ಪೇಜ್ 4 ಸುದ್ದಿಗಳು

Contributed by: dheeraj.d@timesofindia.com|Vijaya Karnataka•
kannada rajyotsava cultural festival celebrated at bailuru school
ಕನ್ನಡದ ಬದುಕಿನ ಅವಿಭಾಜ್ಯ ಅಂಗ

ವಿಜಯಪುರ ನಗರದ ಶಾರದಾ ಪಬ್ಲಿಕ್ ಶಾಲೆಯಲ್ಲಿಕನ್ನಡ ರಾಜ್ಯೋತ್ಸವವನ್ನು ಸಂಭ್ರಮ-ಸಡಗರ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಕನ್ನಡ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ಕನ್ನಡ ಭಾಷೆಯ ಮಹತ್ವ, ಕರ್ನಾಟಕದ ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಮನಮುಟ್ಟುವಂತೆ ವಿವರಿಸಿದರು.

ಕನ್ನಡ ಕೇವಲ ಸಂವಹನದ ಭಾಷೆಯಲ್ಲ; ಅದು ನಮ್ಮನಾಡು, ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾತೃಭಾಷೆಯಲ್ಲಿಶಿಕ್ಷಣ ದೊರೆಯುವುದು ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರು ಕನ್ನಡವನ್ನು ಪ್ರೀತಿಸಿ, ಗೌರವಿಸಿ, ದಿನನಿತ್ಯದ ಬದುಕಿನಲ್ಲಿಬಳಸಬೇಕು ಎಂದು ಕರೆ ನೀಡುತ್ತಾ, 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ಪುನರ್ ರಚನೆಯ ಮೂಲಕ ಕನ್ನಡ ಮಾತನಾಡುವ ಪ್ರದೇಶಗಳು ಒಂದಾಗಿ ಕರ್ನಾಟಕ ಏಕೀಕರಣಗೊಂಡ ಐತಿಹಾಸಿಕ ಕ್ಷಣವನ್ನು ನೆನಪಿಸಿಕೊಂಡರು.

ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ವಿಜಯನಗರದ ಅರಸರು ಕನ್ನಡ ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ನೆನೆದು, ಕುವೆಂಪು ಅವರ ವಿಶ್ವಮಾನವ ಸಂದೇಶ, ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸಿದರು.

ಶಾಲೆಯ ಅಧ್ಯಕ್ಷ ಸಂಗನಬಸಪ್ಪ ಸಜ್ಜನರವರು ಮಾತನಾಡಿ, ‘ಮಕ್ಕಳು ಕನ್ನಡವನ್ನು ಪ್ರೀತಿಸಬೇಕು, ಸ್ಪಷ್ಟವಾಗಿ ಮಾತನಾಡಬೇಕು. ಕನ್ನಡ ಸಾಹಿತ್ಯವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅದೇ ಸಂದರ್ಭದಲ್ಲಿಇತರ ಭಾಷೆಗಳನ್ನೂ ಗೌರವಿಸಬೇಕು. ನಮ್ಮನಾಡು, ನುಡಿ, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ಜಿಮೇಶ್ ಪೌಲ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿಸಂಚರಿಸಿದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಭಾರತದ ನಿಜವಾದ ಶಕ್ತಿ ‘ವೈವಿಧ್ಯತೆಯಲ್ಲಿಏಕತೆ’ ಎಂಬುವುದರಲ್ಲಿಅಡಗಿದೆ ಎಂದರು.

ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಮಹತ್ವ ಸಾರುವ ಸಂಗೀತ ಆಕರ್ಷಕ ನೃತ್ಯ, ವಚನ ವಾಚನ ಮತ್ತು ಸ್ವರಚಿತ ಕವನ ವಾಚನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಪುಟಾಣಿಗಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಕನ್ನಡಾಭಿಮಾನ, ಆತ್ಮವಿಶ್ವಾಸ ಹಾಗೂ ಕಲಾತ್ಮಕ ಪ್ರದರ್ಶನಗಳು ನೆರೆದಿದ್ದವರ ಮನಸೂರೆಗೊಂಡವು.

ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿಯರಾದ ವರ್ಷಾ, ಮಾನಸಿ, ಸಮೀಕ್ಷಾ ಮತ್ತು ತೇಜಸ್ವಿನಿ ನಿರೂಪಿಸಿದರೆ, ಅದಿತಿ ಸ್ವಾಗತಿಸಿದಳು. ಜನನಿ ವಂದಿಸಿದಳು.

ಫೋಟೊ: ಶಾರದಾ

= = =

ಫೋಟೊ ಕ್ಯಾಪ್ಶನ್

ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ71ನೇ ಕನ್ನಡ ಹಬ್ಬಕ್ಕೆ ನಾಡಗೀತೆ, ರೈತಗೀತೆ ಹಾಡುತ್ತಾ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಶಾಲಾ ಆಡಳಿತಾಧಿಕಾರಿಗಳಾದ ನಾಗರಾಜು ಕೆ.ಎಂ. ಮತ್ತು ಪ್ರಾಂಶುಪಾಲರಾದ ಕ್ರಿಸ್ಟೀನಾ ಎಸ್ . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಶಿಕ್ಷಕರಾದ ಸತೀಶ್ ರವರು ಮಾತನಾಡಿ, ಕನ್ನಡ ನಾಡಿನ ಇತಿಹಾಸ, ಕನ್ನಡ ನಾಡು-ನುಡಿ, ಸಂಸ್ಕೃತಿ, ಕನ್ನಡ ಭಾಷೆ ಬೆಳೆದು ಬಂದ ಹಿನ್ನೆಲೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿಶಾಲಾ ವಿದ್ಯಾರ್ಥಿಗಳು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಫೋಟೊ: ಎಲೈಟ್

= = =

ಮಕ್ಕಳ ಮೇಲೆ ನಿಗಾ ಇರಲಿ

ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಅತಿ ಮುಖ್ಯವಾದ ಹಂತವಾಗಿದ್ದು ಶಿಕ್ಷಕರ ಜೊತೆ ಪಾಲಕರೂ ನಿಗಾ ವಹಿಸಬೇಕು ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

ಕುಂಬಾರಹಳ್ಳದ ಪಿ.ಎಂ. ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿನಡೆದ ಸಮುದಾಯದತ್ತ ಶಾಲೆ ಮತ್ತು ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಕ್ಕಳಿಗೆ ಸರಕಾರ ಮತ್ತು ಪಾಲಕರು ಎಲ್ಲಾಸೌಲಭ್ಯ ಒದಗಿಸುವುದರ ಜೊತೆಗೆ ಅವರ ಕಾಳಜಿಯನ್ನು ಮಾಡಬೇಕು’ ಎಂದರು.

ತರಗತಿ ಶಿಕ್ಷಕಿ ಸವಿತಾ ಬೆನಕಟ್ಟಿ, ಶಿಕ್ಷಕ ಸಂಗನಬಸವ ಉಟಗಿ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ ಮಾತನಾಡಿದರು. ಅರ್ಧವಾರ್ಷಿಕ ಪರೀಕ್ಷೆಯಲ್ಲಿಹತ್ತನೆಯ ವರ್ಗದ ಎ ಮತ್ತು ಬಿ ವರ್ಗದಲ್ಲಿಪ್ರಥಮ, ದ್ವಿತೀಯಾ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ಕೊಟ್ಟು ಉತ್ತೇಜನ ನೀಡಲಾಯಿತು. ಎಸ್ ಡಿಎಂಸಿ ಸದಸ್ಯರಾದ ಹಣಮಂತ ಮರನೂರ, ಅಲ್ಲಾಸಾಬ್ ನದಾಫ, ಪದ್ಮವ್ವಾ ಹುದಲಿ, ಶೈಲಾ ಮಾಳಿ, ಶಿಕ್ಷಕರಾದ ಅಶೋಕ ಬಿರಾದಾರ ಪಾಟೀಲ, ಚಂದ್ರಕಾಂತ ಪೋಲೀಸ್ , ಶ್ರೀಮತಿ ಮಂಜುಳಾ ಕಡಕೋಳ, ಆಸೀಫಾಭಾನು ಮೋಮಿನ್ , ಶಕುಂತಲಾ ಬಿರಾದಾರ, ಸಗರೆಪ್ಪ ಸೊನ್ನದ, ಸೌಜನ್ಯಾ ಬಾಳಿಗಿಡದ, ಕರೆಪ್ಪ ವಾಜಂತ್ರಿ ಉಪಸ್ಥಿತರಿದ್ದರು.

ಸಹನಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಾರದಾ ಮಠ ಕಾರ್ಯಕ್ರಮ ನಿರೂಪಿಸಿದರು.

ಫೊಟೊ: ಸಮುದಾಯ