ಫ್ಯಾಷನ್ ಐಕಾನ್ ಅಲಿಯಾ ಭಟ್ ತಮ್ಮ ವಿಶಿಷ್ಟ ಉಡುಪುಗಳ ಆಯ್ಕೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ಬಂಗಾರ ವರ್ಣದ ಬನಾರಸಿ ಜಾಕೆಟ್ ಡ್ರೆಸ್ ಮೂಲಕ ಗಮನ ಸೆಳೆದಿದ್ದಾರೆ.ನೇಕಾರರು ಸಿದ್ಧಪಡಿಸಿದ ಅಲಿಯಾ ಅವರ ಬಂಗಾರ ಬಣ್ಣದ ಡ್ರೆಸ್ ನ ಝರಿ ಕೆಲಸವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ಸೀರೆ ಅಥವಾ ಲೆಹೆಂಗಾ ಶೈಲಿಗೆ ಬದಲಾಗಿ ಆಧುನಿಕ ಜಾಕೆಟ್ ರೂಪದಲ್ಲಿಇದನ್ನು ವಿನ್ಯಾಸಗೊಳಿಸಿರುವುದು ವಿಶೇಷ. ಆಡಂಬರವಿಲ್ಲದ ಗಂಭೀರ ಹಾಗೂ ಐಷಾರಾಮಿ ಲುಕ್ ನೀಡುವುದು ಈ ಜಾಕೆಟ್ ನ ಪ್ರಮುಖ ಆಕರ್ಷಣೆ. ಅವರ ಕೊರಳಿನ ಆಭರಣ ಈ ದಿರಸಿಗೆ ಪೂರಕವಾಗಿ ಆಕರ್ಷಣೆ ಹೆಚ್ಚಿಸಿಕೊಂಡಿದೆ. ಸರಳ ಮೇಕಪ್ ಲುಕ್ ನಲ್ಲಿಆಲಿಯಾ ಕಂಗೊಳಿಸಿದ್ದಾರೆ.
ಹಬ್ಬಗಳು ಬಂದಾಗ ಸಾಂಪ್ರದಾಯಿಕ ಉಡುಪುಗಳನ್ನು ಹೇಗೆ ಆಧುನಿಕವಾಗಿ ಧರಿಸಬಹುದು ಎಂಬುದಕ್ಕೆ ಅಲಿಯಾ ಭಟ್ ಅವರ ಈ ಲುಕ್ ಅತ್ಯುತ್ತಮ ಉದಾಹರಣೆಯಾಗಿದೆ.