23ರಂದು ಟಿಪ್ಪು ಸುಲ್ತಾನ್ ಜಯಂತಿ ಉತ್ಸವ

Contributed by: rajeshinamadar7@gmail.com|Vijaya Karnataka•
23
23ರಂದು ಟಿಪ್ಪು ಸುಲ್ತಾನ್ ಜಯಂತಿ ಉತ್ಸವ

ತಾಳಿಕೋಟೆ: ‘‘ಐತಿಹಾಸಿಕ ಪರಂಪರೆ ಹಾಗೂ ಸರ್ವಧರ್ಮ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಪಟ್ಟಣದಲ್ಲಿನ.23ರಂದು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ’’ ಎಂದು ಮುಸ್ಲಿಂ ಧರ್ಮಗುರು ಜನಾಬ್ ಸೈಯದ್ ಶಕೀಲ್ ಅಹ್ಮದ್ ಖಾಜಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಹಜರತ್ ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ ವತಿಯಿಂದ ನ.23ರಂದು ಸಂಜೆ 6ಕ್ಕೆ ಸಾಂಭಪ್ರಭು ಶರಣಮುತ್ಯಾ ದೇವಸ್ಥಾನದ ಆವರಣದಲ್ಲಿಭವ್ಯ ಉದ್ಘಾಟನಾ ಸಮಾರಂಭ ಜರುಗಲಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ.ಖಾದರ್ ಮತ್ತು ಹುನಗುಂದ ಶಾಸಕ, ಸಚಿವ ವಿಜಯಾನಂದ ಕಾಶಪ್ಪನವರ ಉತ್ಸವವನ್ನು ಉದ್ಘಾಟಿಸಲಿದ್ದಾರೆ’’ ಎಂದು ತಿಳಿಸಿದರು.

‘‘ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹಾಗೂ ಸಾಂಭಪ್ರಭು ಶರಣರ ಮಠದ ಶರಣಪ್ಪನವರ ಸಾನ್ನಿಧ್ಯದಲ್ಲಿನಡೆಯುವ ಕಾರ್ಯಕ್ರಮದ ಅಧ್ಯಕ್ಷತೆ ಮುದ್ದೇಬಿಹಾಳ ಶಾಸಕ ಹಾಗೂ ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್ .ನಾಡಗೌಡ ವಹಿಸಲಿದ್ದಾರೆ. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ವಿಜಯಪುರದ ಸೈಯದ್ ಫೈಸಲ್ ಸಖಾಪ್ ಖಾದ್ರಿ ಸಾದತ್ , ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ’’ ಎಂದರು.

ಮಹಬೂಬ್ ಚೋರಗಸ್ತಿ, ನಿರಂಜನಶಾ ಮಕಾನದಾರ, ಅಬ್ದುಲ್ ರೆಹಮಾನ್ ಎಕೀನ, ಮೋದಿನಸಾ ನಗಾರ್ಚಿ, ಸಮಿತಿ ಅಧ್ಯಕ್ಷ ಸದ್ದಾಂ ಮನಗೂಳಿ, ಕಾರ್ಯದರ್ಶಿ ಅಲ್ಲಾಭಕ್ಷ ಚಳ್ಳಿಗಿಡದ, ಉಪಾಧ್ಯಕ್ಷ ರಿಯಾಜ್ ಅಹ್ಮದ್ ಡೋಣಿ, ಸದ್ದಾಂ ಹೊನ್ನಳ್ಳಿ, ಫಯಾಜ್ ಉತ್ನಾಳ, ಆರೀಫ್ ಹೊನ್ನಟುಗಿ, ಸದ್ದಾಂ ಬೇಪಾರಿ, ಅಬ್ದುಲ್ ರೆಹಮಾನ್ ವಠಾರ, ಗುಡ್ನಾಳ ಪಟೇಲ್ , ಹುಸೇನ ಹಡಗಿನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.