ಹಿರ್ಗಾನ ಕೃಷ್ಣಬೆಟ್ಟು ದಿ. ಸುಂದರಿ ಚಾರಿಟೇಬಲ್ ಟ್ರಸ್ಟ್ , ಶ್ರೀನಾಥ್ ಶೆಟ್ಟಿ ವತಿಯಿಂದ 20ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಸಮಾರಂಭ ಶನಿವಾರ ನೆರವೇರಿತು.ಚಿಕ್ಕಲ್ ಬೆಟ್ಟು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಶ್ರೀನಾಥ್ ಶೆಟ್ಟಿ ಅವರು ಸತತ 19 ವರ್ಷಗಳಿಂದ ಪ್ರೋತ್ಸಾಹ ಧನ ನೀಡುತ್ತಾ ಬಂದಿದ್ದಾರೆ. ಪ್ರೌಢಶಾಲೆ ಮತ್ತು ಪಿ.ಯು.ಸಿ ತರಗತಿಯಲ್ಲಿಉನ್ನತ ಶ್ರೇಣಿಯಲ್ಲಿಅಂಕ ಪಡೆದವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಶ್ರೀನಾಥ್ ಶೆಟ್ಟಿ ಅವರ ಸಹೋದರ ಹಿರ್ಗಾನ ಗ್ರಾ.ಪಂ. ಮಾಜಿ ತಾರಾನಾಥ ಶೆಟ್ಟಿ ವಿತರಿಸಿದರು. ವಿದ್ಯಾರ್ಥಿಗಳು , ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಪ್ರಭಾರ ಮಖ್ಯ ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿ ಆಶಾ ವಂದಿಸಿದರು.
ಫೊಟೋಕ್ಯಾಪ್ಶನ್ -ಚಿಕ್ಕಲ್ ಬೆಟ್ಟು ಸ.ಹಿ.ಪ್ರಾ. ಶಾಲೆಯಲ್ಲಿವಿದ್ಯಾರ್ಥಿವೇತನ ವಿತರಣೆ ಜರುಗಿತು.