ನಾಡು ಸಮೃದ್ಧಿಗೊಳಿಸೋಣ

Contributed by: yadawad108@gmail.com|Vijaya Karnataka•
resolution to enrich the kannada region
ನಾಡು ಸಮೃದ್ಧಿಗೊಳಿಸೋಣ

ವಿಕ ಸುದ್ದಿಲೋಕ ತೇರದಾಳ
‘‘ಕನ್ನಡ ನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ನಂಬಿ ಬಂದವರಿಗೆ ಈ ನಾಡು ಆಸರೆ ನೀಡುತ್ತದೆ. ಈ ನಾಡಿನಲ್ಲಿಯೇ ಜನಿಸಿರುವ ನಾವುಗಳು ನಮ್ಮ ಕನ್ನಡ ನಾಡನ್ನು ಸಮೃದ್ಧಿಗೊಳಿಸುವ ಸಂಕಲ್ಪ ಮಾಡೋಣ,’’ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘‘ದೇಶ ಹಾಗೂ ನಾಡಿನ ವಿಷಯ ಬಂದಾಗ ಜಾತಿ, ರಾಜಕೀಯ ಮಾಡದೇ ಮಣ್ಣಿನ ಋುಣ ತೀರಿಸುವ ಕೆಲಸಕ್ಕೆ ಮುಂದಾಗಬೇಕು. ಬರೀ ರಾಜಕಾರಣ ಒಂದೇ ಶಾಶ್ವತ ಅಲ್ಲ. ಬದಲಾಗಿ ಅದನ್ನು ಮೀರಿ ನಮ್ಮ ಸಂಸ್ಕೃತಿ, ನಿಸರ್ಗ ಇದೆ ಎಂಬುದನ್ನು ಮರೆಯಬಾರದು,’’ಎಂದರು.

ತಹಸೀಲ್ದಾರ್ ವಿಜಯಕುಮಾರ್ ಕಡಕೋಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನೇಮಣ್ಣ ಸಾವಂತನವರ, ಅಧಿಕಾರಿ ಎಲ್ .ಎನ್ .ಮಿರಜಕರ್ , ಎಸ್ .ಎಂ.ಬಿರಾದಾರ, ಎಸ್ .ಪಿ.ಮುತ್ತಪ್ಪಗೋಳ, ಪಿ.ಆರ್ .ಮಠಪತಿ, ಇರ್ಫಾನ್ ಝಾರೆ, ಕರವೇ ಅಧ್ಯಕ್ಷ ಮೈನುದ್ದೀನ್ ಮೊಕಾಶಿ, ಅನಂತ ಮುಧೋಳ, ಮಹೇಶ ಸೋರಗಾಂವಿ ಇದ್ದರು.

ತಾಲೂಕು ಆಡಳಿತದಿಂದ ಐದು ಜನ ಸಾಧಕರನ್ನು ಸನ್ಮಾನಿಸಲಾಯಿತು.

ಮೆರವಣಿಗೆ: ಪಟ್ಟಣದ ಪ್ರಮುಖ ಬೀದಿಗಳಲ್ಲಿತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗಿತು. ಮಹಾತ್ಮರ ವೇಷಧರಿಸಿದ ಪುಟಾಣಿಗಳು, ಜನಪದ ಕಲಾವಿದರ ತಂಡ ಜನಮನಸೆಳೆದವು.

ಫೊಟೊ ಫೈಲ್ ನೇಮ್ ಟಿಡಿಎಲ್ -01-1ಎ

ಎ) ತೇರದಾಳ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಶಾಸಕ ಸಿದ್ದು ಸವದಿ ತಹಸೀಲ್ದಾರ್ ವಿಜಯಕುಮಾರ್ ಕಡಕೋಳ ಭಾಗವಹಿಸಿದ್ದರು.