ದಿನಭವಿಷ್ಯ 03 ನವೆಂಬರ್ 2026

Contributed by: netravati.krishnamurthy@timesofindia.com|Vijaya Karnataka•
daily horoscope 2026 know the important events based on your zodiac sign
ದಿನಭವಿಷ್ಯ 03 ನವೆಂಬರ್ 2026

ಶ್ರೀಪತಿ ಭಟ್ | ಬೆಂಗಳೂರು
(ಕುಂಭ-ಈ ರಾಶಿಯವರಿಗೆ ಪುಣ್ಯ ಕ್ಷೇತ್ರ ದರ್ಶನ ಯೋಗ)

-----------

ಮೇಷ : ಉಚ್ಚ ಸ್ಥಾನದಲ್ಲಿರುವಂತಹ ನೀವು ತಪ್ಪುಗಳನ್ನು ಮಾಡಿದ್ದಲ್ಲಿನಿಮ್ಮನ್ನೇ ಅನುಸರಿಸುವ ಸಹೋದ್ಯೋಗಿಗಳಿಗೆ ನೀವು ಏನೂ ಹೇಳದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕತ್ತಲೆಯಲ್ಲಿಸಂಚರಿಸದಿರಿ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕೆಂಪು)

----------

ವೃಷಭ : ವಿವಾದಾಸ್ಪದ ವಿಷಯಗಳ ಕಡೆ ನಿಮ್ಮ ಅನಿಸಿಕೆ ಅಪ್ರಸ್ತುತವಾಗಿರುತ್ತದೆ. ತಾಮ್ರ, ಹಿತ್ತಾಳೆ ವಸ್ತುಗಳ ಮಾರಾಟದಿಂದ ಲಾಭವು ಇದೆ. ಮಾಡಿದ ಪಾಪ-ಕರ್ಮಗಳಿಗೆ ಪ್ರಾಯಶ್ಚಿತ ಮಾಡಿ ಪಾಪ ತೊಳೆದುಕೊಳ್ಳುವ ಮನಸ್ಸಾಗಲಿದೆ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಸಿರು)

----------

ಮಿಥುನ : ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿಯಶಸ್ವಿಯಾಗುವಿರಿ. ರಕ್ಷಣಾ ವಿಭಾಗದಲ್ಲಿಕಾರ್ಯ ನಿರ್ವಹಿಸಲು ಅರ್ಹತೆ ಮತ್ತು ಆಸಕ್ತಿ ಹೊಂದಿದವರಿಗೆ ಆಯ್ಕೆಗೊಳ್ಳುವ ಅವಕಾಶ ಶೀಘ್ರದಲ್ಲೇ ಸಿಗಲಿದೆ.

(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ನೀಲಿ)

---------

ಕಟಕ : ವಿಭಿನ್ನ ರೀತಿಯ ಮತ್ತು ಅತಿ ಕ್ಲಿಷ್ಟಕರವಾರ ಕೆಲಸವೊಂದನ್ನು ನಿಮ್ಮ ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ, ಒಪ್ಪಿಕೊಳ್ಳಿ. ಅದು ಗೌರವ, ಹೆಸರನ್ನು ತರಲಿದೆ. ದಿನಸಿ ವರ್ತಕರಿಗೆ ನಷ್ಟವಾಗಲಿದೆ.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಳದಿ)

--------

ಸಿಂಹ : ಗಂಡ-ಹೆಂಡತಿ ಮಧ್ಯೆ ಅನಗತ್ಯ ವಿವಾದಗಳು ಬೇಡ. ಇಲಾಖೆ ಪರೀಕ್ಷೆಯಲ್ಲಿಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ಮನಸ್ಸನ್ನು ಹಿಡಿತದಲ್ಲಿಇಟ್ಟುಕೊಳ್ಳಬೇಕಾದ ಅಗತ್ಯವಿದೆ.

(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ನೇರಳೆ )

-------

ಕನ್ಯಾ : ಸಾಮಾಜಿಕ ಸಮಾರಂಭಗಳಲ್ಲಿಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿಅನುಕೂಲವಾಗುವುದು. ಕಾರ್ಮಿಕರ ಬೇಡಿಕೆಗಳು ಇತ್ಯರ್ಥವಾಗಲಿವೆ. ವಾಹನ ಮಾರಾಟಗಾರರಿಗೆ ಆದಾಯ ದೊರೆತು ಸಂತಸವಾಗಲಿದೆ.

(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಕೇಸರಿ)

----------

ತುಲಾ : ಯಾವುದೇ ಉದ್ವೇಗಕ್ಕೆ ಒಳಗಾಗದೇ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುವಿರಿ. ಗ್ರಂಥ ಪಾಲಕರ ಹುದ್ದೆಗೆ ಅಭ್ಯರ್ಥಿಯಾಗುವುದರಿಂದ ಶುಭವಿದೆ. ಅನಾಥರಿಗೆ ವಿದ್ಯಾಭ್ಯಾಸ ಸಹಾಯ ಮಾಡುವ ಯೋಚನೆ ಮಾಡಿ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಗುಲಾಬಿ)

---------

ವೃಶ್ಚಿಕ : ಕೆಲಸದಲ್ಲಿಒತ್ತಡವಿರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ. ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳಬೇಕಾಗುವುದು. ನಿಮ್ಮ ಪ್ರಾಮಾಣಿಕತೆಗೆ ಅಡ್ಡಿ ಉಂಟಾಗಬಹುದು.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂದು)

-------

ಧನು : ಲಾಭಕ್ಕಾಗಿ ವೃತ್ತಿನಿಷ್ಠೆಯನ್ನು ಬಿಡುವ ತೀರ್ಮಾನ ಕೈಗೊಳ್ಳಬೇಡಿ. ಕೈಗಾರಿಕೋದ್ಯಮಿಗಳಿಗೆ ಲಾಭ ಬರುವುದು. ತಾಂತ್ರಿಕ ವಿದ್ಯೆಯಲ್ಲಿಯಶಸ್ಸು ಲಭಿಸುವುದು. ಕೋರ್ಟು ವ್ಯವಹಾರಗಳು ನಿಮ್ಮದಾಗಲಿವೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)

--------

ಮಕರ : ವಾಣಿಜ್ಯ-ವ್ಯವಹಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಮಾಡುವ ಕೆಲಸದಲ್ಲಿವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹಟ್ಟುವರು.

(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಬೂದು)

-------

ಕುಂಭ : ಸಂಸಾರದ ವಿಷಯಗಳತ್ತ ಗಮನಹರಿಸುವಿರಿ. ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕ ಕಲೆಯನ್ನು ಉಪಯೋಗಿಸಿಕೊಳ್ಳುವರು. ಸಮಾಜದಲ್ಲಿಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ಬೆಂಬಲಕ್ಕೆ ಬರುವರು.

(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಪ್ಪು)

------

ಮೀನ : ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಾಗ ಗೊಂದಲ ಉಂಟಾಗಬಹುದು. ವಾಹನ ಕೊಳ್ಳುವುದನ್ನು ಮುಂದೂಡಿ. ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗಲಿದೆ.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕಂದುಕೆಂಪು)