ಸರಣಿ ರಾಮದುರ್ಗ

Contributed by: mbgvkrmd@gmail.com|Vijaya Karnataka•
rescue service delay in firefighting operations in ramdurg
ದೂರದೂರಲ್ಲಿಬೆಂಕಿ ಹೊತ್ತಿದರೆ ತಲುಪೋದೇ ಲೇಟು!

ರಾಮದುರ್ಗದ ಇಕ್ಕಟ್ಟು ಜಾಗದಲ್ಲಿದೆ ಅಗ್ನಿಶಾಮಕ ಠಾಣೆ | 50 ಕಿಮೀ ವ್ಯಾಪ್ತಿಯಲ್ಲಿಸಾರ್ವಜನಿಕ ಕರೆಗಳಿಗೆ ಉತ್ತಮ ಸ್ಪಂದನೆ
ಮಲ್ಲಿಕಾರ್ಜುನರಡ್ಡಿ ಗೊಂದಿ ರಾಮದುರ್ಗ

ಞಚಿಜvk್ಟಞdಃಜಞaಜ್ಝಿ.್ಚಟಞ

ರಾಮದುರ್ಗ ಅಗ್ನಿಶಾಮಕ ಠಾಣೆ ಅಗತ್ಯ ಎಲ್ಲಸೌಲಭ್ಯ ಹೊಂದಿದ್ದು, ತಾಲೂಕಿನ ಸುಮಾರು 50 ಕಿಮೀ ವ್ಯಾಪ್ತಿಯಲ್ಲೂಸಾರ್ವಜನಿಕ ಕರೆಗಳಿಗೆ ಸ್ಪಂದನೆ ಉತ್ತಮವಾಗಿದೆ. ಆದರೆ, ತಾಲೂಕಿನ ಕೊನೆಯ ಪ್ರದೇಶಗಳಿಗೆ ಅಗ್ನಿಶಾಮಕ ವಾಹನ, ಸಿಬ್ಬಂದಿ ತಲುಪುವುದು ಕೊಂಚ ವಿಳಂಬವಾಗುತ್ತಿದೆ.

2004ರಲ್ಲಿಪಟ್ಟಣದ ಎಂಎಲ್ ಬಿಸಿ ಆವರಣದ ಕಟ್ಟಡದಲ್ಲಿಅಗ್ನಿಶಾಮಕ ಠಾಣೆ ಸ್ಥಾಪನೆಯಾಯಿತು. ಮೊದಲು ಕೇವಲ ಒಂದು ವಾಹನ, ಕೆಲವೇ ಸಿಬ್ಬಂದಿ ನೀಡಲಾಗಿತ್ತು. ಪ್ರಸ್ತುರ 2 ವಾಹನಗಳಿದ್ದು, ಮಂಜೂರಾದ 25 ಸಿಬ್ಬಂದಿಗಳಲ್ಲಿ, 24 ಸಿಬ್ಬಂದಿ ಇದ್ದಾರೆ. ಕೇವಲ ಒಂದು ಹುದ್ದೆ ಖಾಲಿ ಇದೆ. ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕರೆ ಬಂದ ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಅಗ್ನಿ ಕರೆಗಳು-ರಕ್ಷಣೆ ಮಾಡಿದ ಆಸ್ತಿ ವಿವರ:

2022ರಲ್ಲಿ87 ಕರೆಗಳು ಬಂದಿದ್ದು, ಬೆಂಕಿಗೆ ಸಿಲುಕಿದ ಆಸ್ತಿ ಮೌಲ್ಯ 5.12 ಕೋಟಿ ರೂ., ನಷ್ಟವಾದ ಆಸ್ತಿ ಮೌಲ್ಯ 1.18 ಕೋಟಿ ರೂ., ರಕ್ಷಣೆ ಮಾಡಿದ ಆಸ್ತಿ 3.94 ಕೋಟಿ ರೂ. ಆಗಿದೆ. 2023 ರಲ್ಲಿ80 ಕರೆ ಬಂದಿದ್ದು, ಬೆಂಕಿಗೆ ಸಿಲುಕಿದ ಆಸ್ತಿ ಮೌಲ್ಯ 5.81 ಕೋಟಿ ರೂ., ನಷ್ಟವಾದ ಆಸ್ತಿ ಮೌಲ್ಯ 1.19 ಕೋಟಿ ರೂ., ರಕ್ಷಣೆ ಮಾಡಿದ ಆಸ್ತಿ 4.61 ಕೋಟಿ ರೂ. ಆಗಿದೆ. 2024 ರಲ್ಲಿ82 ಕರೆ ಬಂದಿದ್ದು, ಬೆಂಕಿಗೆ ಸಿಲುಕಿಕೊಂಡ ಆಸ್ತಿ ಮೌಲ್ಯ 4.96 ಕೋಟಿ ರೂ., ನಷ್ಟವಾದ ಆಸ್ತಿ ಮೌಲ್ಯ 1.79 ಕೋಟಿ ರೂ., ರಕ್ಷಣೆ ಮಾಡಿದ ಆಸ್ತಿ 3.17 ಕೋಟಿ ರೂ. ಆಗಿದೆ. 2025 ರಲ್ಲಿ44 ಕರೆ ಬಂದಿದ್ದು, ಬೆಂಕಿಗೆ ಸಿಲುಕಿಕೊಂಡ ಆಸ್ತಿ ಮೌಲ್ಯ 2.36 ಕೋಟಿ ರೂ., ನಷ್ಟವಾದ ಆಸ್ತಿ ಮೌಲ್ಯ 64.19 ಲಕ್ಷ ರೂ., ರಕ್ಷಣೆ ಮಾಡಿದ ಆಸ್ತಿ 1.72 ಕೋಟಿ ರೂ., ಒಂದು ಜಾನುವಾರು ಮೃತಪಟ್ಟಿದ್ದು, 5 ಜಾನುವಾರು ರಕ್ಷಣೆ ಮಾಡಲಾಗಿದೆ. 2026 ರಲ್ಲಿ56 ಕರೆ ಬಂದಿದ್ದು, ಬೆಂಕಿಗೆ ಸಿಲುಕಿಕೊಂಡ ಆಸ್ತಿ ಮೌಲ್ಯ 3.13 ಕೋಟಿ ರೂ., ನಷ್ಟವಾದ ಆಸ್ತಿ ಮೌಲ್ಯ 1 ಕೋಟಿ ರೂ., ರಕ್ಷಣೆ ಮಾಡಿದ ಆಸ್ತಿ 2.12 ಕೋಟಿ ರೂ.ಆಗಿದೆ.

ನೀರಿನ ವ್ಯವಸ್ಥೆ:

ಅಗ್ನಿಶಾಮಕ ಠಾಣೆಗೆ ನೀರಿನ ವ್ಯವಸ್ಥೆ ಉತ್ತಮವಾಗಿದ್ದು, ಒಂದು ಬೋರ್ ವೆಲ್ ಇದೆ. ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ವಿದ್ಯುತ್ ಕಡಿತವಾದಾಗ ಪರ್ಯಾಯವಾಗಿ ಜನರೇಟರ್ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಬಹುತೇಕ ಹೊಲಗಳ ಮಧ್ಯದಲ್ಲಿವಿದ್ಯುತ್ ಕಂಬಗಳಿವೆ. ಜೋತು ಬಿದ್ದ ವಿದ್ಯುತ್ ತಂತಿಗಳು ಗಾಳಿಗೆ ಒಂದಕ್ಕೊಂದು ತಾಗಿ ಬೆಂಕಿ ಅವಘಡಗಳು ಹೆಚ್ಚು ಪ್ರಮಾಣದಲ್ಲಿಸಂಭವಿಸುತ್ತಿವೆ. ಹಾಗಾಗಿ ಹೊಲಗಳ ಮಧ್ಯದಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರಿಸಿ ಹೊಲಗಳು ಬದುಗಳಲ್ಲಿನಿಲ್ಲಿಸಿದರೆ ಬೆಂಕಿ ಅವಘಡ ತಪ್ಪಿಸಬಹುದು.

2025 ರಲ್ಲಿ3 ಕೋಟಿ ರೂ.ವೆಚ್ಚದಲ್ಲಿರಾಮದುರ್ಗ ಅಗ್ನಿಶಾಮಕ ಠಾಣೆ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ವರ್ಷದೊಳಗೆ ಕಟ್ಟಡ ಅಲ್ಲಲ್ಲಿಬಿರುಕು ಬಿಟ್ಟಿವೆ. ಬಾಗಿಲು ಕಿತ್ತು ಹೋಗಿವೆ. ಕಟ್ಟಡ ಮಾತ್ರ ಸಂಪೂರ್ಣ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

* ಬಾಕ್ಸ್

ಅಡೆತಡೆ ಇಲ್ಲದ ಸ್ಥಳದಲ್ಲಿಠಾಣೆ ನಿರ್ಮಿಸಿ:

ಅಗ್ನಿಶಾಮಕ ಠಾಣೆಯ ಸಾಮಾನ್ಯವಾಗಿ ಪಟ್ಟಣದ ಹೊರವಲಯದಲ್ಲಿಯಾವುದೆ ಅಡೆತಡೆಗಳಿಲ್ಲದ ಸ್ಥಳದಲ್ಲಿನಿರ್ಮಿಸಲಾಗುತ್ತದೆ. ಆದರೆ, ರಾಮದುರ್ಗದಲ್ಲಿಮಾತ್ರ ಪಟ್ಟಣದ ಮಧ್ಯದಲ್ಲಿಅದರಲ್ಲೂಇಕ್ಕಟ್ಟಾದ ರಸ್ತೆ ಇರುವೆಡೆ ನಿರ್ಮಿಸಲಾಗಿದೆ. ಇಕ್ಕಟ್ಟು ರಸ್ತೆ ಮಧ್ಯದಲ್ಲೊಂದು ಕಲ್ಯಾಣ ಮಂಟಪ ಇದ್ದು, ಮದುವೆ ಸಂದರ್ಭದಲ್ಲಂತೂ ಇಕ್ಕಟ್ಟಾದ ರಸ್ತೆ ಅಕ್ಕಪಕ್ಕ ವಾಹನ ನಿಲ್ಲಿಸಿರುತ್ತಾರೆ. ತುರ್ತು ಸಂದರ್ಭದಲ್ಲಿಅಗ್ನಿಶಾಮಕ ವಾಹನವನ್ನು ರಸ್ತೆ ದಾಟಿಸುವುದೇ ಸಿಬ್ಬಂದಿಗೆ ಸವಾಲಾಗಿದೆ. ಇದರಿಂದ ಬೆಂಕಿ ನಂದಿಸುವ ಕಾರ್ಯ ವಿಳಂಬವಾಗಿ ನಷ್ಟ ಹೆಚ್ಚುತ್ತಿದೆ.

* ಕ್ವೋಟ್

ರಾಮದುರ್ಗ ಆಗ್ನಿಶಾಮಕ ಠಾಣೆಗೆ ಎಲ್ಲಸೌಲಭ್ಯಗಳಿದ್ದು, ಉತ್ತಮ ರೀತಿ ಸಾರ್ವಜನಿಕ ಸೇವೆ ಮಾಡಲಾಗುತ್ತಿದೆ. ಸಿಬ್ಬಂದಿ ಬಾಡಿಗೆ ಮನೆಗಳಲ್ಲಿವಾಸಿಸುತ್ತಿದ್ದಾರೆ. ತುರ್ತು ಸೇವೆ ಅಗತ್ಯ ಬಿದ್ದಾಗ ಮನೆಗಳಿಂದ ಬರುವುದು ತಡವಾಗಬಹುದು. ಹಾಗಾಗಿ ಠಾಣೆ ಪಕ್ಕದಲ್ಲಿಯೇ ಸಿಬ್ಬಂದಿ ವಸತಿಗೃಹ ನಿರ್ಮಿಸುವ ಅಗತ್ಯವಿದೆ.

-ಎಂ.ಎಂ.ಕವಡಿ | ಅಗ್ನಿಶಾಮಕ ಠಾಣಾಧಿಕಾರಿ, ರಾಮದುರ್ಗ

ಫೋಟೊ ಶೀರ್ಷಿಕೆ: 27ಆರ್ ಡಿ4

ರಾಮದುರ್ಗದಲ್ಲಿರುವ ಅಗ್ನಿಶಾಮಕ ದಳದ ಬೃಹತ್ ಕಟ್ಟಡ.