ಜ್ಞಾನ ಲೋಕ

Contributed by: dheeraj.d@timesofindia.com|Vijaya Karnataka•
cryptology and heliosphere a journey into knowledge world
ಕ್ರಿಪ್ಟಾಲಜಿ (ಇ್ಟypಠಿಟ್ಝಟಜy)

ಕ್ರಿಪ್ಟಾಲಜಿ ಎಂದರೆ ಗೂಢಲಿಪಿ ಶಾಸ್ತ್ರ. ಇದು ರಹಸ್ಯ ಸಂದೇಶಗಳನ್ನು ಬರೆಯುವುದು, ಅರ್ಥಮಾಡಿಕೊಳ್ಳುವುದು ಮತ್ತು ಸುರಕ್ಷಿತವಾಗಿ ಸಂವಹನ ಮಾಡುವುದಕ್ಕೆ ಸಂಬಂಧಿಸಿದ ವಿಜ್ಞಾನ. ಕ್ರಿಪ್ಟಾಲಜಿ ಎರಡು ಪ್ರಮುಖ ವಿಭಾಗಗಳನ್ನು ಹೊಂದಿದೆ:. ಕ್ರಿಪ್ಟೋಗ್ರಫಿ (ಇ್ಟypಠಿಟಜ್ಟaphy - ಗೂಢಲಿಪಿ ರಚನೆ)ಅಂದರೆ ರಹಸ್ಯ ಸಂದೇಶಗಳನ್ನು ಅಥವಾ ಮಾಹಿತಿಯನ್ನು ಬೇರೆಯವರಿಗೆ ಅರ್ಥವಾಗದಂತೆ ಕೋಡ್ (ಇಟdಛಿ)ಅಥವಾ ಗುಪ್ತ ರೂಪಕ್ಕೆ ಬದಲಾಯಿಸುವುದು. ಇಂದು ನಾವು ಆನ್ ಲೈನ್ ನಲ್ಲಿಮಾಡುವ ಹಣಕಾಸಿನ ವರ್ಗಾವಣೆಗಳು, ವಾಟ್ಸ್ಯಾಪ್ ಚಾಟ್ ಗಳು ಮತ್ತು ಪಾಸ್ ವರ್ಡ್ ಗಳು ಸುರಕ್ಷಿತವಾಗಿರಲು ಇದರ ಬಳಕೆಯಾಗುತ್ತದೆ. ಕ್ರಿಪ್ಟಾನಾಲಿಸಿಸ್ (ಇ್ಟypಠಿa್ಞa್ಝysಜಿs - ಗೂಢಲಿಪಿ ಭೇದನ)ಅಂದರೆ ಕಳುಹಿಸಿದವರ ಅನುಮತಿಯಿಲ್ಲದೆ ಅಥವಾ ಗುಪ್ತ ಕೀ ಇಲ್ಲದೆ ರಹಸ್ಯ ಸಂದೇಶಗಳನ್ನು ಒಡೆದು, ಅದರ ನಿಜವಾದ ಅರ್ಥವನ್ನು ಕಂಡುಹಿಡಿಯುವ ಕಲೆ ಅಥವಾ ವಿಜ್ಞಾನವೇ ಕ್ರಿಪ್ಟಾನಾಲಿಸಿಸ್ . ಸೈಬರ್ ಭದ್ರತೆಯಲ್ಲಿದೋಷಗಳನ್ನು ಪತ್ತೆಹಚ್ಚಲು ಮತ್ತು ಹ್ಯಾಕರ್ ಗಳ ತಂತ್ರಗಳನ್ನು ವಿಶ್ಲೇಷಿಸಲು ಇದನ್ನು ಬಳಸಲಾಗುತ್ತದೆ.
= = =

ಹೀಲಿಯೋಸ್ಫಿಯರ್

ಸೂರ್ಯನು ತನ್ನ ಸುತ್ತಲೂ ಸೃಷ್ಟಿಸಿಕೊಂಡಿರುವ ಒಂದು ವಿಶಾಲವಾದ ಮತ್ತು ಅಗಾಧವಾದಕಾಂತೀಯ ಗುಳ್ಳೆ (ಋaಜ್ಞಛಿಠಿಜ್ಚಿ ಚ್ಠಿಚಿಚ್ಝಿಛಿ) ಹೀಲಿಯೋಸ್ಫಿಯರ್ . ಇದು ಸೂರ್ಯನಿಂದ ಹೊರಹೊಮ್ಮುವ ವಿದ್ಯುತ್ತಿನಿಂದ ಕೂಡಿದ ಅನಿಲದ ಕಣಗಳ (ಖಟ್ಝa್ಟ Wಜ್ಞಿd) ಪ್ರಭಾವದಿಂದ ರೂಪುಗೊಂಡಿದೆ. ಸೂರ್ಯನು ನಿರಂತರವಾಗಿ ಪ್ರೋಟಾನ್ ಗಳು ಮತ್ತು ಎಲೆಕ್ಟ್ರಾನ್ ಗಳಂತಹ ಅತಿವೇಗದ ಕಣಗಳನ್ನು ಎಲ್ಲಾದಿಕ್ಕುಗಳಿಗೂ ಹೊರಹಾಕುತ್ತಿರುತ್ತಾನೆ. ಈ ಸೌರವ್ಯೂಹದ ಕಣಗಳು ಬಾಹ್ಯಾಕಾಶದಲ್ಲಿಕೋಟ್ಯಂತರ ಕಿಲೋಮೀಟರ್ ದೂರದವರೆಗೆ ಹಬ್ಬಿ, ನಕ್ಷತ್ರಗಳ ನಡುವಿನ ಬಾಹ್ಯಾಕಾಶದಿಂದ (ಐ್ಞಠಿಛ್ಟಿsಠಿಛ್ಝ್ಝಿa್ಟ spa್ಚಛಿ) ಬರುವ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಮತ್ತು ವಿಕಿರಣಗಳನ್ನು (್ಕadಜಿaಠಿಜಿಟ್ಞ) ತಡೆಯುವ ಒಂದು ಬಲವಾದ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತವೆ. ಹೀಲಿಯೋಸ್ಫಿಯರ್ ಕೇವಲ ಸೌರವ್ಯೂಹದ ಗ್ರಹಗಳಷ್ಟೇ ಅಲ್ಲ, ನಮ್ಮ ಪ್ಲುಟೋ ಗ್ರಹವನ್ನೂ ಮೀರಿ ಬಹಳ ದೂರದವರೆಗೆ ಹಬ್ಬಿದೆ. ಹೀಲಿಯೋಸ್ಫಿಯರ್ ನ ಹೊರ ಅಂಚನ್ನು ‘ಹೀಲಿಯೋಪಾಸ್ ’ (ಏಛ್ಝಿಜಿಟpa್ಠsಛಿ) ಎಂದು ಕರೆಯಲಾಗುತ್ತದೆ. ನಾಸಾದ (Nಅಖಅ) ‘ವಾಯೇಜರ್ 1’ ಮತ್ತು ‘ವಾಯೇಜರ್ 2’ ಬಾಹ್ಯಾಕಾಶ ನೌಕೆಗಳು ಈ ಅಂಚನ್ನು ದಾಟಿ ಹೊರಗೆ ಹೋಗಿವೆ.

ಫರ್ಮಿ ಪ್ಯಾರಡಾP್ಸ… (ಊಛ್ಟಿಞಜಿ Pa್ಟadಟ್ಡ)

ಬ್ರಹ್ಮಾಂಡವು ಇಷ್ಟೊಂದು ಅಗಾಧವಾಗಿದ್ದು ಕೋಟ್ಯಂತರ ನಕ್ಷತ್ರಗಳು ಹಾಗೂ ಗ್ರಹಗಳಿದ್ದರೂ, ನಮಗೆ ಪ್ರಪಂಚದಲ್ಲಿಎಲ್ಲೂಪರಗ್ರಹ ಜೀವಿಗಳ (ಅ್ಝಜಿಛ್ಞಿs) ಸುಳಿವು ಏಕೆ ಸಿಗುತ್ತಿಲ್ಲ? ಈ ಗೊಂದಲಮಯ ಮತ್ತು ಕುತೂಹಲಕಾರಿ ಪ್ರಶ್ನೆಯೇ ಫರ್ಮಿ ಪ್ಯಾರಡಾP್ಸ…. 1950ರಲ್ಲಿಪ್ರಸಿದ್ಧ ಭೌತಶಾಸ್ತ್ರಜ್ಞ ಎನ್ರಿಕೋ ಫರ್ಮಿ ಅವರು ತಮ್ಮ ಸ್ನೇಹಿತರೊಂದಿಗೆ ಊಟದ ಸಮಯದಲ್ಲಿಚರ್ಚಿಸುತ್ತಾ, ಎಲ್ಲರೂ ಎಲ್ಲಿದ್ದಾರೆ? ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಅವರ ಈ ಆಕಾಶಕಾಯದ ಮೇಲಿನ ಸರಳ ಪ್ರಶ್ನೆಯೇ ಇಂದು ವಿಜ್ಞಾನ ಜಗತ್ತಿನಲ್ಲಿಅತಿ ದೊಡ್ಡ ಚರ್ಚೆಯ ವಿಷಯವಾಗಿದೆ. ನಮ್ಮ ಕ್ಷೀರಪಥ ಗೆಲಾಕ್ಸಿಯೊಂದರಲ್ಲೇ ಕೋಟ್ಯಂತರ ಸೂರ್ಯನಂತಹ ನಕ್ಷತ್ರಗಳಿವೆ. ಆ ನಕ್ಷತ್ರಗಳ ಸುತ್ತಲೂ ಭೂಮಿಯಂತೆ ಜೀವವಿಕಾಸಕ್ಕೆ ಸೂಕ್ತವಾದ ವಾತಾವರಣವಿರುವ ಕೋಟ್ಯಂತರ ಗ್ರಹಗಳಿವೆ. ಬ್ರಹ್ಮಾಂಡವು ಭೂಮಿಗಿಂತ ಕೋಟ್ಯಂತರ ವರ್ಷ ಹಳೆಯದು. ಹೀಗಾಗಿ ಬೇರೆ ಯಾವುದಾದರೂ ಗ್ರಹದಲ್ಲಿಮಾನವನಿಗಿಂತಲೂ ಅತ್ಯಂತ ತಂತ್ರಜ್ಞಾನದಲ್ಲಿಮುಂದುವರಿದ ಜೀವಿಗಳು ವಿಕಾಸಗೊಳ್ಳಲು ಸಾಕಷ್ಟು ಸಮಯವಿತ್ತು. ಆದರೆ, ಇಷ್ಟೆಲ್ಲಾಸಾದ್ಯತೆಗಳಿದ್ದರೂ ನಮಗೆ ಇದುವರೆಗೆ ಯಾವುದೇ ಏಲಿಯನ್ ಗಳ ಸಂಕೇತ (್ಕadಜಿಟ ಖಜಿಜ್ಞa್ಝ), ನೌಕೆಗಳು ಅಥವಾ ಅಸ್ತಿತ್ವದ ಸಾಕ್ಷಿಗಳು ದೊರೆತಿಲ್ಲ. ಬ್ರಹ್ಮಾಂಡದಲ್ಲಿಏಲಿಯನ್ ಗಳು ಇರಲೇಬೇಕು ಎಂಬ ಸಾಧ್ಯತೆಗೂ ಮತ್ತು ಅವು ಇರುವುದಕ್ಕೆ ಇದುವರೆಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲದಿರುವ ಕಟು ವಾಸ್ತವಕ್ಕೂ ನಡುವಿನ ಸಂಘರ್ಷವೇ ಫರ್ಮಿ ಪ್ಯಾರಡಾP್ಸ….