ಶಿಕ್ಷಣ ಜತೆಗೆ ನೈತಿಕ ಮೌಲ್ಯ ಬೆಳೆಸಿವಿಕ ಸುದ್ದಿಲೋಕ ಹಿರಿಯೂರು
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಸಂಸ್ಕಾರ, ಸಂಸ್ಕೃತಿ, ಶಿಸ್ತು, ಸಂಯಮ, ನೈತಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿಭವಿಷ್ಯದ ಜೀವನ ರೂಪಿಸುತ್ತಿರುವ ಈ ವಿದ್ಯಾಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಪಟ್ಟನಾ ಯಕನಹಳ್ಳಿ ಶ್ರೀನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿಪ್ಯಾಕ್ಟ್ ಎಜುಕೇಶನ್ ಆಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಅಸೆಂಟ್ ಪಿಯು ಕಾಲೇಜು ನೇತೃತ್ವದಲ್ಲಿಬೋಧಿ ಸೆಂಟರ್ ಫಾರ್ ಲರ್ನಿಂಗ್ ಹೊಸ ಕಟ್ಟಡದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿಕೇವಲ ಹೆಚ್ಚು ಅಂಕಗಳನ್ನು ಗಳಿಸುವುದೇ ಶಿಕ್ಷಣದ ಉದ್ದೇಶವಲ್ಲ. ಉತ್ತಮ ಜ್ಞಾನ ಪಡೆದು, ತಂದೆ-ತಾಯಿಗೆ ಗೌರವಿಸಿ, ಗುರು-ಹಿರಿಯರಿಗೆ ವಿಧೇಯರಾಗಿ, ಸಮಾಜದಲ್ಲಿಉತ್ತಮ ವ್ಯಕ್ತಿಗಳಾಗಿ ಬದುಕುವುದೇ ನಿಜವಾದ ಶಿಕ್ಷಣದ ಮಹತ್ವವಾಗಿದೆ. ಮಕ್ಕಳಲ್ಲಿಸತ್ಯ, ಪ್ರಾಮಾಣಿಕತೆ, ವಿನಯ, ಸಮಯಪ್ರಜ್ಞೆ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯ ಬೆಳೆಯಬೇಕು. ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆಯೂ ಗೌರವ ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿಶಾಲೆಯಷ್ಟೇ, ಪೋಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಮನೆಯಲ್ಲಿಉತ್ತಮ ವಾತಾವರಣ, ಉತ್ತಮ ನಡವಳಿಕೆ ಮತ್ತು ಸಂಸ್ಕಾರಯುತ ಜೀವನಶೈಲಿಯನ್ನು ಮಕ್ಕಳಿಗೆ ಪರಿಚಯಿಸಬೇಕು. ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರದಿಂದ ಮಕ್ಕಳ ವ್ಯಕ್ತಿತ್ವ ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿಬೋಧಿ ಸೆಂಟರ್ ಫಾರ್ ಲರ್ನಿಂಗ್ ಮುಖ್ಯಸ್ಥ ತಿರುಮೂರ್ತಿ, ನಂದಹಳ್ಳಿ ಗ್ರಾಮದ ಮುಖಂಡ ಗಿರಿಜಣ್ಣ, ಗ್ರಾಮಸ್ಥರು, ಶಿಕ್ಷಕರ ವರ್ಗ, ಪೋಷಕರು, ವಿದ್ಯಾರ್ಥಿಗಳು ಇದ್ದರು.
---
1 ಪಿಎಚ್ ವೈಆರ್ 3
ಹಿರಿಯೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿಪ್ಯಾಕ್ಟ್ ಎಜುಕೇಶನ್ ಆಂಡ್ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿಬೋಧಿ ಸೆಂಟರ್ ಫಾರ್ ಲರ್ನಿಂಗ್ ಹೊಸ ಕಟ್ಟಡ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಪಟ್ಟನಾಯಕನಹಳ್ಳಿ ಶ್ರೀನಂಜಾವಧೂತ ಸ್ವಾಮೀಜಿ ಉದ್ಘಾಟಿಸಿದರು.