ಮುಳಬಾಗಲು: ನಗರದ ಬಜಾರು ರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿಕಾರ್ತಿಕ ಮಾಸದ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮಕ್ಷಮದಲ್ಲಿಅದ್ಧೂರಿಯಾಗಿ ನೆರವೇರಿತು. ಕನ್ಯಕಾ ಪರಮೇಶ್ವರಿ, ಪಾರ್ವತಿ ದೇವರಿಗೆ ಪಂಚಾಮೃತ ಅಭಿಷೇಕ, ಕಾಶಿ ವಿಶ್ವನಾಥಸ್ವಾಮಿಗೆ 108 ಲೀಟರ್ ಕಬ್ಬಿನ ಹಾಲಿನಿಂದ ಸಂಪ್ರದಾಯದಂತೆ ಅಭಿಷೇಕ ಮಾಡಲಾಯಿತು. ಸ್ಥಳೀಯ ಕಲಾವಿದರಿಂದ ಹಾಡುಗಾರಿಕೆ ಹಾಗೂ ಭಜನೆ ನಡೆಯಿತು. ಅರ್ಚಕ ಲೋಕನಾಥ್ ದೀಕ್ಷಿತ್ ನೇತೃತ್ವದಲ್ಲಿಪೂಜಾ ಕೈಂಕರ್ಯಗಳು ನಡೆದವು. ಭಕ್ತರಿಗೆ ನಾನಾ ಬಗೆಯ ಪ್ರಸಾದಗಳನ್ನು ವಿತರಿಸಲಾಯಿತು.
20ಎಂಬಿಎಲ್ ಫೋಟೊ 4 ಮುಳಬಾಗಲು ನಗರದ ಬಜಾರು ರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವರಿಗೆ ಕಬ್ಬಿನ ಹಾಲಿನ ಅಭಿಷೇಕ ನಡೆಯಿತು.