ಚಿತ್ರ : 1ವೈರುಲ-7: ಯಾದಗಿರಿ ಜಿಲ್ಲೆಯ ಗಡಿ ಭಾಗದ ಕುಂಟಿಮಾರಿ ಚೆಕ್ ಪೋಸ್ಟ್ ನಲ್ಲಿಕರವೇ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಚರಿಸಿದರು.
* ಕುಂಟಿಮಾರಿ ಚೆಕ್ ಪೋಸ್ಟ್ ನಲ್ಲಿಕನ್ನಡ ರಾಜ್ಯೋತ್ಸವ ಆಚರಣೆ | ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ ಧ್ವಜಾರೋಹಣಗಡಿಯಲ್ಲಿಹಾರಾಡಿದ ಕನ್ನಡ ಬಾವುಟ
ವಿಕ ಸುದ್ದಿಲೋಕ ಯಾದಗಿರಿ ಗ್ರಾಮೀಣ
ಗಿರಿ ಜಿಲ್ಲೆಯ ಗಡಿಯಲ್ಲಿಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಎನ್ .ಭೀಮುನಾಯಕ ಅವರು ಧ್ವಜಾರೋಹಣ ಮಾಡಿದರು.
ಗುರುಮಠಕಲ್ ತಾಲೂಕಿನ ಕುಂಟಿಮಾರಿ ಚೆಕ್ ಪೋಸ್ಟ್ ನಲ್ಲಿಕನ್ನಡದ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದರು. ಗಡಿಭಾಗದಲ್ಲಿಕನ್ನಡದ ಕಹಳೆ ಮೊಳಗಿಸಿದ ಕರವೇ ಕಾರ್ಯಕರ್ತರು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಟದ ಸಂಕಲ್ಪ ಮಾಡಿದರು. ತೆಲುಗು ಭಾಷೆಯ ಪ್ರಭಾವ ಹೆಚ್ಚಿರುವ ಗಡಿಭಾಗದ ಗ್ರಾಮಗಳಲ್ಲಿಕನ್ನಡದ ಅಸ್ಮಿತೆ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸಂಘಟನೆ ಸದಾ ಬದ್ಧವಾಗಿದೆ ಎಂಬ ಸಂದೇಶ ಸಾರಿದರು.
ಯಾದಗಿರಿ ತಾಲೂಕು ಅಧ್ಯಕ್ಷ ಮಲ್ಲುಮಾಳಿಕೇರಿ ಅವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿಗುರುಮಠಕಲ್ ತಾಲೂಕು ಪ್ರಧಾನ ಕಾರ್ಯದರ್ಶಿ ಮೌನೇಶ ದೊಬ್ಬಲ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಡಾ.ಪ್ರಕಾಶ್ ಜೈಗ್ರಾಮ್ , ವಿಶ್ವರಾಜ್ ಹೋನಗೇರ, ಬನ್ನಯ್ಯ ಗುತ್ತೇದಾರ್ , ದಿಲೀಪ್ ಸೈದಾಪುರ, ಲಿಂಗಾರೆಡ್ಡಿ ವಡವಟ್ , ದೇವಸಿಂಗ್ ಠಾಕೂರ್ , ರಾಮು ಕುಂಬಾರ್ , ರಾಘವರೆಡ್ಡಿ ಪಳ್ಳ, ರಮೇಶ್ ಬುಡರಾಮ್ , ರಾಜು ರೆಡ್ಡಿ, ಶ್ರೀನಿವಾಸ್ ತೋರಣತಿಪ್ಪ, ಮಹೇಶ್ ಠಾಣಗುಂದಿ, ಮಂಜು ಸಂಬರ, ಅನಿಲ್ ವಂಕಸಂಬರ, ಅವಿನಾಶ್ ಕಲಾಲ್ , ಬನ್ನಪ್ಪ ಮಾಲಿಪಾಟೀಲ್ , ದೇವು ಮಡಿವಾಳ, ನಾಗಪ್ಪ ಸಂಬರ, ಶ್ರೀನಿವಾಸ್ ನಾಯಕ್ , ವೆಂಕಟೇಶ್ ಪಾಟೀಲ್ ಜೈಗ್ರಾಮ್ , ಶಿವು ಕಾವಲಿ, ತಿಮ್ಮಣ್ಣ ನಾಯಕ್ ಸೇರಿ ಕರವೇ ಕಾರ್ಯಕರ್ತರು ಇದ್ದರು.