ಮಾತೃಭಾಷೆ ಕನ್ನಡ ಪ್ರೀತಿಸಿ

Contributed by: yandigeri@gmail.com|Vijaya Karnataka•
kannada rajyotsava honoring the mother tongue
ಮಾತೃಭಾಷೆ ಕನ್ನಡ ಪ್ರೀತಿಸಿ

ವಿಕ ಸುದ್ದಿಲೋಕ ಗುಳೇದಗುಡ್ಡ
‘‘ಕನ್ನಡ ನಾಡು ತನ್ನ ಶ್ರೀಮಂತ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯಿಂದ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ನಮ್ಮ ಮಾತೃ ಭಾಷೆ ಬಗ್ಗೆ ಹೆಮ್ಮೆ ಹೊಂದಬೇಕು,’’ ಎಂದು ತಹಸೀಲ್ದಾರ್ ಸತ್ಯಪ್ರಸಾದ ರಾವ್ ಎಂ. ಹೇಳಿದರು.

ಪಟ್ಟಣದಲ್ಲಿತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘‘ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಬಸವಣ್ಣ ಸೇರಿದಂತೆ ಅನೇಕ ಮಹನೀಯರು ಕನ್ನಡದ ಕೀರ್ತಿ ಬೆಳಗಿಸಿದ್ದಾರೆ,’’ ಎಂದರು.

ಉಪತಹಸೀಲ್ದಾರ್ ಜಿ.ವಿ. ರಜಪೂತ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೈ.ಆರ್ . ಹೆಬ್ಬಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಫಕೀರಪ್ಪ ತಳವಾರ, ಕರವೇ ಅಧ್ಯಕ್ಷ ರವಿ ಅಂಗಡಿ, ಸಾಹಿತಿಗಳಾದ ಡಾ.ಸಿ.ಎಂ.ಜೋಶಿ, ಡಾ.ಎಚ್ .ಎಸ್ .ಘಂಟಿ ಇತರರಿದ್ದರು.

ರಾಜ್ಯೋತ್ಸವ ನಿಮಿತ್ತ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿಸಂಚರಿಸಿತು.

ಪೋಟೊ:1ಜಿಎಲ್ ಡಿ-2

ಗುಳೇದಗುಡ್ಡ ಪಟ್ಟಣದಲ್ಲಿಕನ್ನಡ ರಾಜ್ಯೋತ್ಸವ ಅದ್ಧೂರಿಯಿಂದ ಆಚರಿಸಲಾಯಿತು.