ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಹಿಂಪಡೆಯಲು ಆಗ್ರಹ

Contributed by: basavarajskprnews@gmail.com|Vijaya Karnataka•
Vijay Karnataka
ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಹಿಂಪಡೆಯಲು ಆಗ್ರಹ

ವಿಕ ಸುದ್ದಿಲೋಕ ಶಿಕಾರಿಪುರ
ರಾಜ್ಯ ಸರಕಾರ ವಿತರಿಸುವ ಹಾಲು, ಮೊಸರು, ತುಪ್ಪ ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು. ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಹೆಚ್ಚಳವನ್ನು ಮರುಪರಿಶೀಲಿಸಿ ಹಿಂಪಡೆಯಬೇಕು ಎಂದು ಆಗ್ರಹಿಸಿ ತಾಲೂಕು ಜೆಡಿಎಸ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ತಾಲೂಕು ಅಧ್ಯಕ್ಷ ಎಸ್ .ಎನ್ . ಯೋಗೇಶ್ ಮಾತನಾಡಿ, ರಾಜ್ಯದ ಜನರು ಬರಗಾಲ ಹಾಗೂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬಿದ್ದಿದೆ ಎಂದರು.

ವಯಸ್ಕರು ಹಾಗೂ ವಯೋವೃದ್ಧರು ಬಳಸುವ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆ ಜನರ ಜೀವನ ನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಾಲು ಮತ್ತು ಇತರ ಉತ್ಪನ್ನಗಳ ಬೆಲೆ ಏರಿಕೆಯಿಂದ ಹೋಟೆಲ್ , ಖಾನಾವಳಿ ಹಾಗೂ ಇತರ ಆಹಾರ ವಿತರಕರು ತಯಾರಿಸುವ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಉಪಾಧ್ಯಕ್ಷ ಎಸ್ .ಎಚ್ . ಮಂಜುನಾಥ್ ಕೊಪ್ಪಲು ಮಾತನಾಡಿ, ರಾಜ್ಯದ ಬಹುತೇಕ ಭಾಗಗಳಲ್ಲಿತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಗೂ ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಹಾಗೂ ಕೃಷಿ ಉತ್ಪಾದನೆಯಲ್ಲಿಕುಸಿತ ಉಂಟಾಗಿದೆ. ಇದರ ಪರಿಣಾಮ ಅಕ್ಕಿ, ಸಕ್ಕರೆ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.

ಜಿಲ್ಲಾಉಪಾಧ್ಯಕ್ಷರಾದ ಎಸ್ .ಆರ್ . ಜಯಪ್ಪ, ಟಿ.ನೀಲಪ್ಪ, ಭೂದೆಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್ .ಎಂ. ಸಂಗಯ್ಯ, ಜಿಲ್ಲಾಒಬಿಸಿ ಕಾರ್ಯಾಧ್ಯಕ್ಷ ಎಸ್ .ಎಸ್ . ಶ್ರೀನಿವಾಸ್ , ತಾಲೂಕು ಒಬಿಸಿ ಅಧ್ಯಕ್ಷ ಗಿಡ್ಡಪ್ಪ, ತಾಲೂಕು ಎಸ್ ಸಿ, ಎಸ್ ಟಿ ಅಧ್ಯಕ್ಷ ನಂದೀಶ್ , ನಗರ ಅಧ್ಯಕ್ಷ ಹೇಮಂತ್ ಕುಮಾರ್ , ಬಿಳಕಿ ಈರಾನಾಯಕ್ , ಮಹಿಳಾ ಘಟಕದ ಅಧ್ಯಕ್ಷೆ ಆಶಾ ತಿಪ್ಪೇಶ್ ನಾಯ್ ್ಕ, ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೋಟೊ ಫೈಲ್ : 18ಎಸ್ ಕೆಪಿ1 ಫೋಟೊ ಶೀರ್ಷಿಕೆ:

ಶಿಕಾರಿಪುರದಲ್ಲಿಬುಧವಾರ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.