಪ ಮಾಡಿದ್ದರು. 2026ರ ಏಪ್ರಿಲ್ ನಲ್ಲಿಬಿಮ್ ಸ್ಟೆಕ್ ಪ್ರಧಾನ ಕಾರ್ಯದರ್ಶಿ ಇಂದ್ರಮಣಿ ಪಾಂಡೆ, ಮೊದಲ ಕವಾಯತು ನವೆಂಬರ್ ನಲ್ಲಿನಡೆಯಲಿದೆ ಎಂದು ತಿಳಿಸಿದ್ದರು. ಈ ಉಪಕ್ರಮವು ಬಂಗಾಳಕೊಲ್ಲಿಪ್ರದೇಶದಲ್ಲಿಸುರಕ್ಷಿತ ಮತ್ತು ಸ್ಥಿರವಾದ ಸಮುದ್ರ ಪರಿಸರ ನಿರ್ಮಿಸುವ ಪ್ರಯತ್ನವಾಗಿದೆ.

ಬಾಕ್ಸ್ :

ಬಂಗಾಳಕೊಲ್ಲಿಬಹುಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಕ್ಕೂಟ (ಆಐಋಖTಉಇ) 1997ರ ಜೂನ್ 6ರಂದು ಬ್ಯಾಂಕಾಕ್ ಘೋಷಣೆಯ ಮೂಲಕ ಸ್ಥಾಪನೆಯಾಯಿತು. ಇದರಲ್ಲಿಭಾರತ, ಬಾಂಗ್ಲಾದೇಶ, ಭೂತಾನ್ , ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಸೇರಿದಂತೆ ಏಳು ರಾಷ್ಟ್ರಗಳಿವೆ.