ಹಳಿಯಾಳ ದೇಶಪಾಂಡೆ

Contributed by: manjunatha012@yahoo.co.in|Vijaya Karnataka•
Vijay Karnataka
ಕೃಷಿಯಲ್ಲಿಯಂತ್ರೋಪಕರಣ ಬಳಸಿ

-ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ವಿಕ ಸುದ್ದಿಲೋಕ ಹಳಿಯಾಳ

ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡಲು ಮುಂದಾಗಬೇಕಾಗಿದೆ. ಇದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ .ವಿ.ದೇಶಪಾಂಡೆ ಹೇಳಿದರು.

ಗುರುವಾರ ಪಟ್ಟಣದ ಪುರಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಿಸಾನ್ ಗೋಷ್ಠಿ, ಕೃಷಿ ಯಂತ್ರೋಪಕರಣ ಮತ್ತು ತುಂತುರು ನೀರಾವರಿ ಘಟಕಗಳನ್ನು ರೈತರಿಗೆ ಹಸ್ತಾಂತರಿಸಿ ಮಾತನಾಡಿ, ‘‘ವಾಣಿಜ್ಯ ಬೆಳೆಗಳ ಜೊತೆಗೆ ತರಕಾರಿ ಸೇರಿದಂತೆ ದ್ವಿದಳ ಧಾನ್ಯಗಳನ್ನು ರೈತರು ಬೆಳೆಯಲು ಮುಂದಾಗಬೇಕು. ಸರಕಾರ ಹಲವಾರು ಯೋಜನೆಗಳ ಮೂಲಕ ಅನ್ನದಾತನಿಗೆ ವಿವಿಧ ಸೌಲಭ್ಯಗಳನ್ನು ನೀಡಿದೆ. ಸಹಾಯಧನದ ಮೇಲೆ ಯಂತ್ರೋಪಕರಣಗಳನ್ನು ನೀಡಲು ಮುಂದಾಗಿದ್ದು ಇದರ ಉಪಯೋಗ ಪಡೆಯಬೇಕು’’ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕಿನ 1858 ಸಿದ್ದಿ ಕುಟುಂಬಗಳಿಗೆ 2285 ರೂ. ಮೊತ್ತದ ಮೊಟ್ಟೆ, ಎಣ್ಣೆ, ಹೆಸರು ಬೇಳೆ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸಿದರು. ಪುರಸಭೆಯಿಂದ ಮೊದಲನೆಯ ಹಂತದಲ್ಲಿಬಿಪಿಎಲ್ ಕಾರ್ಡ್ ಹೊಂದಿದ 4500 ಬಡ ಕುಟುಂಬಗಳಿಗೆ ಹಸಿ ಮತ್ತು ಒಣ ಕಸದ ಸುಲಭ ವಿಲೇವಾರಿಗಾಗಿ ಕಸದ ಡಬ್ಬಿಗಳನ್ನು ಮತ್ತು ಕೃಷಿ ಇಲಾಖೆಯಿಂದ 20ಲಕ್ಷ ರೂ ಸಹಾಯ ಧನದ ವಿವಿಧ ಕೃಷಿ ಉಪಕರಣಗಳನ್ನು ರೈತರಿಗೆ ಹಸ್ತಾಂತರಿಸಿದರು. ಬೇಸಾಯ ತಜ್ಞ ಡಾ.ಬಸವರಾಜ ಎಣಗಿ ಅವರಿಂದ ಕಬ್ಬು, ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳಲ್ಲಿಆಧುನಿಕ ತಂತ್ರಜ್ಞಾನ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನಡೆಯಿತು.

ಈ ಸಂದರ್ಭದಲ್ಲಿಬ್ಲಾಕ್ ಅಧ್ಯಕ್ಷ ಕೃಷ್ಣಾ ಪಾಟೀಲ, ನಗರ ಘಟಕ ಅಧ್ಯಕ್ಷ ಶಂಕರ ಬೆಳಗಾಂವಕರ, ತಹಸೀಲ್ದಾರ್ ಸೋಮನಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಪವಾರ, ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ, ಉಪ ಕೃಷಿ ನಿರ್ದೇಶಕಿ ಪ್ರತಿಭಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಪಿ.ಐ.ಮಾನೆ, ತೀರ್ಥಯ್ಯ ಚಿಕ್ಕಮಠ ಮತ್ತಿತರರು ಇದ್ದರು.

ಪೋಟೋ ಇದೆ

ಶಾಸಕ ದೇಶಪಾಂಡೆ ಅವರು ಬಡ ಕುಟುಂಬದ ಸದಸ್ಯರಿಗೆ ಕಸವಿಲೇವಾರಿ ಡಬ್ಬಿಗಳನ್ನು ವಿತರಿಸಿದರು. ಕೃಷ್ಣಾ ಪಾಟೀಲ್ , ಶಂಕರ ಬೆಳಗಾಂವಕರ ಇದ್ದಾರೆ.