ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ನಡೆಸಲು ಗುಣಮಟ್ಟದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಕರ್ನಾಟಕ ರಾಜ್ಯ ಆಹಾರ ಆಯೋಗದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಚ್ .ಕೃಷ್ಣ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕರ್ನಾಟಕ ರಾಜ್ಯ ಆಹಾರ ಆಯೋಗದಿಂದ ನ.18 ರಿಂದ ನ.20ರವರೆಗೆ ಗದಗ ಜಿಲ್ಲೆಯಲ್ಲಿಪ್ರವಾಸ ಕೈಗೊಳ್ಳಲಾಗಿದೆ. ನ.18ರಂದು ಜಿಲ್ಲೆಯ ವಿವಿಧ ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳು, ಭಾರತೀಯ ಆಹಾರ ನಿಗಮದ (ಎಫ್ ಸಿಐ) ಗೋದಾಮುಗಳು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಾಸ್ಟೆಲ್ ಗಳು, ನ್ಯಾಯಬೆಲೆ ಅಂಗಡಿಗಳು, ಆಹಾರ ಧಾನ್ಯಗಳ ಸಗಟು ಮಳಿಗೆಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಪರಿಶೀಲನೆ ವೇಳೆ ಕೆಲವು ಗೋದಾಮುಗಳಲ್ಲಿಅಕ್ಕಿ ದಾಸ್ತಿನ ಪ್ರಮಾಣದಲ್ಲಿವ್ಯತ್ಯಾಸ ಕಂಡುಬಂದಿದೆ. ಗೋದಾಮುಗಳಿಗೆ ಬಂದಿರುವ ಅಕ್ಕಿಯ ಪ್ರಮಾಣ, ಫಲಾನುಭವಿಗಳಿಗೆ ವಿತರಿಸಿದ ಪ್ರಮಾಣ ಹಾಗೂ ಉಳಿದ ದಾಸ್ತಿನ ಪ್ರಮಾಣದಲ್ಲಿಹೊಂದಾಣಿಕೆ ಇರಲಿಲ್ಲ. ಅಲ್ಲದೆ, ಕೆಲವು ಎಪಿಎಲ್ ಕಾರ್ಡ್ ದಾರರು ಅನಧಿ ಕೃತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರಕರಣಗಳ ಪರಿಶೀಲನೆ ವೇಳೆ ನಿಜವಾದ ಬಡ ಫಲಾನುಭವಿಗಳ ಬಿಪಿಎಲ್ ಕಾರ್ಡ್ ಗಳೇ ರದ್ದಾಗಿರುವುದು ಕಂಡುಬಂದಿದೆ. ಕೆಲವು ಎಪಿಎಂಸಿ ಗೋದಾಮುಗಳಲ್ಲಿನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅಕ್ಕಿ ದಾಸ್ತಾನು ಇರುವುದು ಗಮನಕ್ಕೆ ಬಂದಿದೆ. ಈ ಅಕ್ರಮಗಳಿಗೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅಕ್ಕಿ ಕಾಳಸಂತೆಯಲ್ಲಿಮಾರಾಟವಾಗದಂತೆ ಎಚ್ಚರ ವಹಿಸಬೇಕು. ಬಡವರು ಹಸಿವಿನಿಂದ ನರಳಬಾರದು ಹಾಗೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸೌಲಭ್ಯ ವಿತರಣೆಯಲ್ಲಿವಿಳಂಬ ಅಥವಾ ದುರುಪಯೋಗ ಕಂಡುಬಂದರೆ ಆಯೋಗ ಶಿಸ್ತು ಕ್ರಮಕ್ಕೆ ಮುಂದಾಗಲಿದೆ. ಜಿಲ್ಲಾಮಟ್ಟದಲ್ಲಿಕುಂದುಕೊರತೆ ಪರಿಹಾರ ಕೋಶವಿದ್ದು, ಜಿಲ್ಲಾಧಿಕಾರಿಗಳು ಅದರ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.
ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿಒದಗಿಸುವುದು, ರಿಯಾಯಿತಿ ದರದಲ್ಲಿಕೀಟನಾಶಕ ವಿತರಣೆ ಮಾಡುವ ಪ್ರಕ್ರಿಯೆಯಲ್ಲಿಅಕ್ರಮ ಅಥವಾ ಸಮಸ್ಯೆಗಳು ಕಂಡುಬಂದರೂ ಆಯೋಗದ ಗಮನಕ್ಕೆ ತರಬಹುದು. ರೆಸ್ಟೋರೆಂಟ್ , ಹೋಟೆಲ್ ಹಾಗೂ ಹಾಸ್ಟೆಲ್ ಗಳಲ್ಲಿಕಳಪೆ ಗುಣಮಟ್ಟದ ಆಹಾರ ಪೂರೈಕೆಯಾದರೆ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್ , ಮಾರುತಿ ಎಂ.ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಯ, ಕೆ.ಎಸ್ .ವಿಜಯಲಕ್ಷಿ ್ಮ ಹಾಗೂ ಆಹಾರ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ದೊಡ್ಡಮನಿ ಉಪಸ್ಥಿತರಿದ್ದರು.