ಇಂದು, ನಾಳೆ ವಿಶೇಷ ರೈಲು ಸಂಚಾರ

Contributed by: ravi.gosavi@timesofindia.com|Vijaya Karnataka•
Vijay Karnataka
ಬೆಳಗಾವಿ: ಕೆಇಎ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಬೆಳಗಾವಿಧಿ-ಬೆಂಗಳೂರು ಹಾಗೂ ಬೆಂಗಳೂರು-ಹುಬ್ಬಳ್ಳಿ ನಡುವೆ ನ.21 ಮತ್ತು 22ರಂದು ತಲಾ ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 07321, ನ.21ರಂದು ರಾತ್ರಿ 8 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ ಎಂವಿಟಿ) ತಲುಪಲಿದೆ. ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿನಿಲುಗಡೆ ಇರಲಿದೆ. ರೈಲು ಸಂಖ್ಯೆ 07322, ನ.22ರಂದು ರಾತ್ರಿ 7 ಗಂಟೆಗೆ ಬೆಂಗಳೂರಿನ ಎಸ್ ಎಂವಿಟಿ ನಿಲ್ದಾಣದಿಂದ ಹೊರಟು ನ.23ರಂದು ಬೆಳಗ್ಗೆ 4.30ಕ್ಕೆ ಹುಬ್ಬಳ್ಳಿಯ ಎಸ್ ಎಸ್ ಎಸ್ ನಿಲ್ದಾಣ ತಲುಪಲಿದೆ. ಈ ವಿಶೇಷ ರೈಲಿನಲ್ಲಿಒಟ್ಟು 16 ಬೋಗಿಗಳಿದ್ದು, 2ನೇ ಎಸಿ, 3ನೇ ಎಸಿ, ಸ್ಲೀಪರ್ , ಸಾಮಾನ್ಯ ಎರಡನೇ ದರ್ಜೆ, ಲಗೇಜ್ ಕಂ ಬ್ರೇಕ್ ವ್ಯಾನ್ , ಜನರೇಟರ್ ಕಾರು ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಬೋಗಿ ಇರಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

(ರೈಲು ಫೋಟೋ)