ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾದಾಗ ಗ್ರಾಮಗಳ ಸಂಪರ್ಕದಿಂದ ಜನರ ಜೀವನ ಮಟ್ಟವು ಸುಧಾರಣೆಯಾಗುತ್ತದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.ಶಾಸಕರ ಶಿಫಾರಸಿನ ಮೇರೆಗೆ 50 ಲಕ್ಷ ರೂ. ಅನುದಾನದ ಚೇರ್ಕಾಡಿ ಗ್ರಾ.ಪಂ. ವ್ಯಾಪ್ತಿಯ, ಪೇತ್ರಿ- ಗುಂಡಾರಿ ಕಲ್ಲುಮಡಿ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ತನ್ನ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ ಮಾಡುವುದರ ಜತೆಗೆ ಶಿಕ್ಷಣ ಆರೋಗ್ಯ ಮತ್ತು ಶಾಂತಿ ಸಹ ಬಾಳ್ವೆಗೆ ಹೆಚ್ಚು ಒತ್ತು ನೀಡುವುದೇ ಜನಪ್ರತಿನಿಧಿಯ ಜವಾಬ್ದಾರಿ ಎಂದರು.