ಅಜಪುರ ಕರ್ನಾಟಕ ಸಂಘದ ನೇತೃತ್ವದಲ್ಲಿತಾಲೂಕು ಆಡಳಿತ, ನಾನಾ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಶ್ರೀಭುವನೇಶ್ವರಿ ಮಾತೆಗೆ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮಾಲಾರ್ಪಣೆ ಮಡಿದರು. ನಂತರ ರಾಜ್ಯೋತ್ಸವ ಮೆರವಣಿಗೆ ನಡೆಯಿತು. ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಗ್ರೇಡ್ 2 ತಹಸೀಲ್ದಾರ್ ಅಶೋಕ್ ಭಟ್ , ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಅಜಪುರ ಕರ್ನಾಟಕ ಸಂಘದ ಉಪಾಧ್ಯಕ್ಷ ಬಲರಾಮ ಕಲ್ಕೂರ, ಕಾರ್ಯದರ್ಶಿ ಬೈಕಾಡಿ ದಿನಕರ ಶೆಟ್ಟಿ, ಗಿರೀಶ್ ಅಡಿಗ, ಅಶೋಕ್ ಭಟ್ ,ಮಾಧವ ಖಾರ್ವಿ, ಆರ್ .ಎಂ.ಸಾಮಗ, ಉಮೇಶ್ ಪೂಜಾರಿ, ಭಾಸ್ಕರ್ ಶೆಟ್ಟಿ ಚಾಂತಾರು, ಸೂರ್ಯ ಸಾಲಿಯಾನ್ , ಜಿ.ಎಂ. ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಪ್ರಕಾಶ್ಚಂದ್ರ ಶೆಟ್ಟಿ,, ಸರಕಾರಿ ಪದವಿ ಪೂರ್ವ ಕಾಲೆಜಿನ ಪ್ರಿನ್ಸಿಪಾಲ್ ರವೋಂದ್ರ ಉಪಾಧ್ಯಾಯ, ಎಸ್ .ಎಂ.ಎಸ್ . ಪ.ಪೂ. ಪ್ರಿನ್ಸಿಪಾಲ್ ಐವನ್ ದೊನಾತ್ ಸುವಾರಿಸ್ , ನಿರ್ಮಲಾ ಹೈಸ್ಕೂಲ್ ಮುಖ್ಯ ಶಿಕ್ಷಕಿ ಸಿಸ್ಟರ್ ಫ್ಲಾವಿಯ ಫೆಲ್ಸಿ ಪಿಂಟೋ, ಹಿರಿಯ ನಾಗರಿಕರ ವೇದಿಕೆಯ ಸದಸ್ಯರು,ಅಜಪುರ ಕರ್ನಾಟಕ ಸಂಘದ ಸದಸ್ಯರು, ನಾನಾ ಸಂಘಗಳ ಪ್ರಮುಖರು, ಶಿಕ್ಷಕರು, 3 ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.