‘ಸಹಕಾರಿ ತತ್ವಗಳ ಸಮರ್ಪಕ ಅಳವಡಿಕೆ, ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಮಣ್ಣಿನ ಫಲವತ್ತತೆಯ ರಕ್ಷಣೆಯಿಂದ ಮಾತ್ರ ರೈತರ ಆರ್ಥಿಕ ಸಬಲೀಕರಣ ಸಾಧ್ಯ’ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಎಸ್ . ವೇಣುಗೋಪಾಲರೆಡ್ಡಿ ಹೇಳಿದರು.
ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದಲ್ಲಿಗುರುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ಮಹಿಳೆಯರು, ಯುವಜನರು ಮತ್ತು ಅಬಲ ವರ್ಗಗಳು ಸಹಕಾರ ಕ್ಷೇತ್ರದಲ್ಲಿಪಾಲ್ಗೊಳ್ಳಬೇಕು. ಮಹಿಳಾ ಸಹಕಾರ ಸಂಘಗಳು ಹೆಚ್ಚು ಸ್ಥಾಪನೆಯಾಗಬೇಕು. ಠೇವಣಿ ಸಂಗ್ರಹದಿಂದ ಮಾತ್ರ ಸಂಘಗಳ ಬಲವರ್ಧನೆಯಾಗಲಿವೆ. ತಾಲೂಕಿನ ನಾಲ್ಕು ಸಹಕಾರ ಬ್ಯಾಂಕುಗಳು ಲಾಭದ ಹಳಿಯಲ್ಲಿಸಾಗುತ್ತಿವೆ. ಆರ್ಥಿಕವಾಗಿ ಸಬಲರಾಗಿರುವವರು ಡಿಸಿಸಿ ಬ್ಯಾಂಕ್ ನಲ್ಲಿಠೇವಣಿ ಇಡುವ ಮೂಲಕ ಸಂಸ್ಥೆಯನ್ನು ಬಲ ಪಡಿಸಬೇಕು’’ ಎಂದರು.
ಮಾಜಿ ಶಾಸಕ ಎಚ್ .ಪಿ. ರಾಜೇಶ್ , ‘‘ಸಹಕಾರಿ ಸಂಘಗಳಿಂದ ಶೂನ್ಯ ಬಡ್ಡಿ ಹಾಗೂ ಶೇ.3ರ ಬಡ್ಡಿದರದಲ್ಲಿಸಿಗುವ ಸಾಲವನ್ನು ಅನ್ಯ ಉದ್ದೇಶಗಳಿಗೆ ಬಳಸದೆ, ಕೃಷಿ ಅಭಿವೃದ್ಧಿಗೆ ವಿನಿಯೋಗಿಸಬೇಕು’’ ಎಂದು ಕಿವಿಮಾತು ಹೇಳಿದರು.
ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್ ) ಉಪಾಧ್ಯಕ್ಷ ಚೇತನ್ ನಾಡಿಗರ್ ಮಾತನಾಡಿ, ‘‘ತಾಲೂಕಿನ 39 ಹಾಲು ಉತ್ಪಾದಕರ ಸಂಘಗಳಿಂದ ನಿತ್ಯ 14 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರಸಗೊಬ್ಬರ, ಕಾಫಿ ಟೀ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದಾಗ ಸುಮ್ಮನಿರುವವರು, ರೈತರ ಹಿತದೃಷ್ಟಿಯಿಂದ ಹಾಲಿನ ದರ 13 ರೂ. ಹೆಚ್ಚಿಸಿದಾಗ ವಿರೋಧಿಸುವುದು ಎಷ್ಟು ಸರಿ? ನಂದಿನಿ ಬ್ರಾಂಡ್ ಅಡಿಯಲ್ಲಿ1.20 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದೇವೆ. ರೈತರಿಗೆ ನೆರವಾಗಲು 1,250 ರೂ. ರಿಯಾಯಿತಿ ದರದಲ್ಲಿಪಶು ಆಹಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಹಾಲಿನ ಸಂಘಗಳನ್ನು ವಿಸ್ತರಿಸಲಾಗುವುದು’’ ಎಂದು ಭರವಸೆ ನೀಡಿದರು.
ನಬಾರ್ಡ್ ಬ್ಯಾಂಕ್ ಜಿಲ್ಲಾಡಿಡಿಎಂ ರಶ್ಮಿ ರೇಖಾ ಮಾತನಾಡಿ, ‘ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಸಂಘಗಳು ಸಂಪೂರ್ಣ ಗಣಕೀಕೃತಗೊಳ್ಳಬೇಕು. ಇದುವರೆಗೆ 150 ಕೋಟಿ ರೂ. ಸಾಲ ವಿತರಿಸಲಾಗಿದೆ. ಬರದ ಛಾಯೆ ನಡುವೆಯೂ, ಮುಂದಿನ ’ಎಲ್ ನಿನೋ’ ಪರಿಸ್ಥಿತಿ ಎದುರಿಸಲು ನಬಾರ್ಡ್ ಸನ್ನದ್ಧವಾಗಿದೆ’’ ಎಂದರು.
ತಾ.ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿದರು. ಈ ವೇಳೆ ಜಿಲ್ಲಾಸಹಕಾರ ಒಕ್ಕೂಟದ ನಿರ್ದೇಶಕ ದೀಪಕ್ ಪಟೇಲ್ , ಲಿಂಗಣ್ಣನಹಳ್ಳಿ ವಿಎಸ್ ಎಸ್ ಎನ್ ಅಧ್ಯಕ್ಷ ಎನ್ .ಎನ್ . ಬಸವರಾಜ್ , ಡಾ.ಜೆ.ಆರ್ . ಷಣ್ಮುಖಪ್ಪ, ಆರ್ .ಎಸ್ . ದಿಲೀಪ್ ಕುಮಾರ್ , ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ತಿಮ್ಮರಾಯಪ್ಪ, ಲಿಂಗಣ್ಣನಹಳ್ಳಿ ಸಹಕಾರ ಕೃಷಿ ಪತ್ತಿನ ಸಂಘದ ಸಿಇಒ ಬಿ.ಟಿ. ಭೀಮಶೆಟ್ಡಿ, ಆವರಗೆರೆ ರುದ್ರಮುನಿ, ಜಿಲ್ಲಾಸಹಕಾರ ಒಕ್ಕೂಟದ ಸಿಇಒ ಶೈಲಜಾ ಚೌಹಾಣ್ ಇತರರು ಇದ್ದರು.
---
ಬಾಕ್ಸ್ ...
ಮಣ್ಣಿನ ಆರೋಗ್ಯ ಕಾಪಾಡಿ
‘‘ಡಾ.ವರ್ಗೀಸ್ ಕುರಿಯನ್ ಅವರು ಗುಜರಾತ್ ನಲ್ಲಿ’ಅಮೂಲ್ ’ ಕ್ರಾಂತಿ ಮಾಡಿದಂತೆ, ನಮ್ಮಲ್ಲೂವಿಪುಲ ಅವಕಾಶಗಳಿವೆ. ನಮ್ಮದು ಬಂಗಾರ ಬೆಳೆಯುವ ಭೂಮಿ. ಆದರೆ, ರಾಸಾಯನಿಕಗಳ ಅತಿಯಾದ ಬಳಕೆಯಿಂದ ಭೂಮಿ ಸವಳಾಗುತ್ತಿದ್ದು, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಅಂತರ್ಜಲ ಕುಸಿಯುತ್ತಿರುವ ಈ ದಿನಗಳಲ್ಲಿರೈತರು ಕೇವಲ ಅಡಕೆ ಬೆಳೆಯ ಹಿಂದೆ ಬೀಳದೆ, ಪರ್ಯಾಯ ಹಾಗೂ ವೈಜ್ಞಾನಿಕ ಬೆಳೆಗಳತ್ತ ಮುಖ ಮಾಡಬೇಕು’’ ಎಂದು ಮಾಜಿ ಶಾಸಕ ರಾಜೇಶ್ ರೈತರಿಗೆ ಸಲಹೆ ನೀಡಿದರು.
-----
19 ಜೆಎಲ್ ಆರ್ 1ಎ
ಜಗಳೂರು ತಾ.ಲಿಂಗಣ್ಣನಹಳ್ಳಿ ಗ್ರಾಮದ ವಿಎಸ್ ಎಸ್ ಎನ್ ನಲ್ಲಿ72ನೇ ಅಖಿಲ ಭಾರತ ಸಹಕಾರ ಸಪ್ತಹ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್ .ಪಿ.ರಾಜೇಶ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ವೇಣುಗೋಪಾಲರೆಡ್ಡಿ ಉದ್ಘಾಟಿಸಿದರು.