ಬಾರ್ಕೂರಿನಲ್ಲಿಸರ್ವ ಧರ್ಮ ಸಮನ್ವಯತೆ ಮೆರೆದ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್

Contributed by: mohanudapa@gmail.com|Vijaya Karnataka•
minister rizwan arshads visit for communal harmony in barkur
ದೇಗುಲ, ಚರ್ಚ್, ಮಸೀದಿಗೆ ಉಸ್ತುವಾರಿ ಸಚಿವರ ಭೇಟಿ

ವಿಕ ಸುದ್ದಿಲೋಕ ಬ್ರಹ್ಮಾವರ
ಉಡುಪಿ ಜಿಲ್ಲಾಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಬಾರಕೂರು ಕೋಟೆಕೇರಿ ಪುರಾತನ ಕತ್ತಲೆ ಬಸದಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಇತಿಹಾಸ ಪ್ರಸಿದ್ಧ ಪುರಾತನ ಮಾಲೀಕ್ ದಿನಾರ್ ಜುಮ್ಮಾ ಮಸೀದಿ, ಸೈಂಟ್ ಪೀಟರ್ ಚರ್ಚ್ಗೆ ಭಾನುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಇಂತಹ ಐತಿಹಾಸಿಕ ಸ್ಥಳಗಳನ್ನು ನೋಡಲು ಮತ್ತು ಅವುಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಉಸ್ತುವಾರಿ ಸಚಿವನಾಗಿ ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಕತ್ತಲೆ ಬಸದಿ, ಮಣ್ಣಿನ ಅರಮನೆಯಂತಹ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಮತ್ತು ಉತ್ಖನನ ಮಾಡುವ ಮೊದಲು, ಅವುಗಳನ್ನು ಪರಂಪರೆಯ ತಾಣಗಳೆಂದು ಗುರುತಿಸಬೇಕು. ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಲು ಕಾನೂನು ರಕ್ಷಣೆ ಅತ್ಯಗತ್ಯ. ಏಕೆಂದರೆ ಪಾರಂಪರಿಕ ತಾಣಗಳೆಂದು ಮಾನ್ಯತೆ ಲಭಿಸದೇ ಇದ್ದರೆ ಅವುಗಳನ್ನು ಕೆಡವಲು ಅಥವಾ ಅನಧಿಕೃತವಾಗಿ ಬದಲಾವಣೆ ಮಾಡಲು ಅವಕಾಶವಾಗುತ್ತದೆ ಎಂದರು.

ಹಿಂದಿನ ಸಚಿವರು ಅಭಿವೃದ್ಧಿಗಾಗಿ ಕೈಗೊಂಡ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದು ಸಮಗ್ರ ಅಭಿವೃದ್ಧಿಗೆ ಸರಕಾರದ ಮಟ್ಟದಲ್ಲಿಪ್ರಯತ್ನಪಡಲಾಗುವುದು.

ಜಿಲ್ಲೆಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿಎಲ್ಲಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಕರೆಯಲಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇನೆ. ನಿರ್ಲಕ್ಷ ಮಾಡುವುದಿಲ್ಲ. ಕೆಲಸ ಮಾಡಿದರೆ ನಮ್ಮ ಮನಸ್ಸಿಗೆ ನೆಮ್ಮದಿ ಇರುತ್ತೆ. ಜಾತಿ ಧರ್ಮ ಯಾವುದನ್ನು ನೋಡದೆ ಕೆಲಸ ಮಾಡುತ್ತಿದ್ದೇನೆ. ಸಾರ್ವಜನಿಕ ಜೀವನದಲ್ಲಿಹೊರಗೆ ಬಂದಾಗ ನಾವೆಲ್ಲಭಾರತೀಯರು ಎಂಬುದನ್ನು ಎಲ್ಲರೂ ನೆನೆಪಿಟ್ಟುಕೊಳ್ಳಬೇಕು. ಒಂದು ಸಮಾಜಕ್ಕೆ ಇನ್ನೊಂದು ಸಮಾಜ ಕೈ ಜೋಡಿಸಿ ಮುಂದುವರಿಯಬೇಕು. ಯಾವುದೇ ಜಾತಿ ಮತ ಭೇದವಿಲ್ಲದೇ, ರಾಜಕೀಯ ಇಲ್ಲದೇ ಹಿಂದಿನ ಸಂಸ್ಕೃತಿಯನ್ನು, ಪರಂಪರೆಯನ್ನು ಮತ್ತು ಮೌಲ್ಯಗಳನ್ನು ಇಲ್ಲಿನ ಜನರು ಉಳಿಸಿಕೊಂಡಿರುವುದು ಸಂತಸ ತಂದಿದೆ. ನಮ್ಮ ಪೂರ್ವಜರು ಉಳಿಸಿಕೊಂಡಿರುವ ಪ್ರೀತಿ ಬಾಂಧವ್ಯ ನಾವು ಕೂಡ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.

ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಸಚಿವರಿಗೆ ಮನವಿ ನೀಡಿ, ಮಾತನಾಡಿ, ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಎಲ್ಲಾನಾಯಕರನ್ನು ಈ ಭಾಗಕ್ಕೆ ಕರೆಸಿದ್ದೇವೆ. ಎಲ್ಲರೊಂದಾಗಿ ಬಾರಕೂರಿನ ಅಭಿವೃದ್ಧಿ ಮಾಡಬೇಕೆಂದು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ , ಜುಮ್ಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಮುಬಾರಕ್ , ಚರ್ಚಿನ ಧರ್ಮಗುರುಗಳಾದ ರೇನೊಲ್ಡ್ ಮಿರಾಂಡ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಸಹಾಯಕ ಅರಣ್ಯ ಅಧಿಕಾರಿ ಶಶಿಕಾಂತ್ , ಪಂಚಲಿಂಗೇಶ್ವರ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷ ಕೆ.ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಉಪಸ್ಥಿತರಿದ್ದರು.

ರಾಮಚಂದ್ರ ನಾಯಕ್ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ವಂದಿಸಿದರು.

ಪೋಟೋಫೈಲ್ 02ಎಮ್ ಎಮ್ ಬಾರ್ಕೂರು

ಫೋಟೋಕ್ಯಾಪ್ಷನ್ ಉಡುಪಿ ಜಿಲ್ಲಾಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಬಾರಕೂರಿಗೆ ಭೇಟಿ ನೀಡಿದರು.