*ಕೌಶಲದಿಂದ ಅಪರಾಧಿಗಳ ಪತ್ತೆ ಸುಲಭ

Contributed by: gvittalslb@gmail.com|Vijaya Karnataka•
Vijay Karnataka
ಕೌಶಲದಿಂದ ಅಪರಾಧಿಗಳ ಪತ್ತೆ ಸುಲಭ

*ಬಳ್ಳಾರಿ ವಿಭಾಗದ ಸರಕಾರಿ ಕಾನೂನು ಅಧಿಕಾರಿ ಬಿ.ಎಸ್ . ಪಾಟೀಲ್ ಹೇಳಿಕೆ
ವಿಕ ಸುದ್ದಿಲೋಕ ಕೊಪ್ಪಳ

‘‘ಆಧುನಿಕ ತಂತ್ರಜ್ಞಾನ ಯುಗದಲ್ಲಿತಾಂತ್ರಿಕ ತನಿಖಾ ಕೌಶಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದರಿಂದ ಅಪರಾಧಿಗಳ ಪತ್ತೆ ಹಾಗೂ ಅಪರಾಧ ಸಾಬೀತುಪಡಿಸುವುದು ಸುಲಭವಾಗಲಿದೆ,’’ ಎಂದು ಬಳ್ಳಾರಿ ವಿಭಾಗದ ಸರಕಾರಿ ಕಾನೂನು ಅಧಿಕಾರಿ ಬಿ.ಎಸ್ . ಪಾಟೀಲ್ ಹೇಳಿದರು.

ನಗರದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿತನಿಖಾ ಕೌಶಲಗಳು ಹಾಗೂ ತನಿಖೆಯಲ್ಲಿನ ಲೋಪಗಳ ಪರಿಹಾರ ಕುರಿತು ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿಮಾತನಾಡಿದರು.

‘‘ತನಿಖೆಯಲ್ಲಿನ ಸಣ್ಣಪುಟ್ಟ ತಾಂತ್ರಿಕ ದೋಷಗಳಿಂದಲೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪೊಲೀಸ್ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ ಎಸ್ ಎಸ್ ) ಜಾರಿಯಿಂದ ತನಿಖೆಯಲ್ಲಿಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಹೆಚ್ಚಿನ ಅವಕಾಶಗಳು ದೊರೆತಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಅಪರಾಧಿಗಳನ್ನು ಪತ್ತೆಹಚ್ಚುವುದರ ಜತೆಗೆ ನ್ಯಾಯಾಲಯದಲ್ಲಿಸೂಕ್ತ ಸಾಕ್ಷ್ಯಾಧಾರಗಳನ್ನು ಮಂಡಿಸಲು ಸಾಧ್ಯವಾಗುತ್ತದೆ,’’ ಎಂದರು.

ತಾಂತ್ರಿಕ ಸಾಕ್ಷ್ಯಗಳು ಲಭ್ಯ:

‘‘ಪ್ರಸ್ತುತ ತನಿಖೆಯ ಸಂದರ್ಭದಲ್ಲಿವಿಡಿಯೊ, ಆಡಿಯೊ ಸೇರಿ ಹಲವು ಬಗೆಯ ತಾಂತ್ರಿಕ ಸಾಕ್ಷ್ಯಗಳು ಲಭ್ಯವಿವೆ. ಆದರೆ, ಅವುಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ನ್ಯಾಯಾಲಯದಲ್ಲಿಸಮರ್ಥವಾಗಿ ಮಂಡಿಸುವ ಜ್ಞಾನ ತನಿಖಾಧಿಕಾರಿಗಳಿಗೆ ಇರಬೇಕು. ತಂತ್ರಜ್ಞಾನದ ಬಳಕೆಯಿಂದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ತ್ವರಿತಗೊಳ್ಳುತ್ತಿದ್ದು, ಪೊಲೀಸರು ಈ ಕುರಿತು ನಿರಂತರ ಮಾಹಿತಿ ಹೊಂದಬೇಕು,’’ ಎಂದರು.

ತಪ್ಪಿತಸ್ಥರಿಗೆ ಶಿಕ್ಷೆ:

‘‘ಪ್ರತಿಯೊಂದು ಪ್ರಕರಣದಲ್ಲಿಯೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ತನಿಖೆಯ ಗುಣಮಟ್ಟ ಹೆಚ್ಚಿಸಬೇಕು,’’ ಎಂದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಾಯಿ ಬಾಗ್ಲಾಅಧ್ಯಕ್ಷತೆವಹಿಸಿದ್ದರು.

---

18-ಕೆಪಿಎಲ್ ವಿಠ್ಠಲ ಫೊಟೊ-27

ಕೊಪ್ಪಳದ ಎಸ್ಪಿ ಕಚೇರಿಯಲ್ಲಿತನಿಖಾಧಿಕಾರಿಗಳಿಗೆ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿಅಧಿಕಾರಿಗಳು ಪಾಲ್ಗೊಂಡಿದ್ದರು.