ನಿಧನ

Contributed by: santosh.swamy@timesgroup.com|Vijaya Karnataka•
20th november
ಶಿವಶಂಕರ ಸ್ವಾಮಿ

ಮಳವಳ್ಳಿ: ತಾಲೂಕಿನ ನೇಣನೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಿವಶಂಕರ ಸ್ವಾಮಿ (70)ಗುರುವಾರ ನಿಧನರಾದರು. ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಸಂಜೆ ಸ್ವಗ್ರಾಮ ನೇಣನೂರು ಗ್ರಾಮದಲ್ಲಿಜರುಗಿತು.
ಫೋಟೋ- ಶಿವಶಂಕರ್

----------------------------------

ಮಾದಮ್ಮ

ಮಂಡ್ಯ: ತಾಲೂಕಿನ ತಂಡಸನಹಳ್ಳಿ ಗ್ರಾಮದ ಮುಖಂಡ ಲೇಟ್ ನಿಂಗಯ್ಯ ಅವರ ಪತ್ನಿ ಮಾದಮ್ಮ(86) ಅವರು ಬುಧವಾರ ರಾತ್ರಿ ನಿಧನರಾದರು. ನಾಲ್ವರು ಪುತ್ರಿಯರು, ಮೂವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆಯು ಸ್ವಗ್ರಾಮ ತಂಡಸನಹಳ್ಳಿಯ ಅವರ ತೋಟದಲ್ಲಿಗುರುವಾರ ನೆರವೇರಿತು.

ಫೋಟೋ - ಮಾದಮ್ಮ

--------------------------------

ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಮಳವಳ್ಳಿ: ತಾಲೂಕಿನ ಹಲಗೂರು ಸಮೀಪದ ಚೆನ್ನೀಪುರ ಗೇಟ್ ಬಳಿ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿಸ್ಕೂಟರ್ ಸವಾರ ಹುಲ್ಲಾಗಾಲ ಗ್ರಾಮದ ನಿವಾಸಿ ಈರಣ್ಣ (55) ಮೃತಪಟ್ಟಿದ್ದಾರೆ. ಸ್ಕೂಟರ್ ನಲ್ಲಿಹಲಗೂರು ಕಡೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಚೆನ್ನೀಪುರ ಗೇಟ್ ಬಳಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಈರಣ್ಣ ಅವರಿಗೆ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಪೋಟೋ- ಈರಣ್ಣ