ಆಧುನಿಕ ಸಮಾಜದಲ್ಲಿಮಹಿಳೆ ಎಲ್ಲಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುವ ಶಕ್ತಿ ಹೊಂದಿದ್ದಾಳೆ. ಮಹಿಳೆ ಪುರುಷರಷ್ಟೇ ಸಮಾನಳಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಿತ್ತೂರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.ಪಟ್ಟಣದ ಸುಶೀಲಾತಾಯಿ ವೈ. ಕುಲಗೋಡ ಪಪೂ ಮಹಾವಿದ್ಯಾಲಯದಲ್ಲಿಗುರುವಾರ ಮಹಿಳಾ ಸಂಘದ ನೇತೃತ್ವದಲ್ಲಿಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ‘‘ಮಹಿಳೆ ನಿರ್ವಹಣೆ ಕೌಶಲ ತಿಳಿದುಕೊಂಡು ಸ್ವಾವಲಂಬನೆ ಜೀವನ ನಡೆಸಲು ಅನೇಕ ಅವಕಾಶಗಳು ಲಭ್ಯ ಇವೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ವತಂತ್ರ ಉದ್ಯಮಗಳನ್ನು ಇಂದು ಮಹಿಳೆಯರು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ನಿಶ್ವಿತ ಗುರಿ ಹೊಂದಿ, ಸಮಾಜ ಗುರುತಿಸುವ ನಿಟ್ಟಿನಲ್ಲಿಉನ್ನತ ಸಾಧನೆ ಮಾಡಬೇಕು’’, ಎಂದರು.
ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್ .ಎಸ್ . ಸುಲ್ತಾನಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹಲವು ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸಿ, ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿನಿಯರು ಕಾಲೇಜಿನಲ್ಲಿದೊರೆಯುವ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕು’’, ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್ .ಪಿ. ಜಗತಾಪ, ಪಪೂ ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಎಸ್ .ಜಿ. ಮಾಳವಾಡ, ಸದಸ್ಯರಾದ ಡಾ. ವೈ.ಬಿ. ಕುಲಗೋಡ, ಪಿ.ಎಲ್ . ದೊಡಮನಿ, ವಿ.ಜೆ. ಬೈಲವಾಡ, ಶಿವಾನಂದ ಚಿಕ್ಕೋಡಿ, ಶಿಕ್ಷಣ ತಜ್ಞ ಎಸ್ .ಎಂ. ಸಕ್ರಿ, ಜಿಮಖಾನಾ ಉಪಾಧ್ಯಕ್ಷ ಆರ್ .ಸಿ. ತಡಗಣಿ, ಮಹಿಳಾ ಸಂಘದ ಕಾರ್ಯಾಧ್ಯಕ್ಷೆ ಭಾರತಿ ಪಮ್ಮಾರ ಮತ್ತಿತರರು ಇದ್ದರು. ಪ್ರಾಚಾರ್ಯ ಡಿ.ಎಂ. ಮೂಗೇರಿ ಸ್ವಾಗತಿಸಿದರು. ಶಿವಲೀಲಾ ಗೋಲನ್ನವರ ನಿರೂಪಿಸಿದರು. ಕಲಾವತಿ ಮೇಟಿ ವಂದಿಸಿದರು.