ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಸುದೇಶ್ ಮಹಾನ್ *ರಾಷ್ಟ್ರೀಯ ದಕ್ಷಿಣ ವಲಯ ಅಂತರ ವಿವಿ ಪಂದ್ಯಾವಳಿಗೆ ಆಯ್ಕೆ
ವಿಕ ಸುದ್ದಿಲೋಕ ಕೊಳ್ಳೇಗಾಲ
ಪಟ್ಟಣದ ಮುಡಿಗುಂಡ ನಿವಾಸಿ ಜೆ.ಮೂರ್ತಿ ಅವರ ಪುತ್ರ ಎಂ.ಆರ್ .ಸುದೇಶ್ ಮಹಾನ್ ಅವರು 2026-27ನೇ ಸಾಲಿನ ರಾಷ್ಟ್ರೀಯ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಈ ಪಂದ್ಯಾವಳಿಯು ಡಿ.27 ರಿಂದ ಡಿ.31ರವರೆಗೆ ಬೆಂಗಳೂರಿನ ಜೈನ್ ಯೂನಿವರ್ಸಿಟಿ ಮೈದಾನದಲ್ಲಿನಡೆಯಲಿದೆ. ಕಳೆದ ವರ್ಷ 2025-26 ನೇ ಸಾಲಿನಲ್ಲಿಚೆನ್ನೈನಲ್ಲಿನಡೆದಿದ್ದ ರಾಷ್ಟ್ರೀಯ ದಕ್ಷಿಣ ವಲಯದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲೂಸಹ ಮುಖ್ಯ ಆಟಗಾರರಾಗಿ ಎಂ.ಆರ್ .ಸುದೇಶ್ ಮಹಾನ್ ಅವರು ಭಾಗವಹಿಸಿದ್ದರು. ಈಗಾಗಲೇ ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿಇವರು ಭಾಗವಹಿಸಿ ವಿಜೇತ ತಂಡದ ಶ್ರೇಷ್ಠ ಆಟಗಾರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಎಂ.ಆರ್ .ಸುದೇಶ್ ಮಹಾನ್ ಮೈಸೂರಿನ ಮಹಾಜನ್ ಕಾಲೇಜಿನಲ್ಲಿದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿಯಾಗಿದ್ದಾರೆ.