ಬಸ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

Contributed by: kugweprakash@gmail.com|Vijaya Karnataka•
ksrtc bus accident two seriously injured
ಬಸ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ವಿಕ ಸುದ್ದಿಲೋಕ ಸಾಗರ (ಶಿವಮೊಗ್ಗ)
ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಆಕ್ಸಲ್ ಬ್ಲೇಡ್ ತುಂಡಾಗಿ ಬಿ.ಎಚ್ . ರಸ್ತೆಯ ಬಾಪಟ್ ಕಲ್ಯಾಣ ಮಂಟಪದ ಸಮೀಪ ಭಾನುವಾರ ಬೆಳಗ್ಗೆ ಪಲ್ಟಿಯಾಗಿದೆ. ಬಸ್ ನಲ್ಲಿಚಾಲಕ ಸೇರಿ ಸುಮಾರು 42 ಮಂದಿ ಇದ್ದರು. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಅಪಘಾತದ ಮಾಹಿತಿ ತಿಳಿದು ತಹಸೀಲ್ದಾರ್ ಡಾ.ಆರ್ .ಪ್ರತಿಭಾ, ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿತ್ರಶೀರ್ಷಿಕೆ

01ಎಸ್ ಜಿಆರ್ 1

ಸಾಗರದ ಬಳಿ ಪಲ್ಟಿಯಾದ ಕೆಎಸ್ ಆರ್ ಟಿಸಿ ಬಸ್ .