ಇಂಟ್ರೊ- ವಿಜ್ಞಾನಿಗಳು ವಾಯೇಜರ್ 1 ನೌಕೆ ಒಂದು ಬೆಳಕಿನ ದಿನದಷ್ಟು ದೂರವನ್ನು ಕ್ರಮಿಸಿದೆ. ಅನ್ಯಗ್ರಹದಲ್ಲಿಮನೆ ಕಟ್ಟಲು ಸಿದ್ಧತೆ ನಡೆಸುತ್ತಿರುವ ಮಾನವರು ಈಗ ಚಂದಿನ ಮಣ್ಣಿನಲ್ಲೂಆಲೂಗಡ್ಡೆ ಬೆಳೆಯುವುದು ಹೇಗೆ ಎನ್ನುವುದನ್ನು ಕಲಿತುಕೊಂಡಿದ್ದಾರೆ. ಇದೇ ವೇಳೆ ನಾರ್ವೆಯಲ್ಲಿಮೀನುಗಳನ್ನು ರಕ್ಷಿಸಲು ರೋಬಾಟ್ ಗಳನ್ನು ನಿಯೋಜಿಸಲಾಗಿದೆ.
ಲೂನಾರ್ ಮಣ್ಣಲಿ ಸಾವಯವ ಕೃಷಿಚಂದ್ರನ ಮೇಲ್ಮೈಯಲ್ಲಿಇರುವ ಮಣ್ಣು ನಮ್ಮ ಭೂಮಿಯ ಮಣ್ಣಿನ ಹಾಗೆ ಫಲವತ್ತತೆಯಿಂದ ಕೂಡಿಲ್ಲ. ‘ಲೂನಾರ್ ರೆಗೋಲಿತ್ ’ ಎಂಬ ಪುಡಿಯಾದ ಕಲ್ಲುಮತ್ತು ಧೂಳಿನಿಂದ ಕೂಡಿದ ಈ ಮಣ್ಣಿನಲ್ಲಿಸಾರಜನಕ ಇಲ್ಲ. ಅಷ್ಟೇ ಅಲ್ಲದೆ ಆ ಮಣ್ಣಿನಲ್ಲಿಭಾರವಾದ ಲೋಹಗಳ ಅಂಶಗಳೂ ಇವೆ. ಇದು ಸಸ್ಯಗಳಿಗೆ ವಿಷಕಾರಿ. ಹಾಗಾಗಿ, ಆ ಮಣ್ಣಿನಲ್ಲಿಏನಾದರೂ ಬೆಳೆಸುವುದು ಕಷ್ಟ. ಭೂಮಿಯಾಚೆಗೆ ವಸಾಹತುಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿರುವ ಮನುಕುಲಕ್ಕೆ ಇದೊಂದು ಹಿನ್ನಡೆ. ಹಾಗಾಗಿಯೇ, ಚಂದ್ರನ ಮಣ್ಣಿನಲ್ಲಿಆಹಾರ ಬೆಳೆಯಬಹುದೋ ಅನ್ನುವ ಪ್ರಯೋಗಳು ನಡೆಯುತ್ತಲೇ ಇವೆ. ಅದರಲ್ಲೊಂದು ಪ್ರಯೋಗ ಈಗ ಭರವಸೆಯ ಫಲಿತಾಂಶವನ್ನು ಕೊಟ್ಟಿದೆ.
ನಾಸಾ ಬೆಂಬಲದೊಂದಿಗೆ ಸಂಶೋಧನೆ ಮಾಡುತ್ತಿರುವ ಅಮೆರಿಕದ ಒರೆಗಾನ್ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ಚಂದ್ರನ ಮಣ್ಣನ್ನೇ ಹೋಲುವಂತಹ ಮಣ್ಣಿನಲ್ಲಿಆಲೂಗಡ್ಡೆಯನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ. ಎರೆಹುಳುಗಳು ಸಾವಯವ ತ್ಯಾಜ್ಯವನ್ನು ಕೊಳೆಸಿ ತಯಾರಿಸುವ ‘ವರ್ಮಿ ಕಾಂಪೋಸ್ಟ್ ’ ಅನ್ನು ಚಂದ್ರನ ಕೃತಕ ಮಣ್ಣಿಗೆ ಬೆರೆಸಿ ವಿಜ್ಞಾನಿಗಳು ಆಲೂಗಡ್ಡೆ ಬೆಳೆಸಿದ್ದಾರೆ. ಶೇ.5ರಷ್ಟು ವರ್ಮಿ ಕಾಂಪೋಸ್ಟ್ ಮಿಶ್ರಣದಲ್ಲಿಬೇರು ಮತ್ತೆ ಗಡ್ಡೆಗಳು ಬೆಳೆದರೆ, ಶೇ.30ರಷ್ಟು ಕಾಂಪೋಸ್ಟ್ ಮಿಶ್ರಣ ಮಾಡಿದಾಗ ಸಾಮಾನ್ಯ ಕೃಷಿಯಲ್ಲಿಬೆಳೆಯುವಷ್ಟೇ ಆಲೂಗಡ್ಡೆ ಇಳುವರಿ ಸಿಕ್ಕಿದೆ. ಈಗ ಈ ಸಂಶೋಧನೆ ಯಶಸ್ವಿಯಾಗಿರುವುದರಿಂದ ವಿಜ್ಞಾನಿಗಳು ಟೊಮೆಟೋ, ಸೊಪ್ಪಿನಂತಹ ಬೆಳೆಗಳ ಕಡೆಗೆ ಗಮನ ಹರಿಸಿದ್ದಾರೆ.
ಚಟಾಕಿ: ನಮ್ಮಲ್ಲಿಕೃಷಿಕರೇ ಕೃಷಿಯನ್ನು ತೊರೆಯುತ್ತಿರುವ ಪರಿಸ್ಥಿತಿ ಇರುವಾಗ ಚಂದ್ರನಲ್ಲಿಗೆ ಹೋಗಿ ಬೆಳೆಯುವವರಾರು?
ಒನ್ ಲೈಟ್ ಡೇ ಸಂಭ್ರಮದಲ್ಲಿವಾಯೇಜರ್
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 1977ರಲ್ಲಿಉಡಾಯಿಸಿದ ವಾಯೇಜರ್ -1 ಬಾಹ್ಯಾಕಾಶ ನೌಕೆ ಭೂಮಿಯಿಂದ 25.9 ಶತಕೋಟಿ ಕಿಲೋಮೀಟರ್ ಗಳಷ್ಟು ದೂರಕ್ಕೆ ತಲುಪಿದೆ. ಈ ಮಾಹಿತಿಯನ್ನು ಸರಳೀಕರಿಸಿ ಹೇಳುವುದಾದರೆ ಒಂದು ಬೆಳಕಿನ ದಿನದಷ್ಟು(ಒನ್ ಲೈಟ್ ಡೇ) ದೂರವನ್ನು ಈ ಗಗನನೌಕೆ ತಲುಪಿದೆ. 24 ಗಂಟೆಗಳಲ್ಲಿಬೆಳಕು ಕ್ರಮಿಸುವ ದಿನವನ್ನು ಒನ್ ಲೈಟ್ ಡೇ ಎನ್ನುವರು. ಈ ಸಾಧನೆ ಮಾಡಿದ ಮೊದಲ ಗಗನ ನೌಕೆ ಎನ್ನುವ ಹಿರಿಮೆಗೆ ವಾಯೇಜರ್ -1 ಪಾತ್ರವಾಗಿದೆ. ಸೌರಮಂಡಲದಾಚೆ ಇರುವ ಕಾಯಗಳನ್ನು ತಲುಪುವ ದೂರವನ್ನು ನಾವು ಬೆಳಕಿನ ವರ್ಷದ(ಒಂದು ವರ್ಷದಲ್ಲಿಬೆಳಕು ಕ್ರಮಿಸುವ ದೂರ) ಆಧಾರದಲ್ಲಿಅಳೆಯುತ್ತೇವೆ. ಉದಾಹರಣೆಗೆ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರ ಭೂಮಿಯಿಂದ 4.24 ಬೆಳಕಿನ ವರ್ಷದಷ್ಟು ದೂರವಿದೆ. ಮನುಷ್ಯರಿಗೆ ಬೆಳಕಿನ ವರ್ಷ ಎಂಬುದು ದೂರದ ಮಾತಾಯ್ತು. ಆದರೆ ಆ ನಿಟ್ಟಿನಲ್ಲಿಹೆಜ್ಜೆಯಿಟ್ಟಿರುವ ಮನುಷ್ಯ ಒನ್ ಲೈಟ್ ಡೇ ಸಾಧನೆ ಮಾಡಿರುವುದು ದೊಡ್ಡ ಸಾಧನೆಯೇ ಸರಿ.
ವಾಯೇಜರ್ ಗಗನನೌಕೆಯಲ್ಲಿ‘ಗೋಲ್ಡನ್ ರೆಕಾರ್ಡ್ ’ ಎಂಬ ಚಿನ್ನದ ಲೇಪನದ ತಾಮ್ರದ ತಟ್ಟೆಯನ್ನು ಇರಿಸಲಾಗಿದೆ. ಅದರಲ್ಲಿಮಾಹಿತಿಯನ್ನು ಸಂಗ್ರಹಿಸಿಡಲಾಗಿದೆ. ಭವಿಷ್ಯದಲ್ಲಿಈ ಗಗನನೌಕೆ ಯಾವುದಾದರೂ ಅನ್ಯಗ್ರಹ ಜೀವಿ ಅಥವಾ ನಾಗರಿಕತೆ ಕೈಗೆ ಸಿಕ್ಕಿದರೆ ಭೂಮಿ ಮತ್ತು ಇಲ್ಲಿನ ಜೀವಸಂಕುಲದ ಪರಿಚಯ ನೀಡುವುದು ಗೋಲ್ಡನ್ ರೆಕಾರ್ಡ್ ಉದ್ದೇಶ. ಮಾನವ ದೇಹರಚನೆ, ಡಿಎನ್ ಎ, ಪ್ರಾಣಿಗಳು, ಕಟ್ಟಡಗಳು, ಆಹಾರ ಮತ್ತು ದೈನಂದಿನ ಬದುಕಿನ ಚಿತ್ರಗಳ ಜತೆಗೆ ತಾಜ್ ಮಹಲ್ , ಚೀನಾದ ಮಹಾಗೋಡೆ, ಸಿಡ್ನಿ ಒಪೇರಾ ಹೌಸ್ ಮತ್ತು ಗೋಲ್ಡನ್ ಗೇಟ್ ಬ್ರಿಡ್ಜ್ ನಂತಹ ಪ್ರಸಿದ್ಧ ತಾಣಗಳ ಛಾಯಾಚಿತ್ರಗಳೂ ಈ ಬಂಗಾರದ ಓಲೆಯಲ್ಲಿದೆ. ಸಮುದ್ರದ ಅಲೆಗಳ ಸದ್ದು, ಗಾಳಿ, ಗುಡುಗು, ಪಕ್ಷಿಗಳು, ತಿಮಿಂಗಿಲಗಳು ಮತ್ತು ಇತರ ಪ್ರಾಣಿಗಳ ಶಬ್ದಗಳನ್ನೂ ದಾಖಲಿಸಲಾಗಿದೆ. ಅಲ್ಲದೆ 55 ಭಾಷೆಗಳಲ್ಲಿಶುಭಾಶಯ ಸಂದೇಶಗಳೂ ಈ ರೆಕಾರ್ಡ್ ನಲ್ಲಿವೆ. ಜೈಪುರ- ಅತ್ರೌಲಿ ಘರಾನಾದ ಖ್ಯಾತ ಗಾಯಕಿ ಕೇಸರಬಾಯಿ ಕೇರಕರ್ ಹಾಡಿದ ‘ಜಾತ್ ಕಹಾಂ ಹೋ’ ಈ ರೆಕಾರ್ಡ್ ನಲ್ಲಿರುವುದು ಭಾರತೀಯ ಪಾಲಿಗೆ ಹೆಮ್ಮೆಯ ವಿಷಯ.
ನಾರ್ವೆಯ ಕರಾವಳಿಯ ಮೀನು ಸಾಕಣಿಕಾ ತೊಟ್ಟಿಗಳಲ್ಲಿಸಾಲ್ಮನ್ ಮೀನುಗಳನ್ನು ಸಾಕಲಾಗುತ್ತದೆ. ಇಲ್ಲಿಸಾಕುವ ಮೀನುಗಳ ಸಂಖ್ಯೆ 11 ಕೋಟಿಗೂ ಹೆಚ್ಚು. ಇಡೀ ನಾರ್ವೆಯಲ್ಲಿಸಾಕುವ ಮೀನುಗಳ ಶೇ.25ರಷ್ಟು ಮೀನುಗಳು ಇಲ್ಲೇ ಇವೆ. ಆದರೆ, ಇಲ್ಲಿಮೀನುಗಳಿಗೆ ಪರಾವಲಂಬಿ ಹುಳುಗಳ ಕಾಟ. ಸೀ ಲೈಸ್ ಎಂಬ ಪರಾವಲಂಬಿ ಹುಳುಗಳು ಮೀನುಗಳಿಗೆ ಅಂಟಿಕೊಂಡು ಅವುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ನಿಯಂತ್ರಿಸುವುದಕ್ಕಾಗಿ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಈ ಸಮಸ್ಯೆಗೆ ಹೊಸ ಟೆಕ್ನಾಲಜಿಯನ್ನು ಬಳಸಲಾಗುತ್ತಿದೆ. ಸ್ಟಿಂಗ್ ರೇ ಸೊಲ್ಯೂಷನ್ ಎಂಬ ಕಂಪನಿ ಸುಮಾರು 3,500ರಷ್ಟು ಎಐ ಚಾಲಿತ ರೋಬಾಟ್ ಗಳನ್ನು ನೀರೊಳಗೆ ನಿಯೋಜಿಸಿದೆ. ಈ ರೋಬಾಟ್ ಗಳು ಮೀನುಗಳ ಮೇಲೆ ನಿಗಾ ಇಟ್ಟು ಅವುಗಳ ಮೇಲೆ ಅಂಟಿಕೊಳ್ಳುವ ಹುಳುಗಳನ್ನು ಹುಡುಕುತ್ತವೆ. ಹುಳುಗಳು ಕಂಡ ಕೂಡಲೇ ಸರಿಯಾಗಿ ಗುರಿಯಿಟ್ಟು ಲೇಸರ್ ಕಿರಣದಿಂದ ಹೊಡೆಯುತ್ತದೆ. ಈ ಪ್ರಕ್ರಿಯೆಯಲ್ಲಿಮೀನಿಗೆ ಯಾವುದೇ ನೋವಾಗಲೀ ಗಾಯವಾಗಲೀ ಆಗುವುದಿಲ್ಲ. ಹುಳು ಮಾತ್ರ ಸಾಯುತ್ತದೆ. ಹೀಗೆ ಈ ರೋಬಾಟ್ ಗಳು 11.2 ಕೋಟಿ ಮೀನುಗಳನ್ನು ರಕ್ಷಿಸುತ್ತಿವೆ. ರಾಸಾಯನಿಕಗಳ ಬಳಕೆ ಕಡಿಮೆಯಾಗಿರುವುದರಿಂದ ಇಲ್ಲಿನ ನೀರಿನ ಗುಣಮಟ್ಟವೂ ಸುಧಾರಿಸಿದೆ.