ವಿಕ ಸುದ್ದಿಲೋಕ ಗಂಗಾವತಿನಗರದ ಮಹೆಬೂಬ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಗುರುವಾರ ಬಣ್ಣ ಮತ್ತು ಸುಣ್ಣ ಹಚ್ಚಿ ಹೊಸ ರೂಪ ನೀಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಆಂಜನೇಯ ಈಡಿಗೇರ ಮಾತನಾಡಿ, ‘‘ಮೊದಲ ಹಂತದಲ್ಲಿಮಹೆಬೂಬ್ ನಗರದ ಶಾಲೆಗೆ ಬಣ್ಣ ಹಚ್ಚಲಾಗುತ್ತಿದೆ. ನಂತರ ಪಂಪಾನಗರ, ಮುರಾರಿನಗರ, ವಿಠಲಾಪುರ ಹಾಗೂ ರಾಮದುರ್ಗ ಪ್ರದೇಶಗಳ ಶಾಲೆಗೆ ಬಣ್ಣ ಹಚ್ಚಲಾಗುವುದು. ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶವಿದೆ,’’ ಎಂದರು. ಲೇಖಕ ಅಜ್ಮೀರ್ ನಂದಾಪುರ ಮಾತನಾಡಿದರು.
500 ನೋಟ್ ಬುಕ್ ಗಳನ್ನು ವಿತರಿಸುವ ಸಮಾಜಮುಖಿ ಕಾರ್ಯ ಕೈಗೊಳ್ಳಲಾಯಿತು. ನಗರದ ಹಿರಿಯ ಮುಖಂಡ ಕಬ್ಲಿಬಾಬು, ಕರವೇ ತಾಲೂಕು ಅಧ್ಯಕ್ಷ ಕೆ.ಹನುಮಂತಪ್ಪ, ಕನಕಗಿರಿ ತಾಲೂಕು ಅಧ್ಯಕ್ಷ ಮಂಜುನಾಥ ವಿಠಲಾಪುರ, ಮೈನುದ್ದೀನ್ , ಕೃಷ್ಣ ನಾಯಕ ಸೇರಿ ಸಂಘಟನೆಯ ಕಾರ್ಯಕರ್ತರು ಇದ್ದರು.
---
19 ಜಿವಿಟಿ 06
ಗಂಗಾವತಿಯ ಮಹೆಬೂಬ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.