ಯೂಥ್ ಫಾರ್ ಸೇವಾ-ವ್ಯಾಬ್ ಟೆಕ್ ಸಹಯೋಗದಲ್ಲಿಅಭಿವೃದ್ಧಿ ಕಾರ್ಯಕ್ಕೆ ಚಾಲನೆ
ವಿಕ ಸುದ್ದಿಲೋಕಗುಡಿಬಂಡೆಗ್ರಾಮೀಣ ಪ್ರದೇಶಗಳಲ್ಲಿಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ವೃದ್ಧಿಸುವ ಉದ್ದೇಶದಿಂದ ತಾಲ್ಲೂಕಿನ ದಪ್ಪರ್ತಿ ಗ್ರಾಪಂ ವ್ಯಾಪ್ತಿಯ ದಪ್ಪರ್ತಿ ಕೆರೆ ಪುನಶ್ಚೇತನ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಯೂಥ್ ಫಾರ್ ಸೇವಾ ಬೆಂಗಳೂರು ಸಂಸ್ಥೆಯು ವ್ಯಾಬ್ ಟೆಕ್ ಕಂಪನಿಯ ಸಿಎಸ್ ಆರ್ ನಿಧಿಯಡಿ ಕೈಗೊಂಡಿರುವ ಈ ಯೋಜನೆಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಇದರ ಅಂಗವಾಗಿ ಕೆರೆಯಲ್ಲಿಬೆಳೆದಿರುವ ಗಿಡಗಂಟಿಗಳು ಹಾಗೂ ಅನಗತ್ಯ ಪೊದೆಗಳನ್ನು ಹಿಟಾಚಿ ಯಂತ್ರದ ಮೂಲಕ ತೆರವುಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕೆರೆ ಉಳಿಸುವಲ್ಲಿಗ್ರಾಮಸ್ಥರ ಸಹಭಾಗಿತ್ವ ಅಗತ್ಯ: k್ಢರೆ ಪುನಶ್ಚೇತನ ಕಾರ್ಯದ ಕುರಿತು ಗ್ರಾಮಸ್ಥರಲ್ಲಿಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿಕರಪತ್ರಗಳನ್ನು ವಿತರಿಸಿ ಯೋಜನೆಯ ಉದ್ದೇಶ, ಮಹತ್ವ ಹಾಗೂ ಅನುಷ್ಠಾನ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ, ಕೆರೆಯ ಪ್ರಸ್ತುತ ಸ್ಥಿತಿಗತಿ, ವಿಸ್ತೀರ್ಣ ಹಾಗೂ ಸುತ್ತಮುತ್ತಲ ಪರಿಸರದ ಚಿತ್ರಣವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆಹಿಡಿಯಲಾಯಿತು. ಮುಂದಿನ ದಿನಗಳಲ್ಲಿಪುನಶ್ಚೇತನ ಕಾಮಗಾರಿಯ ಪ್ರಗತಿ ಹೋಲಿಕೆ ಮಾಡಲು ಈ ಚಿತ್ರಣ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿಮ್ಯಾನೇಜರ್ ಮಂಜುನಾಥ್ ಮಾತನಾಡಿ, ದಪ್ಪರ್ತಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ಕೆರೆ ಪುನಶ್ಚೇತನ ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಿಸಿದರು. ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿಜಲಮೂಲಗಳ ಸಂರಕ್ಷಣೆ ಪ್ರಮುಖ ಪಾತ್ರ ವಹಿಸಲಿದ್ದು, ಕೆರೆಯ ಪುನಶ್ಚೇತನದಿಂದ ಪರಿಸರ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ತಾಲೂಕು ಯೋಜನಾ ಸಂಯೋಜಕ ವಾಹಿನಿ ಸುರೇಶ್ ಮಾತನಾಡಿ, ಕೆರೆ ಪುನಶ್ಚೇತನ ಕಾರ್ಯ ಯಶಸ್ವಿಯಾಗಬೇಕಾದರೆ ರೈತರ ಹಾಗೂ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಕೆರೆಯ ಸಂರಕ್ಷಣೆ ಕೇವಲ ಒಂದು ಸಂಸ್ಥೆಯ ಜವಾಬ್ದಾರಿಯಲ್ಲ; ಅದು ಇಡೀ ಗ್ರಾಮದ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರವೂ ಕೆರೆಯನ್ನು ಸ್ವಚ್ಛವಾಗಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನು ಗ್ರಾಮಸ್ಥರು ವಹಿಸಿಕೊಳ್ಳಬೇಕು. ಯೋಜನೆಯಲ್ಲಿರೈತರ ಪಾತ್ರ ಹಾಗೂ ಜವಾಬ್ದಾರಿಗಳ ಕುರಿತು ಅರಿವು ಮೂಡಿಸಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ನಂಜುಂಡ ಮಾತನಾಡಿ, ಕೆರೆಗಳು ಗ್ರಾಮೀಣ ಜೀವನಾಡಿಗಳಾಗಿದ್ದು, ಅವುಗಳ ಪುನಶ್ಚೇತನದಿಂದ ಮಳೆ ನೀರಿನ ಸಂಗ್ರಹ, ಅಂತರ್ಜಲ ಮರುಪೂರಣ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ. ದಪ್ಪರ್ತಿ ಕೆರೆಯ ಪುನಶ್ಚೇತನ ಕಾರ್ಯವು ಗ್ರಾಮದ ಜಲಸಂಪನ್ಮೂಲಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿಸಮುದಾಯ ಸಂಘಟಕರಾದ ಕೊರೇನಹಳ್ಳಿ ರವಿ, ಚಲಪತಿ, ಪ್ರಶಾಂತ್ , ರಂಜಿತಾ, ಕೊಂಡಾವಲಹಳ್ಳಿ ಮುಖಂಡರಾದ ನಾರಾಯಣಸ್ವಾಮಿ, ಬಾಬು, ದಪ್ಪರ್ತಿಯ ನಂಜುಂಡ, ಮುರುಳಿ, ಶ್ರೀನಿವಾಸ್ , ಉಪ್ಪಾರಹಳ್ಳಿಯ ರಾಜಗೋಪಾಲ್ , ಹರೀಶ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
19 ಎಂಬಿಜಿ 02
ತಾಲೂಕಿನ ದಪ್ಪರ್ತಿಯಲ್ಲಿಯೂಥ್ ಫಾರ್ ಸೇವಾ ಬೆಂಗಳೂರು ಸಂಸ್ಥೆಯು ವ್ಯಾಬ್ ಟೆಕ್ ಕಂಪನಿಯ ಸಿಎಸ್ ಆರ್ ನಿಧಿಯಡಿ ಕೈಗೊಂಡಿರುವ ಕೆರೆ ಪುನಶ್ಚೇತನ ಯೋಜನೆಗೆ ಭೂಮಿಪೂಜೆ ನೆರವೇರಿಸಲಾಯಿತು.