ಇಂಟ್ರೊನಮ್ಮ ಕಣ್ಣಿಗೆ ಕಾಣದ ಅತಿ ಸೂಕ್ಷ್ಮ ಜೀವಿಗಳು ಪ್ರಕೃತಿಯಲ್ಲಿಎಷ್ಟೊಂದು ದೊಡ್ಡ ಪ್ರಮಾಣದಲ್ಲಿವೆ ಎಂದರೆ, ಅವುಗಳ ಪ್ರಮಾಣವನ್ನು ಊಹಿಸುವುದೇ ಕಷ್ಟ. ಭೂಮಿಯ ಮೇಲಿನ ಬ್ಯಾಕ್ಟೀರಿಯಾಗಳ ಬಗ್ಗೆ ವಿಜ್ಞಾನಿಗಳು ಬಹಿರಂಗಪಡಿಸಿರುವ ಕೆಲವು ರೋಚಕ ಮತ್ತು ಬೆರಗು ಮೂಡಿಸುವ ಸಂಗತಿಗಳು ಇಲ್ಲಿವೆ.
= = =
ನಾವು ಭೂಮಿಯ ಮೇಲಿನ ಅತ್ಯಂತ ದೊಡ್ಡ ಜೀವ ರೂಪಗಳನ್ನು ಕಲ್ಪಿಸಿಕೊಂಡಾಗ, ನೀಲಿ ತಿಮಿಂಗಿಲಗಳು, ಬೃಹತ್ ರೆಡ್ ವುಡ್ ಕಾಡುಗಳು ಅಥವಾ ವಿಶಾಲವಾದ ಹವಳದ ದಿಬ್ಬಗಳು ನೆನಪಿಗೆ ಬರುತ್ತವೆ. ಆದರೆ ನಮ್ಮ ಗ್ರಹದ ಎಲ್ಲೆಡೆಯೂ ಹರಡಿರುವ ದೈತ್ಯ ಜೀವರಾಶಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಹೀಗೆ ಎಲ್ಲೆಡೆಯೂ ಇದ್ದು ಕಣ್ಣಿಗೆ ಕಾಣಿಸದಿರುವ ಜೀವರಾಶಿಯೇ ಬ್ಯಾಕ್ಟೀರಿಯಾ.
ಬ್ಯಾಕ್ಟೀರಿಯಾ ಎಂದರೇನು?
ಬ್ಯಾಕ್ಟೀರಿಯಾಗಳು ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮವಾದ, ಏಕಕೋಶೀಯ ಜೀವಿಗಳು. ಇವು ಭೂಮಿಯ ಮೇಲಿರುವ ಅತ್ಯಂತ ಪ್ರಾಚೀನ ಮತ್ತು ಕೋಟ್ಯಂತರ ಸಂಖ್ಯೆಯಲ್ಲಿರುವ ಜೀವಿಗಳಲ್ಲಿಒಂದಾಗಿವೆ. ಇವು ಮಣ್ಣು, ನೀರು, ಗಾಳಿ, ಸಾಗರದ ಆಳದಿಂದ ಹಿಡಿದು ಮಾನವನ ದೇಹದ ಒಳಗಿನವರೆಗೆ ಎಲ್ಲೆಡೆ ವಾಸಿಸುತ್ತವೆ.
ಪ್ರಮುಖ ಲಕ್ಷಣಗಳು
ಇವು ಅತಿ ಸೂಕ್ಷ್ಮವಾಗಿದ್ದು, ಸಾಮಾನ್ಯವಾಗಿ ಮೈಕ್ರೋಮೀಟರ್ ಅಳತೆಯಲ್ಲಿರುತ್ತವೆ. ಇವುಗಳನ್ನು ನೋಡಲು ಶಕ್ತಿಶಾಲಿ ಸೂಕ್ಷ್ಮದರ್ಶಕ ಬೇಕಾಗುತ್ತದೆ. ಬ್ಯಾಕ್ಟೀರಿಯಾಗಳು ಗೋಳಾಕಾರ, ಕಡ್ಡಿಯಾಕಾರ ಹಾಗೂ ಸುರುಳಿಯಾಕಾರ ಎಂಬ ಮೂರು ವಿಧಗಳಲ್ಲಿಕಂಡುಬರುತ್ತವೆ. ಎಲ್ಲಾಬ್ಯಾಕ್ಟೋರೊಯಾಗಳು ರೋಗವನ್ನುಉ ಉಂಟುಮಾಡುವುದಿಲ್ಲ. ವಾಸ್ತವದಲ್ಲಿಹೆಚ್ಚಿನ ಬ್ಯಾಕ್ಟೀರಿಯಾಗಳು ನಮಗೆ ಪ್ರಯೋಜನಕಾರಿಯಾಗಿವೆ.
ಉಪಕಾರಿ ಬ್ಯಾಕ್ಟೀರಿಯಾಗಳು: ಹಾಲನ್ನು ಮೊಸರನ್ನಾಗಿ ಪರಿವರ್ತಿಸಲು ಲ್ಯಾಕ್ಟೋಬ್ಯಾಸಿಲಸ್ (ಔa್ಚಠಿಟಚಿa್ಚಜ್ಝ್ಝ್ಠಿs) ಬ್ಯಾಕ್ಟೀರಿಯಾ ಅತ್ಯಗತ್ಯ. ನಮ್ಮ ಕರುಳಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಆಹಾರ ಜೀರ್ಣಿಸಿಕೊಳ್ಳಲು ಮತ್ತು ವಿಟಮಿನ್ ಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತವೆ. ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಕೊಳೆಸಿ, ಮಣ್ಣಿಗೆ ಪೋಷಕಾಂಶಗಳನ್ನು ಮರುಪೂರಣ ಮಾಡುವಲ್ಲಿಇವು ಪ್ರಮುಖ ಪಾತ್ರವಹಿಸುತ್ತವೆ.
ಹಾನಿಕಾರಕ ಬ್ಯಾಕ್ಟೀರಿಯಾಗಳು: ಕೆಲವು ಬ್ಯಾಕ್ಟೀರಿಯಾಗಳು ಮಾನವರು ಮತ್ತು ಪ್ರಾಣಿಗಳಲ್ಲಿಟೈಫಾಯ್ಡ್ , ಕಾಲರಾ, ಕ್ಷಯ, ನ್ಯುಮೋನಿಯಾದಂತಹ ಗಂಭೀರ ರೋಗಗಳನ್ನು ಉಂಟುಮಾಡುತ್ತವೆ.ಇವುಗಳನ್ನು ಆಂಟಿಬಯೋಟಿಕ್ ಗ ಮೂಲಕ ಗುಣಪಡಿಸಲಾಗುತ್ತದೆ.
ಭೂಮಿಯ ಸೂಕ್ಷ್ಮಜೀವಿಗಳ ಜಾಲ:
ಒಂದು ಬ್ಯಾಕ್ಟೀರಿಯಾದ ಸರಾಸರಿ ಉದ್ದ ಸುಮಾರು 0.001 ಮಿಲಿಮೀಟರ್ . ಅಂದರೆ ನಾವು ಬಳಸುವ ಸಾಮಾನ್ಯ ಕಾಗದದ ದಪ್ಪವು ಒಂದು ಬ್ಯಾಕ್ಟೀರಿಯಾಕ್ಕಿಂತ ಸುಮಾರು 100 ಪಟ್ಟು ಹೆಚ್ಚಿರುತ್ತದೆ. ಅವುಗಳ ಈ ಸೂಕ್ಷ್ಮ ಗಾತ್ರದ ಕಾರಣದಿಂದಾಗಿ ಅವುಗಳ ಒಟ್ಟು ಸಂಖ್ಯೆಯನ್ನು ಅಂದಾಜಿಸುವುದು ಸುಲಭವಲ್ಲ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಭೂಮಿಯ ಮೇಲಿನ ಬ್ಯಾಕ್ಟೀರಿಯಾಗಳ ಒಟ್ಟು ಸಂಖ್ಯೆ 5ರ ನಂತರ 30 ಸೊನ್ನೆಗಳಿರುವಷ್ಟು ಅಪಾರವಾಗಿದೆ.
ಬಾಕ್ಸ್
ಸೂಕ್ಷ್ಮಜೀವಿಗಳ ಪ್ರಾಮುಖ್ಯತೆ
ಈ ಅಪಾರ ಪ್ರಮಾಣವು ಕೇವಲ ಗಣಿತದ ವಿಸ್ಮಯ ಮಾತ್ರವಲ್ಲ. ಇದು ನಮ್ಮ ಜೀವಗೋಳದ ಮೂಲಭೂತ ಕಾರ್ಯನಿರ್ವಹಣೆಯನ್ನು ನಡೆಸುತ್ತದೆ.
ಬ್ಯಾಕ್ಟೀರಿಯಾಗಳು ಕಾರ್ಬನ್ , ಸಾರಜನಕ ಮತ್ತು ಗಂಧಕಗಳನ್ನು ಮರುಬಳಕೆ ಮಾಡುವ ಮೂಲಕ ಭೂಮಿಯ ವಾತಾವರಣವನ್ನು ನಿಯಂತ್ರಿಸುತ್ತವೆ. ಬ್ಯಾಕ್ಟೀರಿಯಾಗಳ ವಿಘಟನೆಯ ಕ್ರಿಯೆಯಿಲ್ಲದಿದ್ದರೆ, ಭೂಮಿಯ ಮೇಲಿನ ಪೋಷಕಾಂಶಗಳ ಹರಿವು ಕೆಲವೇ ವಾರಗಳಲ್ಲಿನಿಂತುಹೋಗುತ್ತದೆ.
ಜಾಗತಿಕ ಬ್ಯಾಕ್ಟೀರಿಯಾಗಳ ಜೈವಿಕ ರಾಶಿಯ ಹೆಚ್ಚಿನ ಭಾಗವು ಸಾಗರದ ತಳದ ಮೈಲುಗಳಷ್ಟು ಆಳದಲ್ಲಿಮತ್ತು ಭೂಮಿಯ ಬಂಡೆಗಳ ಪದರಗಳಲ್ಲಿಸೂರ್ಯನ ಬೆಳಕೇ ಇಲ್ಲದೆ, ವಿಪರೀತ ಶಾಖ ಮತ್ತು ಒತ್ತಡದಲ್ಲಿಯೂ ಜೀವಿಸುತ್ತವೆ.
ಮಾನವ ದೇಹವು ಟ್ರಿಲಿಯನ್ ಸಂಖ್ಯೆಯ ಬ್ಯಾಕ್ಟೀರಿಯಾ ಜೀವಕೋಶಗಳನ್ನು ಹೊಂದಿದೆ-ಇದು ಮಾನವ ಜೀವಕೋಶಗಳ ಸಂಖ್ಯೆಗೆ ಬಹುತೇಕ ಸಮಾನವಾಗಿದೆ. ಇವು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯಲ್ಲಿಪ್ರಮುಖ ಪಾತ್ರ ವಹಿಸುತ್ತವೆ.